ವಾರಕ್ಕೆ ೩ ದಿನ ಕೊಬ್ಬರಿ ಹರಾಜು

KannadaprabhaNewsNetwork |  
Published : Oct 02, 2024, 01:14 AM IST
ತಿಪಟೂರು : ಕೊಬ್ಬರಿ ಮಾರುಕಟ್ಟೆಯಲ್ಲಿ ವಾರಕ್ಕೆ ೨ ದಿನದ ಬದಲು ೩ ದಿನ ಕೊಬ್ಬರಿ ಹರಾಜು | Kannada Prabha

ಸಾರಾಂಶ

ತಿಪಟೂರು: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೊಬ್ಬರಿ ಬೆಳೆಗಾರರ ಹಾಗೂ ರೈತರ ಅನುಕೂಲಕ್ಕಾಗಿ ಹೊಸ ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದು ಇದಕ್ಕಾಗಿ ರೈತರು, ರೈತ ಸಂಘಟನೆಗಳ ಮುಖಂಡರುಗಳು ಮತ್ತು ವರ್ತಕರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ತಿಪಟೂರು: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೊಬ್ಬರಿ ಬೆಳೆಗಾರರ ಹಾಗೂ ರೈತರ ಅನುಕೂಲಕ್ಕಾಗಿ ಹೊಸ ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದು ಇದಕ್ಕಾಗಿ ರೈತರು, ರೈತ ಸಂಘಟನೆಗಳ ಮುಖಂಡರುಗಳು ಮತ್ತು ವರ್ತಕರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ಎಪಿಎಂಸಿ ಭವನದಲ್ಲಿ ರೈತರು, ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ವರ್ತಕರ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ನಾನು ರೈತನಾಗಿ, ವರ್ತಕನಾಗಿ, ರವಾನೆದಾರನಾಗಿ ಕೊಬ್ಬರಿ ಬೆಳೆಗಾರರ ಕಷ್ಟ-ನೋವುಗಳನ್ನು ಅನುಭವಿಸುತ್ತಾ ಬಂದಿರುವ ರಾಜಕಾರಣಿಯಾಗಿದ್ದೇನೆ. ತಿಪಟೂರು ಕೊಬ್ಬರಿ ಮಾರುಕಟ್ಟೆಯು ಏಷ್ಯಾದಲ್ಲಿಯೇ ಕೊಬ್ಬರಿಗೆ ಪ್ರಸಿದ್ದಿ ಹೊಂದಿದ್ದು ಈ ಭಾಗದ ಜಿಲ್ಲೆಗಳ ಪ್ರಮುಖ ಬೆಳೆಯಾಗಿಯೂ ಇದೆ. ಇಂತಹ ಮಾರುಕಟ್ಟೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಅತಂತ್ರ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಕ್ರಮಗಳನ್ನು ತಂದು ಮಾರುಕಟ್ಟೆಯಲ್ಲಿ ಸುಧಾರಣೆ ತಂದು ರೈತರಿಗೆ ಉತ್ತಮ ಲಾಭ ಮಾಡಿಕೊಡಬೇಕಿರುವುದರಿಂದ ಸಭೆಯಲ್ಲಿರುವ ರೈತರು, ಮುಖಂಡರುಗಳು ಉತ್ತಮ ಸಲಹೆ, ಸಹಕಾರ ನೀಡಬೇಕೆಂದು ತಿಳಿಸಿದರು. ಸಭೆಯಲ್ಲಿ ನೀಡಿದ ಸಲಹೆಗಳು : ಮಾರುಕಟ್ಟೆಯ ಪ್ರಾಂಗಣಕ್ಕೆ ಹಾಜರಾಗುವ ಎಲ್ಲಾ ರೈತರು ಎಪಿಎಂಸಿ ಮಾರುಕಟ್ಟೆ ಮುಖ್ಯದ್ವಾರದಲ್ಲಿ ಕೊಬ್ಬರಿ ದಾಸ್ತಾನುವನ್ನು ಕಂಪ್ಯೂಟರೀಕರಣದ ನೊಂದಾಣಿ ಕಡ್ಡಾಯವಾಗಿರುತ್ತದೆ. ಟೆಂಡರ್ ಸಮಯವು ಮಧ್ಯಾಹ್ನ ೨ ಗಂಟೆಯ ಬದಲಾಗಿ ಮಧ್ಯಾಹ್ನ ೩ಗಂಟೆಗೆ ಘೋಷಣೆ ಮಾಡುವುದು. ಕೊಬ್ಬರಿ ಟೆಂಡರ್ ಪ್ರತಿ ಬುಧವಾರ ಮತ್ತು ಶನಿವಾರಗಳ ಬದಲಾಗಿ, ವಾರಕ್ಕೆ ಮೂರು ದಿನ ಅಂದರೆ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಕೊಬ್ಬರಿಯ ಆನ್‌ಲೈನ್ ಟೆಂಡರ್ ಮಾಡುವುದು. ಉಳಿದ ದಿನ ಟೆಂಡರ್ ಇರುವುದಿಲ್ಲ. ಎಲ್ಲ ದಲ್ಲಾಲರು ತಮ್ಮ ತಮ್ಮ ಅಂಗಡಿಗಳಲ್ಲಿ ಘೋಷಣೆಯಾಗುವ ಅತೀ ಹೆಚ್ಚಿನ ಟೆಂಡರ್ ಧಾರಣಿಯನ್ನು ರೈತರಿಗೆ ಪಾವತಿಸುವುದು. ದಲ್ಲಾಲರು ತಮ್ಮ ತಮ್ಮ ಅಂಗಡಿಗೆ ಟೆಂಡರ್ ನಮೂದಿಸುವಂತೆ ಹೆಚ್ಚಿನ ಸಂಖ್ಯೆಯ ಖರೀದಿದಾರರನ್ನು ಉತ್ತೇಜಿಸುವುದು ಸೇರಿದಂತೆ ಕಮೀಷನ್ ಹೆಸರಿನಲ್ಲಿ ರೈತರಿಗೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ದೂರುಗಳು ಬಂದಲ್ಲಿ ಕಠಿಣ ಕ್ರಮ ಜರುಗಿಸಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ ಡಿವೈಎಸ್‌ಪಿ ವಿನಾಯಕ್ ಶೆಟಗೇರಿ, ಕೃಷಿ ಮಾರಾಟ ಇಲಾಖೆಯ ಹೆಚ್ಚುವರಿ ನಿರ್ದೇಶಕ ವಿ ರಾಜಣ್ಣ. ಹಾಸನ ಉಪ ನಿರ್ದೇಶಕ ಶ್ರೀಹರಿ, ಚಿತ್ರದುರ್ಗದ ಉಪನಿರ್ದೇಶಕ ಎಂ.ಕೃಷ್ಣಪ್ಪ, ರೇವತಿಸಿಂಗ್‌, ನ್ಯಾಮೆಗೌಡ, ಹನುಮಂತರಾಜು, ತುರುವೇಕೆರೆ, ಹೊಸದುರ್ಗ, ಗುಬ್ಬಿ, ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕಿನ ಎಪಿಎಂಸಿಯ ಕಾರ್ಯದರ್ಶಿಗಳು ಹಾಗೂ ತಾಲೂಕಿನ ರೈತರು, ಹಾಗೂ ಜಿಲ್ಲಾ ಮತ್ತು ಸ್ಥಳೀಯ ರೈತ ಮುಖಂಡರು ಹಾಜರಿದ್ದರು.ಹರಾಜು ದಿನ ಬದಲಾವಣೆ

ಎಪಿಎಂಸಿ ಪ್ರಾಂಗಣದಲ್ಲಿ ನಡೆದ ರೈತರು, ವರ್ತಕರು, ರವಾನೆದಾರರ ಸಭೆಯಲ್ಲಿ ಹರಾಜು ನಡೆಯುವ ದಿನಗಳನ್ನು ಬುಧವಾರ ಮತ್ತು ಶನಿವಾರದ ಬದಲಿಗೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ನಡೆಸಲು ನಿರ್ಣಯಿಸಲಾಗಿದೆ. ವರ್ತಕರು ಹಾಗೂ ರವಾನೆದಾರರ ಜೊತೆ ಮತ್ತೊಂದು ಸಭೆ ನಡೆಸಿ ಜಾರಿಗೆ ಕೈಗೊಳ್ಳಬೇಕಾಗಿರುವ ಕಾನೂನು ಕ್ರಮಗಳನ್ನು ಅನುಸರಿಸಿದ ನಂತರ ಜಾರಿ ದಿನವನ್ನು ತಿಳಿಸಲಾಗುವುದು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?