
ಕನ್ನಡಪ್ರಭ ವಾರ್ತೆ ಮಡಿಕೇರಿ
54 ಮಳಿಗೆಗಳಲ್ಲಿ ಕಾಫಿ ಬೋರ್ಡ್, ಕಾಫಿ ಬೆಳೆಗಾರರ ಸಂಘ, ಕೃಷಿ ಇಲಾಖೆ ಸೇರಿದಂತೆ ವಿವಿಧ ಕಾಫಿ ತಯಾರಿಕಾ ಮಳಿಗೆಗಳು, ಕೆಫಿಗಳ ಪ್ರದಶ೯ನ ಮತ್ತು ಮಾರಾಟವಿದ್ದು, ಎಲ್ಲಾ ಮಳಿಗೆಗಳಿಗೆ ಶಾಸಕರು ತೆರಳಿ ಮಾಹಿತಿ ಪಡೆದರು.
ನಂತರ ಮಾತನಾಡಿದ ಅವರು, ಕೊಡಗಿನಲ್ಲಿ ಕಾಫಿ ದಸರಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದ್ದು, ಕಾಫಿ ಬೆಳೆಗಾರರ ಮತ್ತು ರೈತರ ಅಭಿವೃದ್ಧಿಗೆ ಹಾಗೂ ಅವರ ಕೃಷಿ ಪದ್ಧತಿಯನ್ನು ಮತ್ತಷ್ಟು ಸುಧಾರಿಸಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.ಕಾಫಿ ದಸರಾ ಮುಖಾಂತರ ಬೆಳೆಗಾರರ ಮತ್ತು ಕಾಫಿ ಕ್ಷೇತ್ರದಲ್ಲಿ ತೊಡಗಿರುವ ಪ್ರಮುಖರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳೆಗಾರರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲು ವಿಶೇಷ ಸಂವಾದ ಮತ್ತು ತರಬೇತಿ ಅಧಿವೇಶನಗಳನ್ನು ಏರ್ಪಡಿಸಲಾಗಿದೆ.
ಈ ಬಾರಿಯ ಕಾಫಿ ದಸರೆಯಲ್ಲಿ ಸುಮಾರು 55ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಿದ್ದು, ಕಾಫಿ ಬೋರ್ಡ್ ಸೇರಿದಂತೆ ವಿವಿಧ ಪ್ರಮುಖ ಅಂಗಡಿಗಳು ಪಾಲ್ಗೊಂಡಿವೆ. ಕಾಫಿ ದಸರೆಯನ್ನು ಮತ್ತಷ್ಟು ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು ಹೋಗಲಾಗುವುದು. ಬುಧವಾರ (ಅ.14) ನಡೆಯುವ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಹೆಚ್ಚು ಸಂಖ್ಯೆಯಲ್ಲಿ ರೈತರು ಹಾಗೂ ಕಾಫಿ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭ ಮಾತನಾಡಿದ ಶಾಸಕ ಮಂತರ್ ಅವರು, ಮಡಿಕೇರಿ ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸಲ್ಲಿಸುತ್ತಿರುವ ನಿರಂತರ ಸೇವೆಗೆ ಬೆಲೆ ಕಟ್ಟಲಾಗದು ಎಂದು ಪ್ರಶಂಸಿಸಿದರು.
ಪೌರ ಕಾರ್ಮಿಕರು ವರ್ಷದ 365 ದಿನವೂ ಅವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುತ್ತಾರೆ. ಅವರ ಮೇಲಿನ ಕೆಲಸದ ಭಾರವನ್ನು ಕಡಿಮೆ ಮಾಡಲು ನಮ್ಮ ಮನೆಯಿಂದಲೇ ಸ್ವಚ್ಛತೆ ಆರಂಭವಾಗಬೇಕು ಎಂದರು.
21ರಂದು ದಸರಾ ಮುಕ್ತಾಯಗೊಳ್ಳಲಿದ್ದು, ಅ.22ರಂದು ಸಮಿತಿಯ ಸದಸ್ಯರು ಹಾಗೂ ವಿವಿಧ ಸಂಘಟನೆಗಳು ಎಲ್ಲರೂ ಸೇರಿಕೊಂಡು ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.