ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಸಂಘ ಪುರಸ್ಕರಿಸಲಿ

KannadaprabhaNewsNetwork |  
Published : Oct 14, 2026, 02:15 AM IST
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಸಂಚಾಲಕ ಸೋಮಣ್ಣ ಡಾಣಗಲ್, ಮುಖಂಡರಾದ ಚನ್ನಪ್ಪ ಜಗಲಿ, ಸುನೀಲ ಮಹಾಂತಶೆಟ್ಟರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು. | Kannada Prabha

ಸಾರಾಂಶ

ತಾಲೂಕಿನ ಪಂಚಮಸಾಲಿ ಸಮಾಜದ ಹಿರಿಯರ ನೇತೃತ್ವದಲ್ಲಿ ಅ.9ರಂದು ನಡೆದ ಸಭೆಯಲ್ಲಿ ಹಿರಿಯರ ತೀರ್ಮಾನದಂತೆ ರಚಿತವಾದ ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಸಂಘ ಪುರಸ್ಕರಿಸಲೇಬೇಕು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ತಾಲೂಕಿನ ಪಂಚಮಸಾಲಿ ಸಮಾಜದ ಹಿರಿಯರ ನೇತೃತ್ವದಲ್ಲಿ ಅ.9ರಂದು ನಡೆದ ಸಭೆಯಲ್ಲಿ ಹಿರಿಯರ ತೀರ್ಮಾನದಂತೆ ರಚಿತವಾದ ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಸಂಘ ಪುರಸ್ಕರಿಸಲೇಬೇಕು ಎಂದು ಸಂಘದ ರಾಜ್ಯ ಸಂಚಾಲಕ ಸೋಮಣ್ಣ ಡಾಣಗಲ್, ಮುಖಂಡರಾದ ಚನ್ನಪ್ಪ ಜಗಲಿ ಆಗ್ರಹಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ದಶಕಗಳಿಂದ ಪ್ರತಿ 5 ವರ್ಷಕ್ಕೊಮ್ಮೆ ಲಕ್ಷ್ಮೇಶ್ವರ ತಾಲೂಕಿನ ಪಂಚಮಸಾಲಿ ಸಮಾಜದ ಹಿರಿಯರೆಲ್ಲ ಸೇರಿ ಆಯ್ಕೆ ಮಾಡಿಕೊಟ್ಟ ತಾಲೂಕು ಘಟಕದ ಪದಾಧಿಕಾರಿಗಳ ಪಟ್ಟಿಯನ್ನೇ ರಾಜ್ಯ ಸಂಘ ಪುರಸ್ಕರಿಸುತ್ತಾ ಬಂದಿದೆ. ಈ ಹಿನ್ನೆಲೆ ಸಮಾಜದ ಅಧ್ಯಕ್ಷರಾಗಿರುವ ಮಂಜುನಾಥ ಮಾಗಡಿ ಅವರ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಅ.9ರಂದು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮತ್ತು ಸಮಾಜದ ಮಾಜಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಸೇರಿ ಅನೇಕ ಹಿರಿಯರ ನೇತೃತ್ವದಲ್ಲಿ ನೂತನ ತಾಲೂಕು ಅಧ್ಯಕ್ಷರಾಗಿ ಶಂಕರ ಎಂ.ರಾಗಿ ಮತ್ತು ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗಿತ್ತು. ಆದರೆ ಅ. 11ರಂದು ಪಂಚಮಸಾಲಿ ಸಂಘದ ರಾಜ್ಯ ಪ್ರ. ಕಾಯದರ್ಶಿ ಪರಮೇಶ ಪಟ್ಟಣಶೆಟ್ಟಿ ರಾಜ್ಯಾಧ್ಯಕ್ಷರ ನಿರ್ದೇಶನದಂತೆ ತಾಲೂಕಿನ ಹಿರಿಯರು ಮಾಡಿದ್ದ ಈ ಅಯ್ಕೆಯನ್ನು ಅಸಿಂಧು ಎಂದು ಪತ್ರಿಕಾ ಪ್ರಕಟಣೆ ನೀಡಿದೆ.

ಈ ಪ್ರಕಟಣೆ ಸಮಾಜದ ಶ್ರೇಯೋಭಿವೃದ್ದಿಗಾಗಿ ಹಿರಿಯರು ಕೈಗೊಂಡ ತೀರ್ಮಾನಕ್ಕೆ ಮತ್ತು ಹಿರಿಯರ ಭಾವನೆಗೆ ಧಕ್ಕೆನ್ನುಂಟುಮಾಡಿದೆ. ಆದ್ದರಿಂದ ರಾಜ್ಯ ಸಂಘ ತಾಲೂಕಿನ ಹಿರಿಯರ ಕ್ಷಮೆ ಕೇಳಬೇಕು. ಸಂಘಕ್ಕಿಂತ ಸಮಾಜ ಮುಖ್ಯವಾಗಿದ್ದು ಸಮಾಜವಿದ್ದಲ್ಲಿ ಮಾತ್ರ ಸಂಘಕ್ಕೆ ಬೆಲೆ. ಈ ಹಿನ್ನಲೆ ಹಿರಿಯರು ಕೈಗೊಂಡ ತೀರ್ಮಾನವನ್ನು ರಾಜ್ಯ ಸಂಘ ಪುರಸ್ಕರಿಸಬೇಕು. ರಾಜ್ಯ ಸಂಘ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಬದಲಾಗಿ ಸಮಾಜ ಒಡೆಯುವ ಕೆಲಸ ಬೇಡ. ನಮ್ಮ ತಾಲೂಕಿನಲ್ಲಿ ಸಮಾಜದ ಹಿರಿಯರೆಲ್ಲ ಕೈಗೊಂಡ ತೀರ್ಮಾನವೇ ಅಂತಿಮವಾಗಿರುತ್ತದೆ. ಸಂಘದ ಹೊರತಾಗಿಯೂ ತಾಲೂಕಿನಲ್ಲಿ ಸಮಾಜ ಸಂಘಟಿಸುವ ಶಕ್ತಿ ಹಿರಿಯರಿಗಿದೆ. ಇನ್ನು ಮುಂದೆ 5 ವರ್ಷಗಳವರೆಗೆ ತಾಲೂಕಿನಲ್ಲಿ ನಡೆಯುವ ಸಮಾಜದ ಎಲ್ಲ ಕಾರ್ಯ ಚಟುವಟಿಕೆಗಳು ನೂತನ ಅಧ್ಯಕ್ಷ ಶಂಕರ ರಾಗಿ ಅಧ್ಯಕ್ಷತೆಯಲ್ಲಿಯೇ ನಡೆಯುತ್ತವೆ. ಅಲ್ಲದೇ ನ.21ರಂದು ಲಕ್ಷ್ಮೇಶ್ವರದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಾಜಿಯ ಜಯಂತ್ಯುತ್ಸವ, ವಿಜಯೋತ್ಸವ ಶಂಕರ ರಾಗಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿಯೇ ನಡೆಯಲಿದೆ. ಅಂದು ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಮಠಾಧೀಶರು, ಸಮಾಜದ ರಾಜ್ಯ ಮಟ್ಟದ ನಾಯಕರು, ರಾಜಕಾರಣಿಗಳು, ಹಿರಿಯರು ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಸಮಾಜ ಬಾಂಧವರೆಲ್ಲರೂ ಪಾಲ್ಗೊಳ್ಳಲಿದ್ದಾರೆ ಎಂದರು.

ಈ ವೇಳೆ ಸಮಾಜದ ಮುಖಂಡರಾದ ಸುನೀಲ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ರಮೇಶ ದನದಮನಿ, ಶಿವಾನಂದ ದೇಸಾಯಿ, ಮಂಜುನಾಥ ಹೊಗೆಸೊಪ್ಪಿನ, ಅಶೋಕ ಪಾಟೀಲ, ದೇವಣ್ಣ ತೋಟದ, ವಿರುಪಾಕ್ಷಪ್ಪ ಆದಿ, ರಮೇಶ ಹಾಳದೋಟದ, ರುದ್ರಪ್ಪ ಉಮಚಗಿ, ಗಂಗಾಧರ ಮೆಣಸಿನಕಾಯಿ, ಶರಣು ಗೋಡಿ, ಶಿವಪ್ಪ ಕಟಗಿ, ಶಿವಾನಂದ ಮೆಕ್ಕಿ, ಷಣ್ಮುಕಪ್ಪ ಗೋಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ: ವೈಭವದ ಶರನ್ನವರಾತ್ರಿ
ಕಾಫಿ ಬೆಳೆಗಾರ, ಕೃಷಿ ಸುಧಾರಣೆಗೆ ಒತ್ತು: ಡಾ. ಮಂತರ್ ್ಗೌಡ