ಎಷ್ಟೇ ಎತ್ತರಕ್ಕೇರಿದರೂ ಕಲಿತ ಶಾಲೆ ಮರೆಯಬಾರದು: ವಿಜಯ ಹೆಗಡೆ

KannadaprabhaNewsNetwork |  
Published : Oct 14, 2026, 02:15 AM IST
ಮಾಳ್ಕೋಡಿನ  ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ, ಎಸ್.ಡಿ.ಎಂ.ಸಿ., ಹಳೆ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಮಾವೇಶ, ಅಭಿನಂದನಾ ಕಾರ್ಯಕ್ರಮ “ಹಳೆ ವಿದ್ಯಾರ್ಥಿಗಳ ಮಹಾಸಂಗಮ” ಕಾರ್ಯಕ್ರಮವನ್ನು ಮಾಲೀನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಪರಿಸರ ಅಧಿಕಾರಿ ವಿಜಯ ಹೆಗಡೆ ಉದ್ಘಾಟಿಸಿದರು.  | Kannada Prabha

ಸಾರಾಂಶ

ಮಾಳಕೋಡು ಶಾಲೆಯಲ್ಲಿ ಕಲಿತ ಮಕ್ಕಳು ಬರೀ ಮೆಡಿಕಲ್‌, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಲ್ಲದೇ, ಯೋಗ, ಶಿಕ್ಷಣ, ಪತ್ರಿಕೋದ್ಯಮ, ಕೃಷಿ, ಹಣಕಾಸು, ಕಾನೂನು, ಸರ್ಕಾರಿ ಹಾಗೂ ಸರ್ಕಾರೇತರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಹೊನ್ನಾವರ: ಬಾಲ್ಯದಲ್ಲಿ ಕಲಿತ ಶಾಲೆಯತ್ತ ಉನ್ನತ ಹುದ್ದೆಯಲ್ಲಿದ್ದವರು ಮುಖ ಮಾಡುವಂತಾಗಬೇಕು. ಅಂದಾಗ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಉಳಿಯುವುದಕ್ಕೆ ಸಾಧ್ಯ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಪರಿಸರ ಅಧಿಕಾರಿ ವಿಜಯ ಹೆಗಡೆ ಹೇಳಿದರು.

ತಾಲೂಕಿನ ಮಾಳ್ಕೋಡಿನ ಕೆಳಗಿನ ಇಡಗುಂಜಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ, ಎಸ್ಡಿಎಂಸಿ, ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಶಾಲಾ ಆವಾರದಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಮಾವೇಶ, ಅಭಿನಂದನಾ ಕಾರ್ಯಕ್ರಮ ಹಳೆ ವಿದ್ಯಾರ್ಥಿಗಳ ಮಹಾಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿ ಕಲಿತ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರೌಢಿಮೆ ಮೆರೆದು, ಹೆಜ್ಜೆ ಗುರುತು ಮೂಡಿಸಿದ್ದಾರೆ. ಮಾಳಕೋಡು ಶಾಲೆಯಲ್ಲಿ ಕಲಿತ ಮಕ್ಕಳು ಬರೀ ಮೆಡಿಕಲ್‌, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಲ್ಲದೇ, ಯೋಗ, ಶಿಕ್ಷಣ, ಪತ್ರಿಕೋದ್ಯಮ, ಕೃಷಿ, ಹಣಕಾಸು, ಕಾನೂನು, ಸರ್ಕಾರಿ ಹಾಗೂ ಸರ್ಕಾರೇತರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ, ಕಲಿತ ಶಾಲೆ ಉಳಿಯುವಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಿ ಸಹಕರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಡಿಎಫ್ಒ ಕೃಷ್ಣ ಅಣ್ಣಯ್ಯ ಗೌಡ, ಶಿರಸಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ್ ಎಚ್. ನಾಯ್ಕ, ಕುಮಟಾ ರೇಷ್ಮೆ ಇಲಾಖೆಯ ನಿವೃತ್ತ ನಿರೀಕ್ಷಕ ಸಿ.ಎಸ್. ನಾಯ್ಕ, ಬೆಂಗಳೂರಿನ ಲೆಕ್ಕಪರಿಶೋಧಕ ಸಿ.ಎ. ಶಿವಾನಂದ ಕೆ. ಹೆಗಡೆ, ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಡಾ. ಜಯರಾಮ ಜಿ. ನಾಯ್ಕ, ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ ಎಂ. ಶೆಟ್ಟಿ, ನಾಗರಾಜ ಈರಾ ಗೌಡ, ರಮೇಶ್ ಎಂ. ಅಂಬಿಗ, ಲಕ್ಷ್ಮೀ ಎಂ. ಭಟ್ ಅವರು ಮಾತನಾಡಿದರು. ಗೌರವಾಧ್ಯಕ್ಷ ಬಾಲಚಂದ್ರ ಎಂ. ನಾಯ್ಕ ಉಪಸ್ಥಿತರಿದ್ದರು.

ಅಭಿನಂದನೆ ಸ್ವೀಕರಿಸಿದ ಕೈಗಾರಿಕೊದ್ಯಮಿ ಸುಬ್ರಾಯ ರಾಮಚಂದ್ರ ಹೆಗಡೆ ಮಾನ್ಯ, ದೆಹಲಿಯ ಸತ್ವ ಸ್ಕೂಲ್ ಆಫ್ ಯೋಗ ಸಂಸ್ಥಾಪಕ ಜಗದೀಶ ಎಸ್. ನಾಯ್ಕ ಅಂಗಡಿಮನೆ, ದೃಶ್ಯ ಮಾಧ್ಯಮ ಸಂಯೋಜಕ ಜಗದೀಶ ಭಾವೆ, ಪಿಎಸ್ಐ ನವೀನ ಎಸ್. ನಾಯ್ಕ, ವೈದ್ಯಾಧಿಕಾರಿ ಡಾ. ಗಜಾನನ ಎಂ.ಜಿ., ಯಕ್ಷಗಾನ ಕಲಾವಿದ ಜಗದೀಶ್ ಹೆಗಡೆ, ಗಣಪತಿ ನಾರಾಯಣ ಪಂಡಿತ, ಮಹಾಬಲ ಟಿ. ಗೌಡ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ: ವೈಭವದ ಶರನ್ನವರಾತ್ರಿ
ಕಾಫಿ ಬೆಳೆಗಾರ, ಕೃಷಿ ಸುಧಾರಣೆಗೆ ಒತ್ತು: ಡಾ. ಮಂತರ್ ್ಗೌಡ