ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ: ಶ್ರೀನಿಧಿ

KannadaprabhaNewsNetwork |  
Published : Jul 23, 2025, 12:30 AM IST
-ಯಂಗ್ ಇಂಡಿಯನ್ ಫಾರ್ಮಾರ್ಸ್ ನೇತೃತ್ವದಲ್ಲಿ ತಾಲೂಕು ಕಾಫಿ ಮಂಡಳಿ ಕಚೇರಿಗೆ ಸಂಸದರಿಗೆ ಮನವಿಯಂಗ್ ಇಂಡಿಯನ್ ಫಾರ್ಮಾರ್ಸ್ ನೇತೃತ್ವದಲ್ಲಿ ಸಂಸದರಿಗೆ ಮನವಿ | Kannada Prabha

ಸಾರಾಂಶ

ಕಾಫಿ ಉತ್ಪತ್ತಿಯು ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು ಗಣ್ಯರು ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೊಡಗು ಜಿಲ್ಲೆಯ ಸ್ಥಳೀಯ ರೈತರ ಪ್ರಮುಖ ಉತ್ಪಾದನೇ ಕಾಫಿ ಕೃಷಿಯಾಗಿದ್ದು ಸೋಮವಾರಪೇಟೆ ತಾಲೂಕಿನ ಕಾಫಿ ಮಂಡಳಿ ಕಚೇರಿಗೆ ಸ್ವಂತ ಕಟ್ಟಡವಿಲ್ಲದಿರುವ ಹಿನ್ನೆಲೆ ಸ್ವಂತ ಕಚೇರಿ ಹಾಗೂ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕು ಎಂದು ತಾಲೂಕಿನ ಯಂಗ್ ಇಂಡಿಯನ್ ಫಾರ್ಮಾರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ನೇತೃತ್ವದಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರಿನ ಸಂಸದರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಶ್ರೀನಿಧಿ, ಕಾಫಿ ಉತ್ಪತ್ತಿಯು ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕೊಡಗು ಜಿಲ್ಲೆಯ ಶೇ. 99ರಷ್ಟು ರೈತರು ಕಾಫಿ ಬೆಳೆಗಾರರಾಗಿದ್ದಾರೆ. ಆದರೆ ಸೋಮವಾರಪೇಟೆಯಲ್ಲಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾಫಿ ಮಂಡಳಿ ಕಚೇರಿಗೆ ಇನ್ನೂ ಸ್ವಂತ ಕಟ್ಟಡವಿಲ್ಲ. ಖಾಸಗಿ ಕಟ್ಟಡದಲ್ಲಿ ಬಾಡಿಗೆ ಪಾವತಿಸಿ ಕಾರ‍್ಯನಿರ್ವಹಿಸಲಾಗುತ್ತಿದೆ.

ಕಾಫಿ ಕೃಷಿಕರ ಅನುಕೂಲ ಹಾಗೂ ಹಿತದೃಷ್ಟಿಯಿಂದ ಕಾಫಿ ಮಂಡಳಿಯನ್ನು ಉನ್ನತಿಕರಿಸಬೇಕಾದ ಅಗತ್ಯವಿದೆ. ಕಾಫಿ ಮಂಡಳಿ ಕಚೇರಿಗೆ ಸ್ವಂತ ಕಟ್ಟಡದೊಂದಿಗೆ ಅಧಿಕಾರಿಗಳ ವಸತಿ ಗೃಹ, ಪ್ರಯೋಗಾಲಯ, ಸಭಾಂಗಣ, ಅತಿಥಿ ಗೃಹ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕಾಫಿ ಮಂಡಳಿಯೊಂದಿಗೆ ಚರ್ಚಿಸಿ ಇದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಸದರಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು ಈ ಕುರಿತಾಗಿ ಶೀಘ್ರದಲ್ಲೇ ಸಂಬಂದಿಸಿದ ಕಾಫಿ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಪ್ರಮುಖರಾದ ಸಜನ್ ಮಂದಣ್ಣ, ಜನಾರ್ಧನ್, ಅಭಿಷೇಕ್ ಗೋವಿಂದಪ್ಪ, ಲಕ್ಷ್ಮಿಕಾಂತ್ ಕೊಮಾರಪ್ಪ, ತಮ್ಮಯ್ಯ, ಪ್ರೇಮ್ ಸಾಗರ್, ವಿನಯ್ ಕುಶಾಲಪ್ಪ, ಆಶೀತ್ ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು