ಕನ್ನಡಪ್ರಭ ವಾರ್ತೆ ಬೇಲೂರುಕಾಫಿ ದರ ಏರಿಕೆಯಾಗುತ್ತಿದ್ದಂತೆ ಕಾಫಿ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಳೆಗಾರರು ಹಗಲಿರುಳು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಚಿನ್ನೇನಹಳ್ಳಿ ಗ್ರಾಮದ ಮಧು ಎಂಬುವವರ ತೋಟದಲ್ಲಿ ಶನಿವಾರ ಮದ್ಯರಾತ್ರಿ ಕುಯ್ಲು ಮಾಡಿ ಇಟ್ಟಿದ್ದ ಸುಮಾರು 18 ಮೂಟೆ ಕಾಫಿ ಮೂಟೆಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಇಂದು ಮುಂಜಾನೆ ಕಾಫಿ ತುಂಬಿಕೊಂಡು ಪಲ್ಪರ್‌ಗೆ ಹೋಗಲು ಆಗಮಿಸಿದ ಸಂದರ್ಭದಲ್ಲಿ ಕುಯ್ದಿಟ್ಟಿದ್ದ ಎಲ್ಲಾ ಕಾಫಿ ಚೀಲಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.ಈ ವೇಳೆ ಮಾತನಾಡಿದ ಮಧು, ನಾವು ಕಾಫಿ ಬೀಜ ಕುಯ್ಲು ಮಾಡಿ 7 ಗಂಟೆ ಸಮಯದಲ್ಲಿ ಎಲ್ಲಾ ಒಂದು ಕಡೆ ಇಟ್ಟು ಟಾರ್ಪಲ್ ಮುಚ್ಚಿ ಮನೆಗೆ ಹೋಗಿದ್ದು ನಂತರ ಎಂದಿನಂತೆ ಇಂದು ಸಹ ಕಾರ್ಮಿಕರನ್ನು ಕರೆತಂದು ಕಾಫಿಯನ್ನು ಮನೆಗೊಯ್ಯಲು ತೋಟಕ್ಕೆ ಬಂದಾಗ ಅಲ್ಲಿ ಕಳ್ಳತನವಾಗಿದ್ದು ಕಂಡುಬಂದಿದೆ.ಈಗಾಗಲೇ ಇಂತಹ ಪ್ರಕಾರದ ತಾಲೂಕಿನಲ್ಲಿ ಕಂಡು ಬರುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆಗಾರರ ಪರಿಸ್ಥಿತಿ ಏನಾಗಬೇಕು.
ಗ್ರಾಮಸ್ಥರ ಆಕ್ರೋಶ:
ಸಣ್ಣಪುಟ್ಟ ರೈತರು ಬೆಳೆಗಾರರು ಇತ್ತೀಚಿಗೆ ತೀವ್ರವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಒಂದು ಕಡೆ ಆನೆ ಹಾವಳಿ ಇನ್ನೊಂದು ಕಡೆ ಕಳ್ಳರ ಕಾಟ ಹೆಚ್ಚಾಗಿದ್ದು ಸುಮಾರು 15 ವರ್ಷಗಳ ನಂತರ ಕಾಫಿಗೆ ಉತ್ತಮ ಬೆಲೆ ಬಂದ ಹಿನ್ನೆಲೆಯಲ್ಲಿ ಕಾಫಿ ಕಳವು ಪ್ರಕರ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಗೋರಿ ಮಠದಲ್ಲಿ ಕಾಫಿ ಗಿಡದ ರೆಕ್ಕೆ ಮುರಿದುಕೊಂಡು ಗಾಡಿಗೆ ತುಂಬಿಕೊಂಡು ಹೋದ ಉದಾಹರಣೆ ಇದ್ದು ಅದು ಮಾಸುವ ಮುನ್ನವೆ ಈ ಪ್ರಕರಣ ಬೆಳಕಿಗೆ ಬಂದಿದ್ದು ಇನ್ನಷ್ಟು ಆತಂಕ ತಂದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು