ಕನ್ನಡಪ್ರಭವಾರ್ತೆ ತಿಪಟೂರು
ನಗರದ ಬಾಲಕರ ಸರ್ಕಾರಿ ಪದವಿಪರ್ವ ಕಾಲೇಜಿನಲ್ಲಿ ಹೊನ್ನವಳ್ಳಿಯ ನಿವೃತ್ತ ಶಾಲಾ ಶಿಕ್ಷಕ ಮಲಿಗಪ್ಪಾಚಾರ್ ಆಯೋಜಿಸಿದ್ದ ನಾಣ್ಯಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂತಹ ನಾಣ್ಯಗಳ ಪ್ರದರ್ಶನ ವೀಕ್ಷಣೆಯು ಜ್ಞಾನವರ್ಧಕವಾಗಿದ್ದು ಮರೆಯಲಾಗದ ಅನುಭವ ಸಿಗುವುದಲ್ಲದೆ ವಿದ್ಯಾರ್ಥಿಗಳಲ್ಲಿ ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸುತ್ತದೆ ಎಂದರು.ಈ ಪ್ರದರ್ಶನವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದು, ವಿವಿಧ ದೇಶಗಳ ಮತ್ತು ವಿವಿಧ ಕಾಲಘಟ್ಟಗಳ ಸಾವಿರಾರು ನಾಣ್ಯಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಈ ನಾಣ್ಯ ಪ್ರದರ್ಶನದಲ್ಲಿ ಗಂಗರ ಕಾಲದ ತಾಮ್ರದ ನಾಣ್ಯಗಳು, ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದ ನಾಣ್ಯಗಳು, ಚಿನ್ನದ ಕಂಠಿ ವರಹಗಳು, ಮೈಸೂರು ಹುಲಿ ಟಿಪ್ಪು ಸುಲ್ತಾನರ ಕಾಲದ ನಾಣ್ಯಗಳು, ಬ್ರಿಟಿಷರ ಕಾಲದ ನಾಣ್ಯಗಳು, ಉತ್ತರ ಭಾರತದ ಕೃಷ್ಣರಾಜ ಒಡೆಯರ್ ಕಾಲದ ನಾಣ್ಯಗಳು, ಬ್ರಿಟಿಷರ ಕಾಲದ ನಾಣ್ಯಗಳು, ಗುಪ್ತರ ಕಾಲದ ಚಿನ್ನದ ನಾಣ್ಯಗಳು, ನೆಹರೂರವರ ಶತಮಾನೋತ್ಸವದ ನಾಣ್ಯ, ಪಟೇಲರ ಜನ್ಮಶತಮಾನ ವರ್ಷದ ನಾಣ್ಯ, ಭೋಸ್ ಅವರ ಜನ್ಮ ಶತಮಾನ ವರ್ಷದ ನಾಣ್ಯ, ಗಾಂಧಿ ಜನ್ಮ ಶತಮಾನ ವರ್ಷದ ನೆನಪಿನ ೧೦ರು ನಾಣ್ಯ, ರೈಲ್ವೆ ೧೫೦ನೇ ವರ್ಷಾಚರಣೆಯ ೨ರು ನಾಣ್ಯ, ಮದನ್ ಮೋಹನ್ ಮಾಳವೀಯರ ೧೫೦ನೇ ಜನ್ಮ ವರ್ಷದ ೫ರು ನಾಣ್ಯ, ಬಾಬು ರಾಜೇಂದ್ರ ಪ್ರಸಾದ್ ನೆನಪಿನ ನಾಣ್ಯ, ಹಳೆಕಾಲದ ೩ ಕಾಸು, ನಾಲ್ಕು ಆಣೆ, ಅರ್ಧ ಆಣೆ ಹಾಗೂ ೨ಆಣೆಗಳ ನಾಣ್ಯಗಳನ್ನು ಪ್ರದರ್ಶಿಸಲಾಯಿತು. ಕೆನಡಾ, ಕೊರಿಯಾ, ಭೂತಾನ್, ಕತಾರ್, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಯುನೈಟೆಡ್ ಅರಬ್ ಮೊದಲಾದ ದೇಶದ ಕರೆನ್ಸಿಗಳನ್ನು ಪ್ರದರ್ಶಿಸಲಾಯಿತು. ಅಲ್ಲದೆ ಇಸ್ರೇಲ್, ನೆದರ್ಲ್ಯಾಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ನೇಪಾಳ, ಚೀನಾ, ಅಮೆರಿಕ, ಕೆನಡಾ, ಸಿಂಗಾಪುರ್, ಮಲೇಷಿಯಾ, ಕುವೈತ್, ಪೋರ್ಚುಗೀಸ್, ಫ್ರಾನ್ಸ್ ಇತ್ಯಾದಿ ದೇಶಗಳ ನಾಣ್ಯಗಳು ವಿದ್ಯಾರ್ಥಿಗಳ ಗಮನ ಸೆಳೆದವು. ೨೦೧೬ ರಲ್ಲಿ ಬ್ಯಾನ್ ಆದ ರೂ ೧೦೦೦ ಹಾಗೂ ರೂ ೫೦೦ ಮತ್ತು ೨೦೨೩ ರಲ್ಲಿ ಬ್ಯಾನ್ ಆದ ರೂ ೨೦೦೦ಗಳನ್ನು ಪ್ರದರ್ಶಿಸಲಾಗಿತ್ತು. ಕಾಲೇಜಿನ ಹಾಗೂ ಪ್ರೌಢಶಾಲೆಯ ೧೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ನಾಣ್ಯ ಪ್ರದರ್ಶನ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ನಾಣ್ಯ ಸಂಗ್ರಹಕ ಮಲಿಗಪ್ಪಾಚಾರ್, ಉಪನ್ಯಾಸಕರಾದ ಷಡಕ್ಷರಿ, ಪ್ರಶಾಂತ್, ದೀಪಕ್, ಅಭಿಷೇಕ್, ಹರೀಶ್ ಮೊದಲಾದವರು ಇದ್ದರು.