ವಿಶ್ವ ಭೂ ದಿನಾಚರಣೆ, ಮಾದಕ ವ್ಯಸನದ ನಿರ್ಮೂಲನಾ ಕಾರ್ಯಕ್ರಮಕ್ಕೆ ಚಾಲನೆ

KannadaprabhaNewsNetwork |  
Published : Apr 27, 2025, 01:33 AM IST
63 | Kannada Prabha

ಸಾರಾಂಶ

, ಮದ್ಯ ವ್ಯಸನದಿಂದ ಮಕ್ಕಳು ಹಾಳಾಗಬೇಡಿ, ನಿಮಗಾಗಿ ತಂದೆ ತಾಯಿಯರು ತುಂಬಾ ಕಷ್ಟ ಪಡುತ್ತಾರೆ,

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆ

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಸರ್ಕಾರಿ ಅಭಿಯೋಜನಾ ಇಲಾಖೆಯಿಂದ ವಿಶ್ವ ಭಾರತಿ ಪ್ರಥಮ ದರ್ಜೆ ಕಾಲೇಜು ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಭೂ ದಿನಾಚರಣೆ ಮತ್ತು ಮಾದಕ ವ್ಯಸನದ ಬಲಿಪಶುಗಳಿಗೆ ಕಾನೂನು ಸೇವೆಗಳು ಮತ್ತು ಮಾದಕ ವ್ಯಸನದ ನಿರ್ಮೂಲನ ಕುರಿತು ಕಾರ್ಯಕ್ರಮ ನಡೆಯಿತು.

ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ಕೋರ್ಟಿನ ನ್ಯಾಯಾಧೀಶರಾದ ಸಂದೇಶ್ ಪ್ರಭು, ಎಸ್‌.ಎನ್‌. ಸುರೇಶ್ ಹಾಗೂ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಎಂ. ಸುಷ್ಮಾ, ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಮಣಿರಾಜು, ಹಿರಿಯ ವಕೀಲ ಸಂಗಮೇಶ್ವರ ಹಾಗೂ ಡಾ. ರವಿಕುಮಾರ್ ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನ್ಯಾಯಾಧೀಶರು ಸಂದೇಶ್ ಪ್ರಭು ಮಾತನಾಡಿ, ನಮ್ಮ ಶಕ್ತಿ ನಮ್ಮ ಗ್ರಹ ಎಂಬ ಘೋಷವಾಕ್ಯವಿರುವ ವಿಶ್ವ ಭೂ ದಿನದ ಅಂಗವಾಗಿ ಮತ್ತು ಮಾನ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ಕ್ರಿಯೆ ಯೋಜನೆಯಡಿಯಲ್ಲಿ ಮಾದಕ ವ್ಯಸನದ ಬಲಿಪಶುಗಳಿಗೆ ಕಾನೂನು ಸೇವೆಗಳು ಮತ್ತು ಮಾದಕ ವ್ಯಸನದ ಬಗ್ಗೆ ತಿಳಿಸಿದರು.

ಸಿವಿಲ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಧೀಶ ಎಸ್.ಎನ್. ಸುರೇಶ್ ಮಾತನಾಡಿ, ಭೂಮಿ ಸಂರಕ್ಷಣೆ ಮತ್ತು ಭೂ ರಕ್ಷಣೆ ಬಗ್ಗೆ ಹಾಗೂ ಪ್ರತಿದಿನವೂ ಕೂಡ ಭೂಮಿಯನ್ನು ರಕ್ಷಿಸುವ ಜೊತೆಗೆ ನಮ್ಮ ಶಕ್ತಿ ನಮ್ಮ ಗ್ರಹ ಎಂಬ ಘೋಷ ವಾಕ್ಯದ ಜೊತೆಗೆ ಭೂಮಿಯನ್ನು ರಕ್ಷಿಸಬೇಕು ಎಂದರು.

2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಸುಷ್ಮಾ ಮಾತನಾಡಿ, ಮದ್ಯ ವ್ಯಸನದಿಂದ ಮಕ್ಕಳು ಹಾಳಾಗಬೇಡಿ, ನಿಮಗಾಗಿ ತಂದೆ ತಾಯಿಯರು ತುಂಬಾ ಕಷ್ಟ ಪಡುತ್ತಾರೆ, ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ಚೆನ್ನಾಗಿ ಓದಿ ಎಲ್ಲರೂ ಮುಂದೆ ಬರಬೇಕು ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ಆತ್ಮಹತ್ಯೆ ಮತ್ತು ಅಪರಾಧ ಎಸಗುವಲ್ಲಿ ಯುವ ಪೀಳಿಗೆಯು ತೊಡಗಿಸಿಕೊಳ್ಳುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ಯಾನಲ್ ವಕೀಲರಾದ ಮಣಿ ರಾಜು, ಹಿರಿಯ ವಕೀಲರಾದ ಸಂಗಮೇಶ್ವರ, ವಕೀಲ ಸಂಘದ ಅಧ್ಯಕ್ಷ ಗಂಗರಾಜು ಮಾತನಾಡಿದರು.

ವಿಶ್ವ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಮಾರ್ ಸ್ವಾಮಿ, ಕಾಲೇಜಿನ ಪ್ರಾಧ್ಯಾಪಕರು, ನ್ಯಾಯಾಲಯದ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಪೊಲೀಸರು ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌