ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರಲು ಆರ್.ಜಿ.ಎಚ್.ಎಸ್. ಸಂಸ್ಥೆಯ ಶ್ರಮ ಶ್ಲಾಘನೀಯ

KannadaprabhaNewsNetwork | Published : Dec 15, 2024 2:01 AM

ಸಾರಾಂಶ

ಆರ್.ಜಿಎಚ್.ಎಸ್. ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಈ ಒಂದು ಹಾಡಿ ಭಾಗದ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು,

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಶೈಲಜಾ ರಾಮಕೃಷ್ಣ ಚಾರಿಟಬಲ್ ಟ್ರಸ್ಟ್ ವಯಿಂದ ತಾಲೂಕಿನ ನಾಗರಹೊಳೆ ಅರಣ್ಯ ವ್ಯಾಪ್ತಿಯ ಬಳ್ಳೆ ಹಾಡಿ ಹಾಗೂ ಗೋಳೂರು ಹಾಡಿ ಬುಡಕಟ್ಟು ಆದಿವಾಸಿಗಳನ್ನು ಮುಖ್ಯ ವಾಹಿನಿಗೆ ತರಳು ಸಂಸ್ಥೆಯು ಕೈಗೊಂಡಿರುವ ಶ್ರಮವು ಶ್ಲಾಘನೀಯ ಎಂದು ತಾಲೂಕು ಪ. ಪಂಗಡ ಹಾಗೂ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ್ ಹೇಳಿದರು.ಶೈಲಜಾ ರಾಮಕೃಷ್ಣ ಚಾರಿಟಬಲ್ ಟ್ರಸ್ಟ್ ಮೈಸೂರು ಹಾಗೂ ಜಿಎಚ್.ಪಿ.ಎಸ್. ಗೋಳೂರು ಹಾಡಿ ಶಾಲೆಯ ಸಹಯೋಗದೊಂದಿಗೆ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಗೋಳೂರು ಹಾಡಿಯ ಶಾಲೆಯ ನೂತನ ಕೊಠಡಿ ಉದ್ಘಾಟನೆ ಮತ್ತು ಬುಡಕಟ್ಟು ಯುವ ಸಮೂಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಾಲಿಬಾಲ್ ಪಂದ್ಯಾವಳಿ ಹಾಗೂ ಬುಡಕಟ್ಟು ನಿವಾಸಿಗಳ ಸಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆದಿವಾಸಿಗಳ ಅಭಿವೃದ್ಧಿಗೆ ಈಗಾಗಲೇ ಸರ್ಕಾರ ಹಲವು ಯೋಜನೆಗಳನ್ನು ಹಾಗೂ ಈ ಒಂದು ಭಾಗದ ಹಾಡಿಗಳ ಮೂಲಭೂತ ಸೌಕರ್ಯಗಳಿಗೆ ಮುಖ್ಯಮಂತ್ರಿಗಳು ಇತ್ತೀಚಿಗೆ ಈ ಭಾಗದ ಕೆರೆ ಹಾಡಿಗೆ ಭೇಟಿ ನೀಡಿದಂತ ಸಂದರ್ಭದಲ್ಲಿ ಬುಡಕಟ್ಟು ಹಾಡಿಗಳ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ, ಈ ನಿಟ್ಟಿನಲ್ಲಿ ಬುಡಕಟ್ಟು ನಿವಾಸಿಗಳು ಹೇಳಿಗಿಗೆ ಶ್ರಮಿಸುವ ಸಂಸ್ಥೆಗಳಿಗೆ ಹಾಗೂ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವ ಮೂಲಕ ಇವತ್ತಿನ ಸಮಾಜದ ಮುಖ್ಯ ವಾಹಿನಿಗಳಲ್ಲಿ ಬುಡಕಟ್ಟು ನಿವಾಸಿಗಳು ಸಹ ಒಬ್ಬರಂತೆ ಬೆರೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಶಿಕ್ಷಣ ಇಲಾಖೆಯ ವಿಭಾಗೀಯ ಸಂಪನ್ಮೂಲ ಅಧಿಕಾರಿ ನಂಜಯ್ಯ ಮಾತನಾಡಿ, ಆರ್.ಜಿಎಚ್.ಎಸ್. ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಈ ಒಂದು ಹಾಡಿ ಭಾಗದ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇದರ ಫಲವಾಗಿ ಶಾಲೆಯ ಅಭಿವೃದ್ಧಿ ಜೊತೆಗೆ ಈ ಭಾಗದ ಹಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ಮತ್ತು ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂದು ಸಂಸ್ಥೆಯ ದುರದೃಷ್ಟಿ ಫಲವಾಗಿ ಇಂದು ಯುವ ಸಮೂಹವನ್ನು ಸೆಳೆಯುವ ನಿಟ್ಟಿನಲ್ಲಿ ಸಮಾರಂಭಗಳು ಹಾಡಿ ಭಾಗದಲ್ಲಿ ನಡೆಯಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.ಆರ್.ಜಿಎಚ್.ಎಸ್. ಸಂಸ್ಥೆಯ ಅಧ್ಯಕ್ಷೆ ಶೈಲಜಾ ರಾಮಕೃಷ್ಣ ಮಾತನಾಡಿ, ಸಂಸ್ಥೆಯ ಪ್ರತಿಯೊಬ್ಬ ನಿರ್ದೇಶಕರು ಹಾಗೂ ಸ್ವಯಂಸೇವಕರು ಪ್ರತಿಯೊಬ್ಬರು ತಮ್ಮದೇ ಆದ ಶ್ರಮದ ಮೂಲಕ ಈ ಭಾಗದ ಹಾಡಿ ಶಾಲೆ ಮಕ್ಕಳ ಅಭಿವೃದ್ಧಿಗೆ ತಮ್ಮ ಕೆಲಸದ ನಡುವೆಯೂ ಇಂತಹ ಸಮಾಜ ಮುಖಿ ಸೇವೆಯಲ್ಲಿ ತೊಡಗಿದ್ದು, ನಮ್ಮ ಸಂಸ್ಥೆಯ ಎಲ್ಲ ಸದಸ್ಯರ ಶ್ರಮದ ಫಲವಾಗಿ ಬುಡಕಟ್ಟು ನಿವಾಸಿಗಳ ಯುವ ಸಮೂಹದಲ್ಲಿ ಬದಲಾವಣೆಯ ಪರ್ವ ಕಾಣಲಿ ಎಂದು ಆಶಿಸಿದರು.ಸಂಸ್ಥೆ ವತಿಯಿಂದ ಆಯೋಜನೆ ಮಾಡಲಾಗಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಹಲವು ತಂಡಗಳು ಸ್ಪರ್ಧಿಸಿ ಬಳಿಕ ನಡೆದಂತಹ ಫೈನಲ್ ಪಂದ್ಯಾವಳಿಯಲ್ಲಿ ಗೋಳೂರು ಹಾಡಿಯ ಅಭಿ ನೇತೃತ್ವದ ಯುವಕರ ತಂಡ ಪ್ರಥಮ ಸ್ಥಾನ ಹಾಗೂ ಭೋಗಪುರ ಗ್ರಾಮದ ಯುವಕರು ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಬುಡಕಟ್ಟು ಮಕ್ಕಳು ಹಾಗೂ ನಿವಾಸಿಗಳಿಗೆ ನಡೆಸಲಾದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿತು. ಬಳಿಕ ನೂತನವಾಗಿ ನಿರ್ಮಾಣವಾದ ಶಾಲಾ ಕೊಠಡಿಯನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಹರೀಶ್ ಕುಮಾರ್, ನಿರ್ದೇಶಕರಾದ ಶಿವಪ್ರಸಾದ್, ರಾಜೇಶ್, ಶೇಖರ್, ಹಿರಿಯ ಮಾರ್ಗದರ್ಶಕರಾದ ಬಾಲಕೃಷ್ಣ, ಆರಕ್ಷಕ ಇಲಾಖೆಯ ಸಿಬ್ಬಂದಿ ಪರಶಿವಮೂರ್ತಿ, ಅರಣ್ಯ ಇಲಾಖೆಯ ಸಿಬ್ಬಂದಿ ಚಿಕ್ಕಣ್ಣ, ಸ್ವಯಂಸೇವಕರದ ಗೋವಿಂದರಾಜು, ಬಸವಣ್ಣ, ಮಂಜುಳಾ, ಮುಖ್ಯ ಶಿಕ್ಷಕರಾದ ಕಾರ್ತಿಕ್, ಶಿಕ್ಷಕರಾದ ಭಾಗ್ಯ, ಶಾಂತರಾಜು, ಬಸವರಾಜು, ಮ್ಯಾಚ್ ರೆಫ್ರಿ ವಸಂತ್, ಹಾಡಿಯ ಮುಖಂಡರಾದ ರಾಜು, ಮಾದೇವಯ್ಯ, ಸಮುದಾಯ ವರ್ಗದವರು, ಕ್ರೀಡಾಪಟುಗಳು ಇದ್ದರು.

Share this article