ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರು ಬಿಕ್ಷು ಮಠದ ಸಭಾಂಗಣದಲ್ಲಿ ತಂದೆ-ತಾಯಿ ಇಲ್ಲದ ವಿದ್ಯಾರ್ಥಿಗಳಿಗೆ ಲಿಂಗಪಟ್ಟಣದ ಸುಂದರಪ್ಪ ಆಯೋಜಿಸಿದ್ದ ವಸ್ತ್ರ, ನೋಟ್ ಪುಸ್ತಕ ಮತ್ತು ಕಲಿಕೋಪಕರಣ ವಿತರಣೆಯಲ್ಲಿ ಮಾತನಾಡಿದರು.
ಡಾ.ಅರುಣ್ ಕುಮಾರ್ ಮಾತನಾಡಿ, ನಗು ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ದಂತ ತಪಾಸಣೆ ಆಯೋಜಿಸಿದ್ದು, ಆಸಕ್ತರು ಮನವಿ ಮಾಡಿದರೆ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಬಿರ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.ಸುಂದ್ರಪ್ಪ ಲಿಂಗಪಟ್ಟಣ ಮಾತನಾಡಿ, ಯಾವುದೇ ಜಾತಿ, ಧರ್ಮ, ಭೇದ ಮಾಡದೆ ತಾಲೂಕಿನಲ್ಲಿ ತಂದೆ-ತಾಯಿ ಇಲ್ಲದ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಎಲ್ಲರಿಗೂ ಪ್ರತಿ ವರ್ಷ ದಾನಿಗಳಿಂದ ಸಂಗ್ರಹಿಸಿ ಕೈಲಾದ ಪರಿಕರಗಳನ್ನು ವಿತರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಡಾ.ಅರುಣ್ ಕುಮಾರ್, ಡಾ.ವಿವೇಕ್ ಮಠಪತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್, ಎನ್.ಕೆ.ಕುಮಾರ್, ಎಚ್.ಆರ್.ಪದ್ಮನಾಭ್, ಶ್ರೀನಿವಾಸಾಚಾರಿ, ಕಾರ್ಯಕ್ರಮ ಅಯೋಜಕರಾದ ಸುಂದ್ರಪ್ಪ, ಬೋರೇಗೌಡ, ಜಿ.ಎಸ್.ಕೃಷ್ಣ, ಸಾವಯವ ಕೃಷಿಕ ಮಹೇಶ್ ಕುಮಾರ್, ನಿವೃತ್ತ ಸೈನಿಕ ಸುರೇಶ್, ಮೋದಿ ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಪಕ್ಷದ ಸಂಸ್ಥಾಪನಾ ದಿನ ಮತ್ತು ಮಹಾಧಿವೇಶನಕ್ಕೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ೧೦ ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ವರೆಗೆ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಗುರುವಾರ ಸುದ್ದಿಗೋಷ್ಠೀಯಲ್ಲಿ ಹೇಳಿದರು.
ನಂತರ ಪಕ್ಷದ ಮುಖಂಡರ ನೇತೃತ್ವದಲ್ಲಿ ಕಳೆದ ವರ್ಷ ನಮ್ಮನ್ನಗಲಿದೆ ಪಕ್ಷದ ಕಾರ್ಯಾಧ್ಯಕ್ಷ ಎಚ್.ಎಸ್.ಲಿಂಗೇಗೌಡ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಲಾಗುವುದು. ಬಳಿಕ ಗುರುಭವನದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದರು.