ಕನ್ನಂಬಾಡಮ್ಮ ದೇವಿ ಹೆಸರಿನಲ್ಲಿ ಕಾಣಿಕೆ ಸಂಗ್ರಹ

KannadaprabhaNewsNetwork |  
Published : Jul 31, 2024, 01:10 AM IST
30ಕೆಎಂಎನ್ ಡಿ25 | Kannada Prabha

ಸಾರಾಂಶ

ಕಿಕ್ಕೇರಿ ಪಟ್ಟಣದ ಪ್ರಮುಖ ಬೀದಿಯಲ್ಲಿ ದೇವಿ ಹೆಸರಿನಲ್ಲಿ ಮುಡುಪು ಕಾಣಿಕೆ ಹುಂಡಿಗೆ ಪೂಜೆ ಸಲ್ಲಿಸಿ ಸಾಗಿದರು. ತಮಟೆ ವಾದ್ಯದೊಂದಿಗೆ ಸಾಗುತ್ತ ದೇವಿಯ ನಾಮ ಸ್ಮರಣೆ ಮಾಡಿದರು. ವಿವಿಧ ಅಂಗಡಿ ಮುಂಗಟ್ಟಿನವರು, ರೈತಾಪಿ ಜನತೆ, ಭಕ್ತರು ದೇವಿಯ ಮುಡಿಪಿನ ಹುಂಡಿಗೆ ಶ್ರದ್ಧೆಯಿಂದ ಹಣ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ವಾರ್ಷಿಕ ಹಬ್ಬದ ಅಂಗವಾಗಿ ಕನ್ನಂಬಾಡಮ್ಮದೇವಿಗೆ ಮುಡಿಪಿನ ಕಾಣಿಕೆ ಸಂಗ್ರಹವನ್ನು ರೈತ ಮುಖಂಡರು ಭಕ್ತಿಯಿಂದ ಮಾಡಿದರು.

ಪಟ್ಟಣದ ಪ್ರಮುಖ ಬೀದಿಯಲ್ಲಿ ದೇವಿ ಹೆಸರಿನಲ್ಲಿ ಮುಡುಪು ಕಾಣಿಕೆ ಹುಂಡಿಗೆ ಪೂಜೆ ಸಲ್ಲಿಸಿ ಸಾಗಿದರು. ತಮಟೆ ವಾದ್ಯದೊಂದಿಗೆ ಸಾಗುತ್ತ ದೇವಿಯ ನಾಮ ಸ್ಮರಣೆ ಮಾಡಿದರು. ವಿವಿಧ ಅಂಗಡಿ ಮುಂಗಟ್ಟಿನವರು, ರೈತಾಪಿ ಜನತೆ, ಭಕ್ತರು ದೇವಿಯ ಮುಡಿಪಿನ ಹುಂಡಿಗೆ ಶ್ರದ್ಧೆಯಿಂದ ಹಣ ಅರ್ಪಿಸಿದರು.

ಕನ್ನಂಬಾಡಿ ಗ್ರಾಮಕ್ಕೆ ರೈತ ಮುಖಂಡರು ತೆರಳಿದರು. ದೇವಿಗೆ ಮುಡುಪಿನ ಕಾಣಿಕೆಸೀರೆ, ರವಿಕೆ, ಬಿಚ್ಚೋಲೆ, ಅರಿಷಿಣ, ಕುಂಕುಮ, ಕಾಯಿ ಮತ್ತಿತರ ಅಷ್ಟದ್ರವ್ಯ ವಸ್ತುಗಳಿಂದ ದೇವಿಗೆ ಮುಡಿಪು ಅರ್ಪಿಸಿ ಗ್ರಾಮದ ಸುಭಿಕ್ಷತೆ, ಸಮೃದ್ಧ ಮಳೆ ಜತೆ ಉತ್ತಮ ಬೆಳೆಯಾಗಲು ಪ್ರಾರ್ಥಿಸಿದರು.

ದೇವಿ ಗುಡಿಯಲ್ಲಿ ನೀಡಿದ ನೈವೇದ್ಯ ಪ್ರಸಾದವನ್ನು ಶ್ರದ್ಧೆಯಿಂದ ತರಲಾಯಿತು. ದೇವಿ ಗದ್ದುಗೆ ನಿರ್ಮಿಸಿ ಪೂಜಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.

ಈ ವೇಳೆ ನಾಗೇಗೌಡ, ಶಿವರಾಮೇಗೌಡ, ಕಾಯಿ ಮಂಜೇಗೌಡ, ಕಾಯಿ ಸುರೇಶ್, ಮಂಜೇಗೌಡ, ಪುಟ್ಟಸ್ವಾಮಿ, ಪುಟ್ಟೇಗೌಡ, ವಾಸು, ಪುಟ್ಟರಾಜು ಮುಂತಾದವರು ಭಾಗವಹಿಸಿದ್ದರು.ಶ್ರೀಬಾಲಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಆಷಾಢ ಪೂಜೆ

ಮಂಡ್ಯ:ಇಲ್ಲಿನ ರೈಲು ನಿಲ್ದಾಣದ ಮುಂಭಾಗದಲ್ಲಿರುವ ಶ್ರೀಬಾಲಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ಆಷಾಢ ಮಾಸದ ಕೃಷ್ಣ ಪಕ್ಷದ ಅಡಿ ಕೃತಿಕ ನಕ್ಷತ್ರದ ಪ್ರಯುಕ್ತ ಶ್ರೀಬಾಲ ಸುಬ್ರಹ್ಮಣ್ಯೇಶ್ವರಸ್ವಾಮಿ ಪೂಜಾ ಮಹೋತ್ಸವ ಸಂಭ್ರಮ-ಸಡಗರದಿಂದ ನಡೆಯಿತು. ಪೂಜಾ ಮಹೋತ್ಸವದ ಅಂಗವಾಗಿ ಶುಕ್ರವಾರದಿಂದಲೇ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಮಂಗಳವಾರ ಬೆಳಗ್ಗೆ ಮಹಾಗಣಪತಿ ಪೂಜೆ, ಸುಬ್ರಹ್ಮಣ್ಯ, ಗಣಪತಿ, ಶ್ರೀ ಮಾರಮ್ಮ ದೇವರಿಗೆ ಪಂಚಾಮೃತಾಭಿಷೇಕ, ಚಂಡಿಕಾ ಹೋಮ ಮತ್ತು ಪೂರ್ಣಾಹುತಿ, ದುರ್ಗಾ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಡಿ ಕೃತ್ತಿಕ ನಕ್ಷತ್ರದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿಗೆ ಫಲ ಪಂಚಾಮೃತಾಭಿಷೇಕ ಸಹಿತ ಮಹಾಪೂಜೆ ನಡೆಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುರೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ : ಮಹಿಳೆಯರಿಗೆ ಅವಮಾನ ಆರೋಪ- ದೂರು
ಸರ್ಕಾರದಿಂದ ಕುಡುಕರ ಸೃಷ್ಟಿ: ಬಿವೈವಿ