ಬಸ್‌ ಹಾಗೂ ಬೊಲೆರೋ ವಾಹನ ನಡುವೆ ಡಿಕ್ಕಿ

KannadaprabhaNewsNetwork |  
Published : Aug 25, 2024, 02:07 AM IST
2 ವಾಹನ ಸಂಪೂರ್ಣ ಜಕಮ್ ಅದೃಷ್ಟ ವಾಸತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ | Kannada Prabha

ಸಾರಾಂಶ

ಅರಸೀಕೆರೆ ತಾಲೂಕಿನ ಬಾಣಾವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಶಾನೆಗೆರೆ ಸಮೀಪ ಬಸ್ ಹಾಗೂ ಬುಲೆರೋ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು ಎರಡೂ ವಾಹನಗಳು ಜಖಂ ಆಗಿರುವ ಘಟನೆ ನಡೆದಿದೆ. ಬಾಣಾವರದ ಕಡೆಗೆ ಬರುತ್ತಿದ್ದ ಬುಲೆರೋ ವಾಹನ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಜಖಂ ಆಗಿದ್ದು, ಬಸ್ಸಿನ ಮುಂಭಾಗದ ಎರಡು ಚಕ್ರಗಳು ಮರಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬಾಣಾವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಶಾನೆಗೆರೆ ಸಮೀಪ ಬಸ್ ಹಾಗೂ ಬುಲೆರೋ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು ಎರಡೂ ವಾಹನಗಳು ಜಖಂ ಆಗಿರುವ ಘಟನೆ ನಡೆದಿದೆ. ಬಾಣವಾರದಿಂದ ಹೊಸದುರ್ಗ ಹೋಗುತ್ತಿದ್ದಂತಹ ಸರ್ಕಾರಿ ಸಾರಿಗೆ ಬಸ್‌ಗೆ ಸಿಂಗಟೆಕೆರೆ ಮಾರ್ಗವಾಗಿ ಬಾಣಾವರದ ಕಡೆಗೆ ಬರುತ್ತಿದ್ದ ಬುಲೆರೋ ವಾಹನ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಜಖಂ ಆಗಿದ್ದು, ಬಸ್ಸಿನ ಮುಂಭಾಗದ ಎರಡು ಚಕ್ರಗಳು ಮರಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ರಾಷ್ಟ್ರೀಯ ಹೆದ್ದಾರಿ 234ರ ಈ ಪ್ರದೇಶದಲ್ಲಿ ಈಗಾಗಲೇ ಹಲವಾರು ಅವಘಡ ಅಪಘಾತಗಳು ಸಂಭವಿಸಿದರೂ ಸಹ ಸಂಬಂಧಪಟ್ಟ ರಾಜ್ಯ ಹೆದ್ದಾರಿ ಪ್ರಾಧಿಕಾರವಾಗಲಿ ರಾಷ್ಟ್ರೀಯ ಹೆದ್ದಾರಿ ನಿಗಮವಾಗಲಿ ಯಾವುದೇ ಅಪಘಾತಗಳನ್ನ ಸೂಚಿಸುವಂತಹ ಉಬ್ಬು ದಿಣ್ಣೆಗಳಾಗಲಿ ಅಥವಾ ಅಪಘಾತ ವಲಯ ಸೂಚಿಸುವ ನಾಮಫಲಕಗಳಾಗಲಿ ಹಾಕದೇ ಇರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದ್ದು, ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಈ ಭಾಗದಲ್ಲಿ ನಡೆಯಾವಂತಹ ಅಪಘಾತಗಳನ್ನು ತಪ್ಪಿಸುವ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಈ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!