- ಅರಕೆರೆ ವೀರಾಗಾಸೆ ತಂಡದಿಂದ ಪುರವಂತಿಕೆ ಸೇವೆ - - - ಹೊನ್ನಾಳಿ: ಪಟ್ಟಣದ ಬನ್ನಿ ಮಹಾಂಕಾಳಿ ದೇವತೆಯ 8ನೇ ವರ್ಷದ ರಥೋತ್ಸವ ದೇವಸ್ಥಾನ ಪಕ್ಕದ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.
ಕೆಲ ಭಕ್ತರು ರಥದ ಮೇಲೆ ಬಾಳೆಹಣ್ಣು, ಕಾಳುಮೆಣಸು, ಮಂಡಕ್ಕಿ ಮತ್ತಿತರ ವಸ್ತುಗಳನ್ನು ತೂರಿ ಭಕ್ತಿ ಸಮರ್ಪಿಸಿದರು. ರಥದ ಗಾಲಿಗಳಿಗೆ ತೆಂಗಿನಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿ ಕೃತಾರ್ಥರಾದರು.
ರಥೋತ್ಸವ ಸಂದರ್ಭದಲ್ಲಿ ಅರಕೆರೆ ವೀರಗಾಸೆ ತಂಡದವರಿಂದ ಪುರವಂತಿಕೆ ನಡೆಸಿದರು. ದೊಡ್ಡಪೇಟೆ ಕುಂಕುದ್ ಜ್ಯೋತಿ ಪ್ರಕಾಶ್ ಸೇರಿದಂತೆ ಹಲವು ದಾನಿಗಳಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಮಿತಿ ಗೌರವಾಧ್ಯಕ್ಷ ಕೋಟ್ರೇಶಪ್ಪ, ರವಿಕುಮಾರ, ಅಧ್ಯಕ್ಷ ಶಾಂತರಾಜ್, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಚಂದ್ರಾಚಾರ್, ಪ್ರಕಾಶ್, ಖಜಾಂಚಿ ಪ್ರಭಾಕರ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.- - - -16ಎಚ್.ಎಲ್.ಐ2.: