ಮಕ್ಕಳ ಜೊತೆ ದೇವಾಲಯಗಳಿಗೆ ಬನ್ನಿ: ಭೀಮೇಶ್ವರ ಜೋಶಿ

KannadaprabhaNewsNetwork |  
Published : Feb 05, 2026, 01:45 AM IST
4ಕೆಕೆಡಿಯು4ಎ. | Kannada Prabha

ಸಾರಾಂಶ

ಕಡೂರುದೇವಾಲಯಗಳು ಶಾಂತಿ ಮತ್ತು ನೆಮ್ಮದಿಯ ತಾಣಗಳಾಗಿದ್ದು. ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ದೇವಾಲಯಗಳಿಗೆ ಜೊತೆ ಮಕ್ಕಳನ್ನೂ ಕರೆತನ್ನಿ ಎಂದು ಹೊರನಾಡು ಶ್ರೀ ಅನ್ನಪೂರ್ಣಶ್ವರಿ ದೇವಾಲಯದ ಧರ್ಮಕರ್ತರಾದ ಡಾ. ಭೀಮೇಶ್ವರ ಜೋಶಿ ಹೇಳಿದರು.

ಶ್ರೀ ಕಾಳಹಸ್ತೇಶ್ವರ ದೇವಾಲಯ ಜೀರ್ಣೋದ್ಧಾರ । ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ದೇವಾಲಯಗಳು ಶಾಂತಿ ಮತ್ತು ನೆಮ್ಮದಿಯ ತಾಣಗಳಾಗಿದ್ದು. ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ದೇವಾಲಯಗಳಿಗೆ ಜೊತೆ ಮಕ್ಕಳನ್ನೂ ಕರೆತನ್ನಿ ಎಂದು ಹೊರನಾಡು ಶ್ರೀ ಅನ್ನಪೂರ್ಣಶ್ವರಿ ದೇವಾಲಯದ ಧರ್ಮಕರ್ತರಾದ ಡಾ. ಭೀಮೇಶ್ವರ ಜೋಶಿ ಹೇಳಿದರು. ಬುಧವಾರ ತಾಲೂಕಿನ ಸಖರಾಯಪಟ್ಟಣ ಸಮೀಪದ ಶ್ರೀ ಕಾಳಹಸ್ತೇಶ್ವರ ದೇವಾಲಯ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಪ್ರಾರಂಭಗೊಂಡ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ದೇವಾಲಯದ ಇತಿಹಾಸ ಬಹಳಷ್ಟಿದೆ. ಇದರ ಗೋಪುರವೇ ಎಲ್ಲವನ್ನು ಹೇಳುವಂತಿದೆ. ನಾವು ಸಾರ್ಥಕತೆಯೊಂದಿಗೆ ಬದುಕಬೇಕು. ನಮ್ಮ ಮೇಲೆ ದೈವ , ಮಾತಾ ಪಿತೃ ಮತ್ತು ಸಮಾಜದ 3 ಋಣಗಳು ಇವೆ. ಇಂತಹ ದೇವಾಲಯ ಗಳನ್ನು ಪುನರುಜ್ಜೀವನ ಮಾಡಲು ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಮತ್ತು ಶ್ರೀ ವಿಶ್ವಕರ್ಮ ಕಾಳಹಸ್ತೇಶ್ವರ ಸಮಿತಿ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಲ್ಲಿ ಜೀರ್ಣೋದ್ಧಾರಗೊಂಡಿದೆ. ಸಖರಾಯಪಟ್ಟಣದಲ್ಲಿ ದೇವಲೋಕವೇ ನಿರ್ಮಾಣವಾಗಿದೆ ಎಂಬ ಅನುಭಾವ ಎಲ್ಲರಲ್ಲಿಯೂ ಬಂದಿದೆ ಎಂದರು.ಪ್ರಾಸ್ತಾವಿಕವಾಗಿ ಸಮಾಜದ ಮುಖಂಡ ಓಂಕಾರಮೂರ್ತಿ ಮಾತನಾಡಿ, ಮೂರು ವರ್ಷಗಳಿಂದ ಸತತ ಪ್ರಯತ್ನದಿಂದ ಧರ್ಮಸ್ಥಳದ ಸಹಯೋಗ ದಲ್ಲಿ ನಿರ್ಮಾಣವಾಗಿದೆ. ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ವಿಶ್ವಕರ್ಮ ಸಾವಿತ್ರಿ ಪೀಠ ವಡ್ನಾಳಿನ ಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವಕರ್ಮ ಸಮಾಜ ಇತ್ತೀಚೆಗೆ ಎಲ್ಲ ರಂಗದಲ್ಲೂ ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಕಾಳಹಸ್ತೇಶ್ವರ ದೇವಾಲಯ ರಾಜ್ಯದಲ್ಲಿಯೇ ಮಾದರಿ ದೇವಾಲಯ. ಸಂಸ್ಕೃತಿ ಮತ್ತು ಪರಂಪರೆಯನ್ನು ಯಥಾವತ್ತಾಗಿ ಉಳಿಸಿ ನೋಡಲು ಯಾತ್ರಾ ಸ್ಥಳವಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ಕುಟುಂಬದ ಜೊತೆ ದೇವಾಲಯಕ್ಕೆ ಬನ್ನಿ ಎಂದರು.ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಪುರೋಹಿತರಾದ ದಿವಾಕರ ಅಗ್ನಿಹೋತ್ರಿ, ಶಂಕರಯ್ಯ ಆಚಾರ್ಯ, ಶ್ರೀ ರಂಗನಾಥಸ್ವಾಮಿ ದೇವಾಲಯದ ಸಮಿತಿ ನಾಯಕ್ ಸಚ್ಚಿದಾನಂದ್, ಅಜ್ಜಂಪುರ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ,ಸೇವಾ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಹಾಗು , ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

- 4ಕೆಕೆಡಿಯು4.

ಸಖರಾಯಪಟ್ಟಣ ಜೀರ್ಣೋದ್ಧಾರಗೊಂಡ ಶ್ರೀ ಕಾಳಹಸ್ತೇಶ್ವರ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ವಿಶ್ವಕರ್ಮ ಸಾವಿತ್ರಿ ಪೀಠ ವಡ್ನಾಳಿನ ಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾ ಸ್ವಾಮೀಜಿ ಮತ್ತು ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇಗುಲ ಧರ್ಮಕರ್ತ ಶ್ರೀ ಡಾ. ಭೀಮೇಶ್ವರಜೋಶಿ ಉದ್ಘಾಟಿಸಿದರು.

4ಕೆಕೆಡಿಯು4ಎ: ಶ್ರೀ ಕಾಳಹಸ್ತೇಶ್ವರ ದೇವಾಲಯದ ಬ್ರಹ್ಮಕಳಶದ ಲೋಕಾರ್ಪಣೆ ಸಮಾರಂಭಕ್ಕೆ ಸಮಾಜ ಬಾಂಧವರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹೊರೆ ಕಾಣಿಕೆಯನ್ನು ದೇವಾಲಯಕ್ಕೆ ಅರ್ಪಿಸಲು ಮೆರವಣಿಗೆಯಲ್ಲಿ ಸಾಗುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುತ್ತೂಟ್ ಫಿನ್‌ಕಾರ್ಪ್‌ನ ವಡಗಾಂವ ಶಾಖೆಯಲ್ಲಿ ಮಹಿಳಾ ದಿನಾಚರಣೆ
‘ಥ್ಯಾಂಕ್ಸ್‌ ಅಪ್ಪ’ ಕಾದಂಬರಿ ಪ್ರತಿ ಮನೆಯಲ್ಲೂ ಇರಲಿ: ನ್ಯಾ.ಸಂತೋಷ್‌