ಕಾಮೆಡ್‌-ಕೆ ಯುಜಿಇಟಿ, ಯೂನಿಗೇಜ್‌ ಪರೀಕ್ಷೆ ನಾಳೆ

KannadaprabhaNewsNetwork |  
Published : May 09, 2025, 12:40 AM ISTUpdated : May 09, 2025, 03:51 AM IST
Three students passed away before NEET exam

ಸಾರಾಂಶ

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್‌-ಕೆ ಯುಜಿಇಟಿ ಮತ್ತು ಯೂನಿಗೇಜ್‌ ಸಂಯೋಜಿತ ಪರೀಕ್ಷೆಗಳು ಮೇ 10ರಂದು ದೇಶಾದ್ಯಂತ 248 ಕೇಂದ್ರಗಳಲ್ಲಿ ನಡೆಯಲಿದೆ.

 ಬೆಂಗಳೂರು : ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್‌-ಕೆ ಯುಜಿಇಟಿ ಮತ್ತು ಯೂನಿಗೇಜ್‌ ಸಂಯೋಜಿತ ಪರೀಕ್ಷೆಗಳು ಮೇ 10ರಂದು ದೇಶಾದ್ಯಂತ 248 ಕೇಂದ್ರಗಳಲ್ಲಿ ನಡೆಯಲಿದೆ. ಈ ಬಾರಿ ಒಟ್ಟು 1.31, 937 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.

ರಾಜ್ಯದ 150ಕ್ಕೂ ಹೆಚ್ಚು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ದೇಶದ 50ಕ್ಕೂ ಹೆಚ್ಚು ಖಾಸಗಿ ಹಾಗೂ ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿನ ಎಂಜಿನಿಯರಿಂಗ್‌ ಕೋರ್ಸುಗಳ ಪ್ರವೇಶಕ್ಕೆ ಪ್ರತೀ ವರ್ಷದಂತೆ ಈ ವರ್ಷವೂ ಕಾಮೆಡ್‌-ಕೆ ಈ ಪ್ರವೇಶ ಪರೀಕ್ಷೆ ನಡೆಸಲಿದೆ. ಆನ್‌ಲೈನ್‌ ಪರೀಕ್ಷೆ ಇದಾಗಿದ್ದು, ಕರ್ನಾಟಕವೂ ಸೇರಿ ದೇಶದ 28 ರಾಜ್ಯಗಳ 179 ನಗರಗಳ ಒಟ್ಟು 248 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾಮೆಡ್‌-ಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪರೀಕ್ಷೆಗಳು ಬೆಳಗ್ಗೆ 8.30 ರಿಂದ 11.30ರವರೆಗೆ, ಮ.1ರಿಂದ 4 ಗಂಟೆ ಹಾಗೂ 5.30ರಿಂದ ರಾತ್ರಿ 8.39 ರವರೆಗೆ ಒಟ್ಟು ಮೂರು ಪಾಳಿಯಲ್ಲಿ ನಡೆಯಲಿದೆ. ಇದು ಆನ್‌ಲೈನ್ ಪರೀಕ್ಷೆ ಆದರೂ ವಿದ್ಯಾರ್ಥಿಗಳು ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಕಂಪ್ಯೂಟರ್ ಮೂಲಕ ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷೆಗೆ ಬರುವಾಗ ಪ್ರವೇಶ ಪತ್ರದ ಜತೆಗೆ ಸರ್ಕಾರ ನೀಡಿರುವ ಯಾವುದಾದರೂ ಗುರುತಿನ ಚೀಟಿ ಹಾಗೂ ಪಾಸ್‌ಪೋರ್ಟ್ ಅಳತೆಯ ಎರಡು ಫೋಟೋ ತರಬೇಕು. ಪೆನ್ಸಿಲ್ ಮತ್ತು ನೀರಿನ ಬಾಟಲಿಯನ್ನು ಕೇಂದ್ರದ ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರದಲ್ಲಿರುವ ಸೂಚನೆಗಳನ್ನು ಓದಿಕೊಂಡು ಪರೀಕ್ಷೆಗೆ ಹಾಜರಾಗಬೇಕು. ಇನ್ನು ಸರ್ಕಾರದ ಪ್ರವೇಶ ಪರೀಕ್ಷೆಗಳಿಗೆ ನಿಗದಿ ಪಡಿಸಿರುವ ವಸ್ತ್ರಸಂಹಿತೆಯನ್ನೇ ಈ ಪರೀಕ್ಷೆಗೂ ಪಾಲಿಸುವಂತೆ ಕಾಮೆಡ್-ಕೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌