ಧಾರ್ಮಿಕ ಮೌಲ್ಯಗಳ ಪರಿಪಾಲನೆಯಿಂದ ನೆಮ್ಮದಿ

KannadaprabhaNewsNetwork |  
Published : Feb 05, 2025, 12:32 AM IST
4ಸಿಡಿಎನ್‌021) ದರ್ಮಸಭೆಯಲ್ಲಿ ಆರ್ಶಿವಚನ ನೀಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಸಜ್ಜನ ಸತ್ಪುರುಷರ ಸಂಗಮದಲ್ಲಿ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳಲಿದೆ. ಧಾರ್ಮಿಕ ಮೌಲ್ಯಗಳ ಪುನರುತ್ಥಾನ ಮತ್ತು ಪರಿಪಾಲನೆಯಿಂದ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು

ಕನ್ನಡಪ್ರಭ ವಾರ್ತೆ ಚಡಚಣ

ಸಜ್ಜನ ಸತ್ಪುರುಷರ ಸಂಗಮದಲ್ಲಿ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳಲಿದೆ. ಧಾರ್ಮಿಕ ಮೌಲ್ಯಗಳ ಪುನರುತ್ಥಾನ ಮತ್ತು ಪರಿಪಾಲನೆಯಿಂದ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು. ತಾಲೂಕಿನ ಲೋಣಿ ಬಿ.ಕೆ ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಬದುಕು ಎಷ್ಟು ಶ್ರೀಮಂತವಾಗಿದೆ ಅನ್ನುವುದಕ್ಕಿಂತ ಎಷ್ಟು ನೆಮ್ಮದಿಯಿಂದ ಇದ್ದೇವೆ ಎಂಬುದು ಮುಖ್ಯ. ಭಾವನೆ ಒಳ್ಳೆಯದಿದ್ದರೆ ಭಾಗ್ಯ ಬೆನ್ನತ್ತಿ ಬರುತ್ತದೆ. ವಿನಯ ನಿನ್ನಲ್ಲಿದ್ದರೆ ವಿಜಯ ನಿನ್ನದಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಹನೆ ನಿನ್ನದಾದರೆ ಸಕಲವು ನಿನ್ನದಾಗುವುದೆಂದು ಪೂರ್ವಜರು ಹೇಳಿದ್ದಾರೆ. ನಿನ್ನೆ ಸುಖ ಇತ್ತೆಂದು ಇತಿಹಾಸ ಹೇಳುತ್ತದೆ. ನಾಳೆ ಸುಖ ಇರುವುದೆಂದು ವಿಜ್ಞಾನ ಹೇಳುತ್ತದೆ. ಆದರೆ, ಸತ್ಯ ಧರ್ಮದ ಮಾರ್ಗದಲ್ಲಿ ನಡೆದರೆ ಇಂದೇ ಸುಖ ಶಾಂತಿ ದೊರಕುವುದೆಂದು ಧರ್ಮ ಹೇಳುತ್ತದೆ. ಪ್ರಾಚೀನ ಇತಿಹಾಸ ಪವಿತ್ರ ಪರಂಪರೆ ಹೊಂದಿರುವ ಸಿದ್ದೇಶ್ವರ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಧರ್ಮ ಸಮಾರಂಭಗಳನ್ನು ಸಂಯೋಜಿಸಿರುವುದು ತಮ್ಮೆಲ್ಲರ ಧರ್ಮ ಶ್ರದ್ಧೆಗೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮ ಜಾಗೃತಿ ಸಭೆಯ ಮೊದಲು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವ ಹಾಗೂ 1001 ಸುಮಂಗಲೆಯರೊಂದಿಗೆ ಮೆರವಣಿಗೆ ಜರಗಿತು.

ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಧರ್ಮಸಭೆಯಲ್ಲಿ ತಾಯಿಯಂದಿರರ ಪ್ರಾತ ಬಹಳ ಮುಖ್ಯವಾದ್ದು, ತಾಯಿಯದಿರರಿಂದ ನಾವು ಕಾಣುವುದು ದೇವರ ಸ್ವರೂಪದಲ್ಲಿ. ಈ ಭಾಗದ ರೈತರು ನಷ್ಟದಲ್ಲಿ ಇದ್ದಾರೆ. ಅವರಿಗೆ ಶೀಘ್ರದಲ್ಲಿ 1.2 ಟಿಎಂಸಿ ನೀರು ಹರಿಸುವ ಕಾರ್ಯ ನಿರ್ವಹಿಸುತ್ತೇವೆ ಮತ್ತು ಚಡಚಣ ತಾಲೂಕಿನ ಎಲ್ಲಾ ಕೆರೆಗಳನ್ನು ನೀರು ತುಂಬ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.ಮಾಜಿ ಶಾಸಕ ರಾಜು ಆಲಗೂರ ಮಾತನಾಡಿದರು, ಈ ಸಮಾರಂಭದಲ್ಲಿ ಚಂದ್ರಶೇಖರ ಶಿವಾಚಾರ್ಯರು, ಹಿರೇಮಠ ಅಲಮೇಲ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನಾಗಠಾಣ, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಹತ್ತಹಳ್ಳಿ, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ತಡವಲಗಾ, ಶಿವಯೋಗಿ ಶಿವಾಚಾರ್ಯರು, ಪಾನಮಂಗಳೂರ, ತದ್ದೇವಾಡಿಯ ಮಾಹಾಂತೇಶ ಸ್ವಾಮೀಜಿ, ಯುವ ಮುಖಂಡರಾದ ವಿಠ್ಠಲಗೌಡ ಪಾಟೀಲ, ಬಿ.ಎಂ.ಕೋರೆ, ಕೆ.ಎಸ್.ಪಾಟೀಲ, ಎಸ್.ಕೆ.ಪಾಟೀಲ, ಸಿದ್ದೇಶ್ವರ ದೇವರ ಎಲ್ಲಾ ಕಮಿಟಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಕೆ.ಎಸ್.ಪಾಟೀಲ ಸ್ವಾಗತಿಸಿದರು. ಆರ್.ಕೆ.ಪಾಟೀಲ ನಿರೂಪಿಸಿದರು..

PREV