18ಕ್ಕೆ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಸಂಸ್ಮರಣೆ

KannadaprabhaNewsNetwork |  
Published : Jan 16, 2025, 12:46 AM IST
15ಕೆಆರ್ ಎಂಎನ್ 4.ಜೆಪಿಜಿರಾಮನಗರ ತಾಲೂಕು ಬಿಡದಿಯಲ್ಲಿ ಪುರಸಭೆ ಸದಸ್ಯ ಸಿ.ಉಮೇಶ್  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಬಿಜಿಎಸ್ ಸೇವಾ ಸಮಿತಿ ವತಿಯಿಂದ ಜ.18ರಂದು ಬಿಡದಿಯಲ್ಲಿ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 12ನೇ ವರ್ಷದ ಸಂಸ್ಮರಣಾ ಮಹೋತ್ಸವ ಹಾಗೂ 80ನೇ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಿ.ಉಮೇಶ್ ತಿಳಿಸಿದರು.

ರಾಮನಗರ: ಬಿಜಿಎಸ್ ಸೇವಾ ಸಮಿತಿ ವತಿಯಿಂದ ಜ.18ರಂದು ಬಿಡದಿಯಲ್ಲಿ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 12ನೇ ವರ್ಷದ ಸಂಸ್ಮರಣಾ ಮಹೋತ್ಸವ ಹಾಗೂ 80ನೇ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಿ.ಉಮೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜಿಎಸ್ ವೃತ್ತದಲ್ಲಿರುವ ಪೂಜ್ಯಶ್ರೀಗಳ ಪುತ್ಥಳಿಗೆ ವಿಶೇಷ ಪೂಜೆ, ಮಂಗಳಾರತಿ ನೆರವೇರಿಸಲಾಗುವುದು. ಆಗಮಿಸುವ ಸಹಸ್ರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಕಡಬಗೆರೆ ಮುನಿರಾಜು ಅವರಿಂದ ಗೀತಗಾಯನ, ರಕ್ತದಾನ ಶಿಬಿರ ಇತ್ಯಾದಿ ಸೇವಾಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರು ನಮ್ಮ ಜಿಲ್ಲೆಯ ಬಿಡದಿ ಬಾನಂದೂರು ಮಣ್ಣಿನಲ್ಲಿ ಜನಿಸಿದ ಮಹಾ ಪುರುಷರಾಗಿದ್ದು, ಶ್ರೀಗಳ ಸ್ಮರಣೆ ಕಾರ್ಯವನ್ನು ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಆದಿಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿಸಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಪುರುಷರಾಗಿದ್ದಾರೆ. ಶಿಕ್ಷಣ, ಆರೋಗ್ಯ ಸೇರಿದಂತೆ ಅಂಧರಿಗೆ ಬೆಳಕಾಗಿ, ಅನ್ನದಾಸೋಹ, ಪರಿಸರ ಕ್ಷೇತ್ರಗಳಿಗೆ ಅವರು ನೀಡಿರುವ ಕೊಡುಗೆಗಳು ಅಪಾರ. ಅಂತಹ ಮಹಾನ್ ಪುರುಷರನ್ನು ಸ್ಮರಿಸುವ ಅವಕಾಶ ನಮಗೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಉಮೇಶ್ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಎಲ್.ಚಂದ್ರಶೇಖರ್ ಮಾತನಾಡಿ, ಬಿಡದಿ ಬಿಜಿಎಸ್ ಸೇವಾ ಸಮಿತಿಯಿಂದ ಸಂಸ್ಮರಣೆ ಹಾಗೂ ಜಯಂತ್ಯುತ್ಸವ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಈ ವರ್ಷವೂ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಭಾಗವಹಿಸುವ ಮೂಲಕ ಅಭೂತ ಪೂರ್ವ ಬೆಂಬಲ ನೀಡಿ ಕಾರ್ಯಕ್ರಮವನ್ನು ಎಲ್ಲರೂ ಯಶಸ್ವಿ ಮಾಡೋಣ ಎಂದು ತಿಳಿಸಿದರು.

ಬಾನಂದೂರು ಗ್ರಾಮದ ಮುಖಂಡರು, ಪುರಸಭಾ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಬಿಡದಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ಬಿಡದಿ ರೋಟರಿ ಸೆಂಟ್ರಲ ಪದಾಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪುರಸಭೆ, ಪೊಲೀಸ್ ಇಲಾಖೆ, ಬೆಸ್ಕಾಂ ಅಧಿಕಾರಿಗಳು, ಸಮಾಜ ಸೇವಕರು ಹಾಗೂ ಬಿಜಿಎಸ ಭಕ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಸಿ.ಉಮೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಡದಿ ಬಿಜಿಎಸ್ ಸೇವಾ ಸಮಿತಿ ಖಜಾಂಚಿ ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎಂ.ರಾಜಶೇಖರ್, ಶಿವಕುಮಾರ್, ನಿರ್ದೇಶಕರಾದ ರಾಜಶೇಖರ್, ಸುರೇಶ್ ಬಾಬು, ಭಾನುಪ್ರಕಾಶ್, ಶ್ರೀನಿವಾಸ್ (ಜಾಮು), ಶಿವಲಿಂಗಯ್ಯ, ಪುರಸಭಾ ಸದಸ್ಯರಾದ ಹೊಂಬಯ್ಯ, ನವೀನ್‌ಕುಮಾರ್, ಕರ್ನಾಟಕ ರೈತ ಸಂಘದ ರಾಜ್ಯ ಗೌರವ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಎಲ್.ಚಂದ್ರಶೇಖರ್, ಶಿವರಾಜು, ರೇಣುಕಪ್ಪ, ಮಹೇಶ್, ನಾಗೇಶ್ ಸೇರಿದಂತೆ ಬಿಜಿಎಸ್ ಸೇವಾ ಸಮಿತಿ ಪದಾಧಿಕಾರಿಗಳು ಇದ್ದರು.

ಬಾಕ್ಸ್ ................

ಉಮೇಶ್‌ಗೆ ಅಭಿನಂದನೆ

ಬಿಜಿಎಸ್ ಸೇವಾ ಸಮಿತಿ ಅಧ್ಯಕ್ಷರು, ಪುರಸಭಾ ಸದಸ್ಯರಾದ ಸಿ.ಉಮೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು, ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಬಿಜಿಎಸ್ ವೃತ್ತದಲ್ಲಿ ಕೇಕ್ ಕತ್ತರಿಸಿ, ಕ್ರೇನ್ ಮೂಲಕ ಬೃಹತ್ ಕಿತ್ತಳೆ ಮತ್ತು ಗುಲಾಬಿ ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

15ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ತಾಲೂಕು ಬಿಡದಿಯಲ್ಲಿ ಪುರಸಭೆ ಸದಸ್ಯ ಸಿ.ಉಮೇಶ್ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 12ನೇ ವರ್ಷದ ಸಂಸ್ಮರಣಾ ಮಹೋತ್ಸವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ