ಗದಗ: ಗಾನಯೋಗಿ ಶಿವಯೋಗಿ ಲಿಂ.ಪಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪುಟ್ಟರಾಜ ಕವಿಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಉಭಯ ಗುರುಗಳ ಜಾತ್ರಾ ಮಹೋತ್ಸವ ಜೂ. 22ರಿಂದ 26ರ ವರೆಗೆ ಜರುಗಲಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರೀ ಹೆಡಿಗ್ಗೊಂಡ ಕಾರ್ಯಕ್ರಮದ ವಿವರ ನೀಡಿ, ಜೂ. 26ರಂದು ಸಂಜೆ 6ಕ್ಕೆ ಮಹಾರಥೋತ್ಸವ ಜರಗುಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿವಲಿಂಗಶಾಸ್ತ್ರಿಗಳು ಸಿದ್ದಾಪುರ, ವೀರೇಶ ಕಿತ್ತೂರ, ಸಿದ್ದೇಶ್ವರಶಾಸ್ತ್ರಿಗಳು ತೆಲ್ಲೂರು, ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರಿಗಳು ಬೇವೂರ, ಸದಾನಂದ ಶಾಸ್ತ್ರೀಗಳು ಹರ್ಲಾಪುರ, ಎನ್.ಎಸ್. ಕೆಂಗಾರ, ಪ್ರಕಾಶ ಬಸರಿಗಿಡದ, ವಸಂತಗೌಡ ಪೊಲೀಸ್‌ಪಾಟೀಲ, ಪರಶುರಾಮ ಕಟ್ಟಿಮನಿ, ಸಂಗಮೇಶ ದುಂದೂರ, ಪಿ.ಸಿ. ಹಿರೇಮಠ, ಎಂ.ಆರ್. ಹಿರೇಮಠ, ಚನ್ನಬಸಯ್ಯ ಬಂಕಾಪುರಮಠ ಉಪಸ್ಥಿತರಿದ್ದರು.ಕುಮಾರಶ್ರೀ ಪ್ರಶಸ್ತಿ ಪ್ರದಾನ: ಜೂ. 26ರಂದು ಸಂಜೆ 6ಕ್ಕೆ ಮದರಿಯ ರಾಚಯ್ಯ ಶಾಸ್ತ್ರಿ ಹಿರೇಮಠ (ಪ್ರವಚನ ಕ್ಷೇತ್ರ), ನಾಗಾವಿಯ ಲಕ್ಷ್ಮಣ ತಳವಾರ (ಗಾಯನ ಕ್ಷೇತ್ರ) ಹಾಗೂ ಡಾ. ಹನುಮಂತ ಕೊಡಗಾನೂರ ಅವರಿಗೆ ಕುಮಾರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅದೇ ರೀತಿ ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿಯನ್ನು ರಾಮಣ್ಣ ಮಲ್ಲಿಗವಾಡ (ಸಂಗೀತ ಕ್ಷೇತ್ರ) ಅವರಿಗೆ ಪ್ರದಾನ ಮಾಡಲಾಗುವುದು.