ಹೊಸಪೇಟೆ: ಮಹರ್ಷಿಗಳ ಜಯಂತಿ ಆಚರಣೆಗೆ ಸೀಮಿತಗೊಳಿಸಿದೆ, ಯುವ ಜನಾಂಗವು ಮಹರ್ಷಿಗಳು ಸಮಾಜಕ್ಕೆ ನೀಡಿದ ಧ್ಯೇಯೋದೇಶ ನಿತ್ಯ ಜೀವನದಲ್ಲಿ ಅರಿತುಕೊಂಡು ಜೀವನ ಸಾಗಿಸಿದಾಗ ಮಾತ್ರ ಉತ್ತಮ ಜೀವನ ಸಾಗಿಸಲು ಸಾಧ್ಯವಾಗಲಿದೆ ಎಂದು ಡಿವೈಎಫ್‌ಐ ಮುಖಂಡ ಈಡಿಗರ ಮಂಜುನಾಥ ಹೇಳಿದರು.
ಸಿಪಿಐಎಂನ ಮುಖಂಡ ಬಿಸಾಟಿ ಮಹೇಶ್ ಮಾತನಾಡಿ, ಕೆಳ ಸಮುದಾಯದವರಿಗೆ ನೀಡಿದ ಮೀಸಲಾತಿ ಜಾರಿ ಮಾಡದೇ ಸುಪ್ರೀಂ ಕೋರ್ಟ್ ಆದೇಶ ಈಗಿನ ಸರ್ಕಾರಳು ಪಾಲನೆ ಮಾಡುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೇ ಹೊರೆತು ಬದಲಾಗಿ ಮೀಸಲಾತಿ ರದ್ದು ಮಾಡುವಲ್ಲಿ ಮುಂದಾಗಿವೆ. ಸೆಕ್ಷನ್ 9 ಕಾಲಂರಲ್ಲಿ ಮೀಸಲಾತಿ ಹೆಚ್ಚಿಸುವ ಕುರಿತು ಸರ್ಕಾರಗಳು ಮುಂದಾಗಬೇಕು ಮತ್ತು ಈ ಸಮುದಾಯ ಅಭಿವೃದ್ಧಿ ಹೊಂದುವಲ್ಲಿ ಯೋಜನೆ ರೂಪಿಸಬೇಕು ಎಂದರು.
ಸಿಪಿಐಎಂ ಮುಖಂಡ ಆರ್.ಭಾಸ್ಕರ್ ರೆಡ್ಡಿ, ಬಿಸಾಟಿ ತಾಯಪ್ಪ ನಾಯಕ, ಕೆ. ನಾಗರತ್ನಮ್ಮ, ಎಂ. ಗೋಪಾಲ್, ಕಲ್ಯಾಣಯ್ಯ, ಭರತ್, ಡಿವೈಎಫ್ಐ ಮುಖಂಡ ನಿಕಿಲ್ ಕುಮಾರ್, ವಿ.ಸ್ವಾಮಿ, ಹನುಮಾನಾಯಕ್, ಪವನ್ ಕುಮಾರ್, ಶಿವಾ ರೆಡ್ಡಿ, ಎರಿಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.