ತುದಿಪೇಟೆ ಸರ್ಕಾರಿ ಶಾಲೆಯ ಆರಂಭೋತ್ಸವ

KannadaprabhaNewsNetwork |  
Published : Jun 02, 2026, 01:15 AM IST
ತುದಿಪೇಟೆ ಸ.ಮಾ.ಹಿರಿಯ ಪ್ರಾ.ಶಾಲೆ (ಪಿ.ಎಂ.ಶ್ರೀ)ಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಉದ್ಗಾಟನೆ | Kannada Prabha

ಸಾರಾಂಶ

ತರೀಕೆರೆಕಣ್ಣು ಹಾಯಿಸಿದ ಕಡೆಯಲೆಲ್ಲಾ ತಳಿರು ತೋರಣಗಳು, ಬಂಟಿಂಗ್ಸ್.ಗಳನ್ನು ಹಾಕಿ ಶಾಲೆಗೆ ಮಕ್ಕಳನ್ನು ಸ್ವಾಗತಿಸಿದ್ದರಿಂದ ಶಾಲೆ ಒಳಗಡೆ ಹೊರಗಡೆ ಖುಷಿಯೋ ಖುಷಿ, ಸರತಿಯ ಸಾಲಿನಲ್ಲಿ ನಿಂತ ಪುಟಾಣಿಗಳ ಮುಗ್ದ ಮಕ್ಕಳ ಮುಖದಲ್ಲಿ ಮಂದಹಾಸ ಮಿನುಗಿತ್ತು.

- ಹೂ ಹೂಗುಚ್ಚ, ಸಿಹಿ ನೀಡಿ ಸ್ವಾಗತ । ಸಡಗರ ಸಂಭ್ರಮದಿಂದ ಶಾಲೆಗೆ ಪ್ರವೇಶಿಸಿದ ಮಕ್ಕಳು

ಕನ್ನಡಪ್ರಭ ವಾರ್ತೆ ತರೀಕೆರೆ

ಕಣ್ಣು ಹಾಯಿಸಿದ ಕಡೆಯಲೆಲ್ಲಾ ತಳಿರು ತೋರಣಗಳು, ಬಂಟಿಂಗ್ಸ್.ಗಳನ್ನು ಹಾಕಿ ಶಾಲೆಗೆ ಮಕ್ಕಳನ್ನು ಸ್ವಾಗತಿಸಿದ್ದರಿಂದ ಶಾಲೆ ಒಳಗಡೆ ಹೊರಗಡೆ ಖುಷಿಯೋ ಖುಷಿ, ಸರತಿಯ ಸಾಲಿನಲ್ಲಿ ನಿಂತ ಪುಟಾಣಿಗಳ ಮುಗ್ದ ಮಕ್ಕಳ ಮುಖದಲ್ಲಿ ಮಂದಹಾಸ ಮಿನುಗಿತ್ತು.ಪಟ್ಟಣದ ತುದಿಪೇಟೆ ಸರ್ಕಾರಿ ಹಿರಿಯ ಮಾದರಿ ಶಾಲೆ (ಪಿ.ಎಂ.ಶ್ರೀ)ಯಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವ ತಾಲೂಕು ಮಟ್ಟದ ಉದ್ಘಾಟನಾ ಸಮಾರಂಭಕ್ಕೆ ಮುಂಚೆ ಕಂಡು ಬಂದ ದೃಶ್ಯಗಳು ಇದು.ಪುರಸಭೆ ಉಪಾಧ್ಯಕ್ಷೆ ಗೀತಾ ಗಿರಿರಾಜ್, ಶಾಲೆ ಎಸ್.ಡಿಎಂಸಿ ಅಧ್ಯಕ್ಷ ಮಹೇಂದ್ರ ಮತ್ತು ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಪರಶುರಾಮಪ್ಪ, ಮಂಜುನಾಥ್, ಪೋಷಕರೆಲ್ಲರೂ ಮಕ್ಕಳಿಗೆ ಹೂವು, ಹೂಗುಚ್ಚ ಹಾಗೂ ಸಿಹಿ ವಿತರಿಸಿ ಶುಭ ಕೋರಿ ಶಾಲೆಗೆ ಸ್ವಾಗತಿಸಿದರು.ಜನಪ್ರತಿನಿಧಿಗಳಿಂದ, ಎಸ್.ಡಿ.ಎಂ.ಸಿ.ಅದ್ಯಕ್ಷರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ, ಶಾಲೆಯ ಶಿಕ್ಷಕರಿಂದ ಹೂವು ಹೂಗುಚ್ಚ, ಸಿಹಿ ಸ್ವೀಕರಿಸಿದರು.ಪುರಸಭೆ ಉಪಾದ್ಯಕ್ಷೆ ಗೀತಾ ಗಿರಿರಾಜ್ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸದ ಉದ್ಘಾಟನೆ ನೆರವೇರಿಸಿ ಮಾತನಾಡಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಕರೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಪರಶುರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯುವ ವಿವಿಧ ಸೌಲಭ್ಯಗಳ ವಿವರ ನೀಡಿ, ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಯಶಸ್ವಿಯಾಗಿ ದಾಖಲಾತಿ ಆಂದೋಲನದ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಪ್ರೋತ್ಸಾಹಿಸಲಾಗಿದೆ. ಎರಡೂ ತಾಲೂಕುಗಳ 33 ಶಾಲೆಗಳಲ್ಲಿ ದ್ವಿಬಾಷ ತರಗತಿ ಪ್ರಾರಂಭಿಸಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಆಟೋಪಕರಣ ವಿತರಿಸಲಾಗುತ್ತಿದೆ ಎಂದು ಹೇಳಿದರು.ಎಸ್.ಡಿಎಂಸಿ ಅಧ್ಯಕ್ಷ ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಮಂಜುಳ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜುನಾಥ್, ಶಾಲೆ ಮುಖ್ಯೋಪಾಧ್ಯಾಯ ಜಗದೀಶ್, ಲೋಕೇಶಪ್ಪ , ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.-

1ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ತುದಿಪೇಟೆ ಸ.ಮಾ.ಹಿರಿಯ ಪ್ರಾ.ಶಾಲೆ (ಪಿ.ಎಂ.ಶ್ರೀ)ಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸದಲ್ಲಿ ಪುರಸಭೆ ಉಪಾಧ್ಯಕ್ಷೆ ಗೀತಾ ಗಿರಿರಾಜ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಹೇಂದ್ರ ಮತ್ತು ಸದಸ್ಯರು, ಬಿ.ಇ.ಒ.ಪರಶುರಾಮಪ್ಪ ಎಚ್.ಎ. ಮಂಜುನಾಥ್ ಮಕ್ಕಳಿಗೆ ಹೂ, ಸಿಹಿ ವಿತರಿಸಿ ಶಾಲೆಗೆ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಭವಿಷ್ಯವಿಲ್ಲ: ಡಾ.ಶಂಕರ್
ಶಾಲೆ ಪ್ರಾರಂಭೋತ್ಸವ: ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ