ಕೋಡಿಕೊಪ್ಪದ ಹುಚ್ಚೀರಪ್ಪಜ್ಜನವರ ಶತಮಾನೋತ್ಸವದ ಜ್ಯೋತಿ ಯಾತ್ರೆಗೆ ಚಾಲನೆ

KannadaprabhaNewsNetwork |  
Published : Jan 28, 2025, 12:46 AM IST
ಕೋಡಿಕೊಪ್ಪದ ಹುಚ್ಚಿರಪ್ಪಜ್ಜನವರ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಜ್ಯೋತಿ ಯಾತ್ರೆಗೆ ಮಲ್ಲಯ್ಯ ಚಪ್ಪನಮಠ ಚಾಲನೆ ನೀಡಿದರು. | Kannada Prabha

ಸಾರಾಂಶ

ಕೋಡಿಕೊಪ್ಪದ ಹುಚ್ಚೀರಪ್ಪಜ್ಜನವರ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಜ್ಯೋತಿ ಯಾತ್ರೆಗೆ ಹುಚ್ಚೀರಪ್ಪಜ್ಜನವರ ಟ್ರಸ್ಟ್‌ ಕಮಿಟಿ ಚೇರ್‌ಮನ್‌ ಮಲ್ಲಯ್ಯ ಚಪ್ಪನಮಠ ಭಾನುವಾರ ಚಾಲನೆ ನೀಡಿದರು. ಜ. 30ರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ವೀರಪ್ಪಜ್ಜನವರ ಮಠದಿಂದ ಜ್ಯೋತಿಯಾತ್ರೆ ಆರಂಭಿಸಲಾಯಿತು.

ನರೇಗಲ್ಲ: ಕೋಡಿಕೊಪ್ಪದ ಹುಚ್ಚೀರಪ್ಪಜ್ಜನವರ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಜ್ಯೋತಿ ಯಾತ್ರೆಗೆ ಹುಚ್ಚೀರಪ್ಪಜ್ಜನವರ ಟ್ರಸ್ಟ್‌ ಕಮಿಟಿ ಚೇರ್‌ಮನ್‌ ಮಲ್ಲಯ್ಯ ಚಪ್ಪನಮಠ ಭಾನುವಾರ ಚಾಲನೆ ನೀಡಿದರು.ಜ. 30ರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ವೀರಪ್ಪಜ್ಜನವರ ಮಠದಿಂದ ಜ್ಯೋತಿಯಾತ್ರೆ ಆರಂಭಿಸಲಾಯಿತು.

ಆನಂತರ ಮಾತನಾಡಿದ ಮಲ್ಲಯ್ಯ ಚಪ್ಪನಮಠ ಅವರು, ಶ್ರೀಮಠದ ಅಜ್ಜನವರ 100ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನೆರವೇರುತ್ತಿರುವ ಶತಮಾನೋತ್ಸವ ಕಾಯಕ್ರಮದ ಕುರಿತು ಮಠದ ಭಕ್ತರಿಗೆ ಸಂಪೂರ್ಣ ಮಾಹಿತಿ ನೀಡುವ ಜತೆಗೆ ಆಮಂತ್ರಿಸುವ ನಿಟ್ಟಿನಲ್ಲಿ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆ ನಾಲ್ಕು ದಿನಗಳ ಕಾಲ ಸುತ್ತಮುತ್ತಲ ನೂರಾರು ಗ್ರಾಮಗಳಿಗೆ ತೆರಳಲಿದೆ. ಭಕ್ತರು ಸತತ 9 ದಿನಗಳ ಕಾಲ ನೆರವೇರುವ ಅಜ್ಜನವರ ಪುರಾಣ ಪ್ರವಚನ, ಕೊನೆಯ ಮೂರುದಿನಗಳ ಕಾಲ ನೆರವೇರುವ ಶತಮಾನೋತ್ಸವದ ಉದ್ಘಾಟನೆ, ಉಚಿತ ಸಾಮೂಹಿಕ ವಿವಾಹ, ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಲು ಮನವಿ ಮಾಡಿದರು.

ಡಾ. ಎಲ್‌.ಎಸ್‌. ಗೌರಿ ಕಾರ್ಯಕ್ರಮದ ವಿವರಣೆ ನೀಡಿದರು. ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ ಮಾತನಾಡಿದರು. ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಮಾಜಿ ಅಧ್ಯಕ್ಷ ಸುನೀಲ ಬಸವರಡ್ಡೇರ, ಶಿವನಗೌಡ ಪಾಟೀಲ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಮಲ್ಲಿಕಾರ್ಜುನಗೌಡ ಮಲ್ಲನಗೌಡ್ರ, ಪ್ರಭುಗೌಡ ನಾಡಗೌಡ್ರ, ಅಲ್ಲಾಭಕ್ಷಿ ನದಾಫ, ಮೈಲಾರಪ್ಪ ಚಳ್ಳಮರದ, ಶೇಖಪ್ಪ ಜುಟ್ಲದ, ಶೇಖಪ್ಪ ಕೆಂಗಾರ, ಡಾ. ಮಲ್ಲಿಕಾರ್ಜುನಗೌಡ ಪಾಟೀಲ, ಬಸವರಾಜ ಧರ್ಮಾಯತ, ವೀರೇಶ ಜೋಗಿ, ಕೃಷ್ಣಪ್ಪ ಜುಟ್ಲದ, ಮಂಜುನಾಥ ಕಳಕೊಣ್ಣವರ, ಮೃತ್ಯುಂಜಯ ಅಣ್ಣಿಗೇರಿಮಠ, ಚಂದ್ರಶೇಖರ ಅಣ್ಣಿಗೇರಿಮಠ ಇದ್ದರು.

ಜ. 26ರಂದು ಪ್ರಾರಂಭಗೊಂಡ ಜ್ಯೋತಿಯಾತ್ರೆಯು ದ್ಯಾಂಪುರ, ತೊಂಡಿಹಾಳ, ಬಂಡಿಹಾಳ, ಬಿನ್ನಾಳ, ಚಿಕ್ಕೇನಕೊಪ್ಪ ಸಿದ್ನೇಕೊಪ್ಪ, ಸೋಂಪುರ, ಜಾಲಿಕೊಪ್ಪ, ನಿಂಗಾಪುರ ಕ್ರಾಸ್‌, ಇಟಗಿ, ಬೆಣಕಲ್‌, ಮಸಬಹಂಚಿನಾಳ, ಮಾಡಲಗೇರಿ, ಗರ‍್ಲೆಕೊಪ್ಪ, ಕುಕನೂರ, ರಾಜೂರ, ಸಂಗನಾಳ, ಕಲ್ಲೂರ ಯಲಬುರ್ಗಾ, ಕರಮುಡಿ, ಹಾಲಕೆರೆ, ನಿಡಗುಂದಿಕೊಪ್ಪ, ನಿಡಗುಂದಿ ಹೀಗೆ ನಾಲ್ಕು ದಿನಗಳ ಕಾಲ ಜ್ಯೋತಿಯಾತ್ರೆ ಸಂಚರಿಸಿ ನಾಲ್ಕನೇ ದಿನ ಕಳಕಾಪುರ, ಮಾರನಬಸರಿ, ಜಕ್ಕಲಿ, ಬೂದಿಹಾಳ, ಮಲ್ಲಾಪುರ ಮಾರ್ಗವಾಗಿ ಮರಳಿ ಶ್ರೀಮಠಕ್ಕೆ ತಲುಪಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ