ನೆಲಮಂಗಲ: ನೇಕಾರ ಸಮುದಾಯದಿಂದ ಏ.2ರಂದು ದೇವರದಾಸಿಮಯ್ಯ ಜಯಂತಿ ಹಾಗು ಉಚಿತ ಸಾಮೂಹಿಕ ವಿವಾಹೋತ್ಸವ ಆಯೋಜಿಸಲಾಗಿದೆ ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ತಿಳಿಸಿದರು.
ಕಳೆದ 25 ವರ್ಷ ಗಳಿಂದಲೂ ಸಮಾಜದ ಹಿತ ಕಾಯುವ ವಿಶ್ವ ವಿವಾಹ ವೇದಿಕೆ ಸಂಸ್ಥಾಪಕ ರಾಮಸ್ವಾಮಿ ನೇಕಾರರ ವಧು ವರರ ಸಮಾವೇಶ ನಡೆಸುತ್ತ ಬಂದಿರುವುದು ಉತ್ತಮ ಕೆಲಸ, ಸಮಾಜದ ಬಂಧುಗಳು ಅವಕಾಶ ಉಪಯೋಗಿಸಿಕೊಳ್ಳುವಂತೆ ಕನ್ನಡಪ್ರಭ ದಿನಪತ್ರಿಕೆ ಸಮನ್ವಯ ಸಂಪಾದಕ ಮಲ್ಲಿಕಾರ್ಜುನಯ್ಯ ತಿಳಿಸಿದರು.
310ಕ್ಕೂ ಹೆಚ್ಚು ವಧುವರರು ನೋಂದಣಿ:ನೇಕಾರ ಸಮುದಾಯದ ವಧು-ವರರ ಸಮಾವೇಶದಲ್ಲಿ ರಾಜ್ಯದ ಅನೇಕ ಜಿಲ್ಲೆಗಳ 150ಕ್ಕೂ ಹೆಚ್ಚು ವಧು, 160ಕ್ಕೂ ಹೆಚ್ಚು ವರರು ನೋಂದಣಿ ಮಾಡಿಕೊಂಡಿದ್ದಾರೆ. ವಧು-ವರರ ಮಾಹಿತಿ ಪಡೆದುಕೊಂಡ ಸಂಬಂಧಿಕರು ಪರಿಚಯ ಮಾಡಿಕೊಂಡು ಮುಂದಿನ ತೀರ್ಮಾನ ಮಾಡಲು ವೇದಿಕೆ ಕಲ್ಪಿಸಿಕೊಡಲಾಗಿದೆ. ವಿಶ್ವವಿವಾಹ ವೇದಿಕೆಯಿಂದ ಏ.2ರಂದು ಸಾಮೂಹಿಕ ವಿವಾಹೋತ್ಸವ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ವಿವಾಹ ವೇದಿಕೆ ಸಂಸ್ಥಾಪಕ ರಾಮಸ್ವಾಮಿ ಚಲನಚಿತ್ರ ಹಿರಿಯ ನಟ ಡಾ.ಚಿಕ್ಕಹೆಜ್ಜಾಜಿ ಮಹದೇವ, ರಾಜ್ಯ ದೇವಾಂಗ ನೌಕರರ ಸಂಘ ಅಧ್ಯಕ್ಷ ಭಾಸ್ಕರಯ್ಯ, ದೇವಾಂಗ ಸೇವಾ ಸಮಾಜ ಅಧ್ಯಕ್ಷ ಉಮಾಶಂಕರ್, ದೇವಾಂಗ ಸಂಘದ ಅಧ್ಯಕ್ಷ ಧನರಾಜ್, ವಿಶ್ವ ವಿವಾಹ ವೇದಿಕೆ ಮುಖಂಡರು ಉಪಸ್ಥಿತರಿದರು.
ಪೊಟೊ-26ಕೆಎನ್‌ಎಲ್‌ಎಮ್1-ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿಯ ಗಾಯತ್ರಿ ಪೀಠ ಮಹಾಸಂಸ್ಥಾನದ ದೇವಾಂಗ ಸಮುದಾಯ ಭವನದಲ್ಲಿ ವಿಶ್ವ ವಿವಾಹ ವೇದಿಕೆ ಆಯೋಜಿಸಿದ್ದ ನೇಕಾರ ಸಮುದಾಯದ ವಧು-ವರರ ಸಮಾವೇಶದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀ ನಾರಾಯಣ, ಕನ್ನಡಪ್ರಭ ದಿನಪತ್ರಿಕೆ ಸಮನ್ವಯ ಸಂಪಾದಕ ಮಲ್ಲಿಕಾರ್ಜುನಯ್ಯ, ಸಂಸ್ಥಾಪಕ ರಾಮಸ್ವಾಮಿ, ನಟ ಡಾ.ಚಿಕ್ಕಹೆಜ್ಜಾಜಿ ಮಹದೇವ, ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ ಅಧ್ಯಕ್ಷ ಭಾಸ್ಕರಯ್ಯ, ದೇವಾಂಗ ಸೇವಾ ಸಮಾಜ ಅಧ್ಯಕ್ಷ ಉಮಾಶಂಕರ್, ದೇವಾಂಗ ಸಂಘದ ಅಧ್ಯಕ್ಷ ಧನರಾಜ್ ಇತರರಿದ್ದರು.