ಸಂಚಾರ ನಿಯಮ ಭಂಜಕರಿಗೆ ಕಮೀಷನರ್‌ ಖಡಕ್‌ ವಾರ್ನಿಂಗ್‌

KannadaprabhaNewsNetwork |  
Published : Feb 20, 2026, 01:30 AM IST
ಫೋಟೋ- ಪೊಲೀಸ್‌ ಕಮೀಷ್ನರ್‌ ಡಾ. ಶರಣಪ್ಪ ಢಗೆ | Kannada Prabha

ಸಾರಾಂಶ

Commissioner Khadak issues stern warning to traffic violators

-ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸೋ ಚಾಳಿ ಇದ್ದವರನ್ನ ಗುರುತಿಸಿ ಡ್ರೈವಿಂಗ್‌ ಲೈಸನ್ಸ್‌ ರದ್ದು । ಪೊಲೀಸ್‌ ಕಮೀಷನರ್‌ ಡಾ. ಶರಣಪ್ಪ ಎಚ್ಚರಿಕೆ

--ಕನ್ನಡಪ್ರಭ ವಾರ್ತೆ ಕಲಬುರಗಿ

ಪದೇ ಪದೇ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸೋದನ್ನೇ ಚಾಳಿ ಮಾಡಿಕೊಂಡಿರೋ ಕಲಬುರಗಿ ಸಂಚಾರ ನಿಯಮ ಭಂಜಕರನ್ನು ಇನ್ಮುಂದೆ ಸುಮ್ಮನೆ ಬಿಡಲಾಗದು ಎಂದಿರುವ ನಗರ ಪೊಲೀಸ್‌ ಕಮೀಷನರ್‌ ಡಾ. ಶರಣಪ್ಪ ಇಂತಹವರನ್ನು ಗುರುತಿಸಿ ಅವರ ವಾಹನ ಚಾಲನಾ ಪತ್ರವನ್ನೇ ರದ್ದು ಪಡಿಸೋದಾಗಿ ಗುಡುಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶರಣಪ್ಪನವರು, ಕಲಬುರಗಿ ದಿನೇ ದಿನೇ ಬೆಳೆಯುತ್ತಿದೆ, ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಲಭ್ಯ ಮೂಲ ಸವಲತ್ತಿನಲ್ಲಿಯೇ ಎಲ್ಲರೂ ಸುಗಮ ಸಂಚಾರ ನಡೆಸಬೇಕಿದೆ. ಹೀಗಿರುವಾಗ ಇರೋ ನಿಯಮಗಳನ್ನೇ ಗಾಳಿಗೆ ತೂರಿದರೆ ಹೇಗೆ? ಅದನ್ನು ನೋಡುತ್ತ ಕೂಡಲಾಗದು. ಈಗಾಗಲೇ ನಗರ ವ್ಯಪ್ತಿಯಲ್ಲಿ ಸಂಚಾರ ಸುಧಾರಣೆ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಮುಂಬರೋ 1 ತಿಂಗಳಲ್ಲಿ ಪದೇ ಪದೇ ನಿಯಮ ಉಲ್ಲಂಘಿಸುವ ಬೈಕ್‌, ಕಾರ್‌, ಸೇರಿದಂತೆ ಎಲ್ಲಾ ನಮೂನೆ ವಾಹನ ಚಾಲಕರು ಹೊಂದಿರುವ ಪರವಾನಿಗೆಯನ್ನೇ ರದ್ದು ಪಡಿಸುತ್ತೇವೆಂದು ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ರಾಮ ಮಂದಿರ, ಖರ್ಗೆ ಬಂಕ್‌, ಕಾಕಡೆ ಚೌಕ್‌, ಹಾಗರಗಾ ಕ್ರಾಸ್‌, ಮಣ್ಣೂರ ಆಸ್ಪತ್ರೆ ಸರ್ಕಲ್‌ ಸೇರಿದಂತೆ ನಗರದ ಒಳಗಿನ ಹಾಗೂ ರಿಂಗ್ ರಸ್ತೆಯ ಮಹತ್ವದ ಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ನಾವು ಚಾಲಕರ ಮೇಲೆ ನಿಗಾ ಇಡಲಿದ್ದೇವೆ.

ಚಾಲಕರು ಸಿಗ್ನಲ್‌ ಜಂಪ್‌, ತ್ರಿಬಲ್‌ ರೈಡ್‌, ಬೇಕಾಬಿಟ್ಟಿ ವಾಹನ ಚಲಾಯಿಸದು, ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿರುವ ಪ್ರಕರಣ ಎನಾದರೂ ಪುನರಾವರ್ತನೆಯಾದಲ್ಲಿ ಅಂತಹವರನ್ನು ಗುರುತಿಸಿ ಡ್ರೈವಿಂಗ್‌ ಲೈಸನ್ಸ್‌ ರದ್ದು ಪಡಿಸುವಂತಹ ಖಡಕ್‌ ಕ್ರಮಕ್ಕೂ ನಾವು ಹಿಂಜರಿಯೋದಿಲ್ಲ. ಇದರಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ನಿಶ್ಚಿತ. ಇನ್ನೊಂದು ತಿಂಗಳಲ್ಲಿ ಇದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡು ಮುಂದಡಿ ಇಡಲಿದ್ದೇವೆಂದು ಡಾ. ಶರಣಪ್ಪ ಹೇಳಿದ್ದಾರೆ.

ಕಾಯಂ ಬ್ಯಾರಿಕೇಡ್‌ ಹಾಕುವ ಮೂಲಕ ರಸ್ತೆ ವಿಭಜಿಸಿ ಸಂಚಾರ ದಟ್ಟಣೆ ಆಗದಂತೆ ಪರಿಹಾರ ಕ್ರಮಕ್ಕೆ ಮುಂದಾಗಿದೆ. ಸ್ಟೇನ್‌ ಬಜಾರ್‌, ಹಳೆ ಎಸ್ಪಿ ಕಚೇರಿ, ಸೂಪರ್‌ ಮಾರ್ಕೇಟ್‌ ಸೇರಿದಂತೆ ಹಲವೆಡೆ ಇಂತಹ ಕ್ರಮ ಯಶ ಕಂಡಿದೆ. ಬರುವ ದಿನಗಳಲ್ಲಿ ರಾಮ ಮಂದಿರ ಸೇರಿದಂತೆ ರಿಂಗ್‌ ರಸ್ತೆಯಲ್ಲಿರುವ ಜಂಕ್ಷನ್‌ಗಳಲ್ಲಿಯೂ ಸುಗಮ ಸಂಚಾರಕ್ಕೆ ತಕ್ಕ ಮಟ್ಟಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಸಂಚಾರ ನಿಯಮ ಪಾಲಿಸುವಂತೆ ತಿಳಿಸುವುದು ಕೇವಲ ಪೊಲೀಸರ ಕೆಲಸವಲ್ಲ, ವಾಹನ ಸವಾರರೂ ಇದಕ್ಕೆ ಕೈ ಜೋಡಿಸಬೇಕು. ಅಂದಾಗ ಮಾತ್ರ ಸುಗಮ ಸಂಚಾರ ಸುಲಭವಾಗಲಿದೆ ಎಂದರಲ್ಲದೆ ಸವಾರರು ಪದೇ ಪದೇ ನಿಯಮ ಉಲ್ಲಂಘನೆಯನ್ನೇ ಚಾಳಿ ಮಾಡಿಕೊಂಡಿರುವ ಹಲವು ಪ್ರಕರಣ ಪೊಲೀಸ್‌ ಗುರುತಿಸಿದ್ದಾರೆ. ಅಂತಹವರ ಲೈಸನ್ಸ್‌ ರದ್ದು ಮಾಡ್ತೇವೆ ಎಂದು ಪುನರುಚ್ಚರಿಸಿದರು.

ರಾಮ ಮಂದಿರ ವೃತ್ತದಲ್ಲಿ ಹಲವು ಸರ್ವಿಸ್‌ ರಸ್ತೆಗಳಿದ್ದು ಇಲ್ಲಿ ಅದ್ಹೇಗೆ ಸಂಚಾರ ಸಮಸ್ಯೆಗೆ ಪರಿಹಾರ ರೂಪಿಸಬೇಕು ಎಂಬ ಚಿಂತನೆ ಸಾಗಿದೆ ಎಂದರು.

.......ಬಾಕ್ಸ್‌......

ಅಂತರಾಜ್ಯ ಬೈಕ್‌ ಕಳ್ಳರ ಬಂಧಿಸಿ 14 ಬೈಕ್‌ ಜಪ್ತಿ

ಕಲಬುರಗಿ, ಬೀದರ್‌ ಸೇರದಂತೆ ಕರ್ನಾಟಕ ಹಾಗೂ ಪಕ್ಕದ ತೆಲಂಗಾಣದ ಸಂಗಾರೆಡ್ಡಿ, ಹೈದ್ರಾಬಾದ್‌ ಸೇರಿದಂತೆ ಗಡಿಯಲ್ಲಿರುವ ಹಲವು ನಗರಗಳಿಂದ ಬೈಕ್‌ ಕಳವು ಮಾಡಿ ಮಾರಾಟ ಮಾಡಿಕೊಂಡಿದ್ದ ಅಂತರಾಜ್ಯ ಬೈಕ್‌ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದು ಅವರಿಂದ 14 ಬೈಕ್‌ ಜಪ್ತಿ ಮಾಡಿಕೊಂಡಿದ್ದಾರೆ. ಮಹಾಲಕ್ಷ್ಮೀ ಬಡಾವಣೆಯ ಪ್ರಕಾಶರಾವ್‌ ಕೋಲಾರಕರ್‌ ತಮ್ಮ ಬೈಕ್‌ ಕಳವಿನ ದೂರು ನೀಡಿದ್ದರು. ಈ ದೂರಿನ ಬೆನ್ನು ಹತ್ತಿ ಪೊಲೀಸರು ತನಿಖೆಗೆ ನಡೆಸುತ್ತಿದ್ದಾಗ ಚಪ್ಪಲಿ ಅಂಗಡಿ ಕೆಲಸದಲ್ಲಿರುವ ಮೊಹ್ಮದ್‌ ನಾಸೀರ್‌, ಮೆಕ್ಯಾನಿಕ್‌ ಮೊಹ್ಮದ್‌ ಆರೀಫ್‌ ಬಂಧಿತರಾಗಿದ್ದಾರೆಂದು ತಿಳಿಸಿರುವ ಕಮೀಷನರ್‌ ಡಾ. ಶರಣಪ್ಪ ಢಗೆ, ಬೈಕ್‌ ಕಳ್ಳರ ಪತ್ತೆ ಹಚ್ಚುವಲ್ಲಿ ಯಶ ಕಂಡಿರುವ ಪೊಲೀಸ್‌ ತಂಡಕ್ಕೆ ಅಭಿನಂದಿಸಿದ್ದಾರೆ.

ಫೋಟೋ- ಟ್ರಾಫೀಕ್‌ 1, ಟ್ರಾಫೀಕ್‌ 2 ಮತ್ತು ಟ್ರಾಫೀಕ್‌ 3

ಕಲಬುರಗಿ ನಗರದ ರೇಲ್ವೆ ಸ್ಟೇಷನ್‌ ಮುಂದಿನ ರಸ್ತೆಯಲ್ಲಿ ಪೊಲೀಸರು ಈಚೆಗೆ ಅಳವಡಿಸಿರುವ ಕಾಯಂ ಬ್ಯಾರಿಕೇಡ್‌ ಸಾಲಿನಿಂದ ಇಲ್ಲಿ ನಿತ್ಯ ರಾತ್ರಿ 6 ರಿಂದ 9 ಗಂಟೆಯವರೆಗೂ ಕಾಡುತ್ತಿದ್ದ ಸಂಚಾರ ದಟ್ಟಣೆ ಸಮಸ್ಯೆಗೆ ಕೊಂಚ ಪರಿಹಾರ ದೊರಕಿದೆ.

ಫೋಟೋ- ಪೊಲೀಸ್‌ ಕಮೀಷ್ನರ್‌ ಡಾ. ಶರಣಪ್ಪ ಢಗೆ

--

ಬಾಕ್ಸ್‌... ಐಟಂ ಫೋಟೋ

ಬೈಕ್‌ ಕಳ್ಳರುಮೊಹ್ಮದ್‌ ನಾಸೀರ್‌, ಮೊಹ್ಮದ್‌ ಆರೀಫ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ