ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಪಟ್ಟಣದ ಸಂವಿಧಾನ ಸೌಧದಲ್ಲಿ ಕುವೆಂಪು ಟ್ರಸ್ಟ್ ಶಿವಗಂಗ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೋಟ್‌ಬುಕ್, ಇತರೆ ಸಲಕರಣೆಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ, ಟೈಲರಿಂಗ್ ತರಬೇತಿ ಪಡೆದವರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಳೆದ 24 ವರ್ಷಗಳಿಂದಲೂ ಕುವೆಂಪು ಟ್ರಸ್ಟ್ ಮಕ್ಕಳ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ಕಮ್ಮಿ ಸಾಧನೆಯಲ್ಲ. ಜೀವನದಲ್ಲಿ ಜಯ ಅಪಜಯ, ಟೀಕೆಗಳನ್ನು ಸಮಾನವಾಗಿ ಯಾರು ಸ್ವೀಕರಿಸುತ್ತಾರೋ ಅಂತಹವರಿಂದ ಮಾತ್ರ ಇಂತಹ ಸಮಾಜ ಸೇವೆ ಮಾಡಲು ಸಾಧ್ಯ ಎಂದರು.ನನ್ನದೊಂದು ಫೌಂಡೇಷನ್ ಇದೆ. ಅದರಲ್ಲಿ ಬರುವ ಆದಾಯದಲ್ಲಿ ಪ್ರತಿ ವರ್ಷವೂ ಶೇ.40 ರಷ್ಟು ಹಣವನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ನೀಡುತ್ತಿದ್ದೇನೆ. ರಘುಚಂದನ್ ಫೌಂಡೇಶನ್ನಿಂದ ರಾಜ್ಯದಲ್ಲಿ 25 ಬಡ ಮಕ್ಕಳು ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವವರು ಯಾವ ಕಾಲೇಜಿನಲ್ಲಿ ಓದುತ್ತಾರೋ ಅಲ್ಲಿ ಓದಿಸುತ್ತೇವೆ. ಗ್ರಾಮೀಣ ಪ್ರದೇಶದ ಆರು, ಏಳು, ಎಂಟನೇ ತರಗತಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕಗಳನ್ನು ಪಡೆದಿರುವ ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲಾಗುವುದು. ಚಳ್ಳಕೆರೆ, ಹೊಸದುರ್ಗ, ಹಿರಿಯೂರು, ಚಿತ್ರದುರ್ಗದ ಮಕ್ಕಳು ಹೆಚ್ಚಿನ ಪ್ರಯೋಜನ ಪಡೆದುಕೊಂಡಿದ್ದಾರೆ. ಮುಂದಿನ ವರ್ಷ ಕುವೆಂಪು ಟ್ರಸ್ಟ್‌ಗೆ ರಘುಚಂದನ್ ಫೌಂಡೇಶನ್ನಿಂದ ಐವತ್ತು ಸಾವಿರ ರು.ಗಳನ್ನು ನೀಡುತ್ತೇನೆ ಎಂದು ತಿಳಿಸಿದರು.