ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಕಂದಕೂರು

KannadaprabhaNewsNetwork |  
Published : Jul 02, 2024, 01:38 AM IST
ಗುರುಮಠಕಲ್ ಸಮೀಪದ ಬೆಳಗುಂದಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಅನುದಾನ ಯೋಜನಯಡಿ ರಸ್ತೆ, ಸೇತುವೆ ಕಾಮಗಾರಿಕೆಯ ಉದ್ಘಾಟನೆ ಹಾಗೂ ಅಲ್ಪಸಂಖ್ಯಾತರ ಕಾಲೊನಿಯ ಅಭಿವೃದ್ಧಿಯ ಕಾಮಗಾರಿಗಳ ಶಂಕು ಸ್ಥಾಪನೆಯನ್ನು ಶಾಸಕ ಶರಣಗೌಡ ಕಂದಕೂರು ನೇರವೇರಿಸಿದರು. | Kannada Prabha

ಸಾರಾಂಶ

ಗುರುಮಠಕಲ್ ಸಮೀಪದ ಬೆಳಗುಂದಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಅನುದಾನ ಯೋಜನಯಡಿ ರಸ್ತೆ, ಸೇತುವೆ ಕಾಮಗಾರಿಕೆಯ ಉದ್ಘಾಟನೆ ಹಾಗೂ ಅಲ್ಪಸಂಖ್ಯಾತರ ಕಾಲೊನಿಯ ಅಭಿವೃದ್ಧಿಯ ಕಾಮಗಾರಿಗಳ ಶಂಕು ಸ್ಥಾಪನೆಯನ್ನು ಶಾಸಕ ಶರಣಗೌಡ ಕಂದಕೂರು ನೇರವೇರಿಸಿದರು

ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭ

ಕನ್ನಡಪ್ರಭ ವಾರ್ತೆ ಗುರುಮಠಕಲ್

ತಂದೆಯವರು ಶಾಸಕರಾಗಿದ್ದಾಗ ವಿಶೇಷ ಕಾಳಜಿ ವಹಿಸಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಈ ಭಾಗದಲ್ಲಿ ಹಾಕಿಕೊಂಡಿದ್ದರು. ಅದರಂತೆ ನಾನೂ ಕೂಡ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.

ಸಮೀಪದ ಬೆಳಗುಂದಿ ಗ್ರಾಮದಲ್ಲಿ 2023-24ನೇ ಸಾಲಿನ ಕೆಕೆಆರ್‌ಡಿಬಿಯ 10ಕೋಟಿ ರು. ಅನುದಾನದಲ್ಲಿ ಬೆಳಗುಂದಿ-ಆನೂರು ಕೆ. ರಸ್ತೆ, ಭೀಮನಹಳ್ಳಿ-ಆನೂರು ಕೆ. ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಉದ್ಘಾಟನೆ ಹಾಗೂ ಬೆಳಗುಂದಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಾಲೊನಿಯಲ್ಲಿನ 10 ಲಕ್ಷ ರು. ಅನುದಾನದ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಈ ಭಾಗಕ್ಕೆ ಸ್ವಾತಂತ್ರ್ಯ ಬಂದ ನಂತರವು ಉತ್ತಮವಾದ ರಸ್ತೆ, ಶಾಲೆ, ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಇದೀಗ ವಿವಿಧ ಯೋಜನೆಗಳು ನೆರವೇರಲ್ಲಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಅನುಕೂಲತೆಗಳು ಲಭಿಸಲಿವೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರ ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಪಂ ಅಧ್ಯಕ್ಷೆ ರೇಣುಕಾ ಮೋನಪ್ಪ ನಾಯಕ್, ಹಿರಿಯ ಮುಖಂಡ ಸಣ್ಣ ಸಿದ್ರಾಮಪ್ಪಗೌಡ, ಬಸವರಾಜಪ್ಪಗೌಡ ಗೊಂದಡಗಿ, ತಾಪಂ ಮಾಜಿ ಸದಸ್ಯ ಬಸಪ್ಪಗೌಡ ಬೆಳಗುಂದಿ, ಸಿದ್ದಪ್ಪಗೌಡ, ವಿಶ್ವನಾಥರೆಡ್ಡಿಗೌಡ, ಚಂದ್ರುಗೌಡ ಸೈದಾಪುರ, ಗುರುನಾಥರೆಡ್ಡಿಗೌಡ, ಬಸಪ್ಪಗೌಡ, ಬಸ್ಸುಗೌಡ, ಬಂದುಗೌಡ ಭೀಮನಹಳ್ಳಿ, ರಾಜೇಶ ಶೆಟ್ಟಿ, ಸಿದ್ದುಗೌಡ ಹಿರೆನೂರು, ನರಸಪ್ಪ ಕವಡೆ, ಶಿವರಾಜ ವಡ್ಲೂರು, ಸಾಬರೆಡ್ಡಿ, ಏಸು ಬೆಳಗುಂದಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಬೀದಿ ನಾಯಿಗಳು ಶೀಘ್ರ ಶೆಲ್ಟರ್‌ಗೆ : ರಾವ್‌
ಸಿದ್ದು ಅಹಿಂದ ಲೀಡರ್‌ ಆಗಿದ್ದರೆ ಪುತ್ರ ಕ್ಷೇತ್ರ ಆಯ್ಕೆ ಏಕೆ?: ಗೌಡ