ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಕಲ್ಲುಬಾವಿಪಾಳ್ಯ ಶಾಲಾ ಮುಂಭಾಗ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರೆವೆರಿಸಿ ಮಾತನಾಡಿದ ಅವರು. ಇಂದು ಒಟ್ಟು ೧ ಕೋಟಿ ೩೦ಲಕ್ಷ ರು. ವೆಚ್ಚದಲ್ಲಿ ಈ ಭಾಗದ ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದ್ದು ಸುರಿದ ಮಳೆ ಹಾಗೂ ಪ್ರವಾಹದಿಂದ ಹಾಳಾದ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಜ್ಜೆನಹಳ್ಳಿ ಗ್ರಾಮಕ್ಕೆ ಹೋಗುವಂತಹ ಹೇಮಾವತಿ ನೀರು ಹರಿಯುವ ಹಳ್ಳದ ಸೇತುವೆಯನ್ನು ಒಟ್ಟು ೪೦ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಲಾಗುವುದು ಹಾಗೂ ಇದರೊಂದಿಗೆ ಹೊಸಪಾಳ್ಯ ಮುಖ್ಯ ರಸ್ತೆಯಿಂದ ಮಾಸ್ತಮ್ಮ ದೇವಿ ದೇವಾಸ್ಥಾನದವರೆಗೆ ಸಿಸಿ ರಸ್ತೆ ಹಾಗೂ ಗಂಟಗನಪಾಳ್ಯರಸ್ತೆಯಲ್ಲಿ ಎಲ್ ಎಲ್‌ಸಿಗೆ ಕಾಂಕ್ರೀಟ್ ಹಾಕುವ ಕಾಮಗಾರಿಯನ್ನು ೪೦ಲಕ್ಷ ರು.ವೆಚ್ಚದಲ್ಲಿ ಮತ್ತು ರಾಜಯ್ಯನ ಪಾಳ್ಯದಿಂದ ಅಜ್ಜೆನಹಳ್ಳಿಯವರೆಗೆ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿಯನ್ನು ಸಹ ಇಂದು ಗುದ್ದಲಿ ಪೂಜೆ ಮಾಡಿದ್ದು ಬಹುದಿನಗಳಿಂದ ಈ ಭಾಗದ ಜನರ ಬೇಡಿಕೆಯಾಗಿತ್ತು. ಇದರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಕಾಮಗಾರಿಯ ವೇಳೆ ಸಾರ್ವಜನಿಕರು ಸಹಕಾರ ನೀಡಬೇಕು ರಸ್ತೆಯನ್ನು ಗುಣಮಟ್ಟದಲ್ಲಿರುವಂತೆ ನೋಡಿಕೊಳ್ಳಿ ಇದು ನಮ್ಮದೇ ರಸ್ತೆ ಎಂಬ ಭಾವನೆ ಮೂಡಿಸಿಕೊಳ್ಳಿ ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು. ಅಜ್ಜೇನಹಳ್ಳಿಯ ಮಾಜಿ ತಾ.ಪಂ.ಸದಸ್ಯ ರಮೇಶ್ ಮಾತನಾಡಿ, ನಮ್ಮ ಗ್ರಾಮಕ್ಕೆ ಶಾಸಕರು ಮನೆಬಾಗಿಲಿಗೆ ಮನೆ ಮಗ ಕಾರ್ಯಕ್ರಮದ ಸಂದರ್ಭದಲ್ಲಿ ಭೇಟಿ ನೀಡಿದ ವೇಳೆ ನಮ್ಮ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಬರುವಂತಹ ರಸ್ತೆಯಲ್ಲಿ ಹಳ್ಳವಿದ್ದು ಅದರಲ್ಲಿ ಹೇಮಾವತಿ ನೀರು ಹರಿಯುತ್ತದೆ. ಆ ಸಂದರ್ಭದಲ್ಲಿ ದ್ವಿಚಕ್ರವಾಹನಗಳಲ್ಲಿ ಓಡಾಡಲು ಮತ್ತು ವೃದ್ದರು ಮಕ್ಕಳು ಓಡಾಡಲು ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಶಾಸಕರು ಅಂದು ಈ ಸೇತುವೆ ಹಾಗೂ ರಸ್ತೆಯನ್ನು ಮಾಡಿಸುವುದಾಗಿ ತಿಳಿಸಿದ್ದರು. ಅದರಂತೆ ಇಂದು ಇದರ ಕಾರ್ಯಕ್ಕೆ ಚಾಲನೆ ನೀಡಿರುವುದು ನಮ್ಮ ಗ್ರಾಮಸ್ಥರಿಗೆ ಖುಷಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಯೋಗಮಾದವನಗರದ ಆಶೋಕ್ ಮಾತನಾಡಿ, ಮಳೆಗಾಲದಲ್ಲಿ ಈ ಭಾಗದಲ್ಲಿ ಓಡಾಡಲು ತುಂಬಾ ತೊಂದರೆಯಾಗುತ್ತಿದ್ದು ಈ ಬಗ್ಗೆ ಮಾನ್ಯ ಶಾಸಕರಿಗೆ ಅರ್ಜಿಸಲ್ಲಿಸಿದ್ದೆವು ಆ ಸಂದರ್ಭದಲ್ಲಿ ನಮಗೆ ಭರವಸೆ ನೀಡಿದಂತೆ ಈ ಭಾಗದಲ್ಲಿ ಇಂದು ಒಂದು ಕೋಟಿ ೩೦ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ ಎಂದರು. ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಧರ್ಮೆಗೌಡರು, ನಾಗರಾಜು, ಹೇಮಾವತಿ, ಮಹೇಶ್, ಮರುಳಿಧರ್, ಗೋವರ್ಧನ್, ಲಿಂಗರಾಜು ಎಚ್.ಎಂ, ಸುಧಾನಂದಾ, ವೆಂಕಟಪ್ಪ ಪಿಡಿಒಗಳಾದ ಪರಶುರಾಮ್ , ಬೈರಪ್ಪ ಸೇರಿದಂತೆ ಇತರರು ಇದ್ದರು.