ಶಿಕ್ಷಣ ಕ್ಷೇತ್ರದ ಸಮಸ್ಯೆ ಪರಿಹರಿಸಲು ಬದ್ಧ: ಶ್ರೀನಿವಾಸ್‌

KannadaprabhaNewsNetwork |  
Published : Jun 10, 2024 12:30 AM IST
೯ಕೆಎಲ್‌ಆರ್-೩ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ನೂತನ ಸದಸ್ಯ ಡಿ.ಟಿ.ಶ್ರೀನಿವಾಸ್‌ಅವರು ವಿಧಾನಪರಿಷತ್ ಆಯ್ಕೆಯಾದ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಕ್ಕಲೇರಿ ಡಾ.ನಾರಾಯಣಸ್ವಾಮಿ ನೇತೃತ್ವದಲ್ಲಿ ಸಮುದಾಯದ ಮುಖಂಡರು ಸನ್ಮಾನಿಸಿದರು. | Kannada Prabha

ಸಾರಾಂಶ

ಶಿಕ್ಷಕರು ವೇತನ ತಾರತಮ್ಯ, ಬಡ್ತಿ ಸಮಸ್ಯೆ, ಕಾಲ್ಪನಿಕ ವೇತನ ಸಮಸ್ಯೆ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಸೇವಾ ಅಭದ್ರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇದನ್ನು ಪರಿಹರಿಸಲು ಯತ್ನಿಸುವುದಾಗಿ ಎಂಎಲ್ಸಿ ಶ್ರೀನಿವಾಸ್‌ ಭರವಸೆ

ಕನ್ನಡಪ್ರಭ ವಾರ್ತೆ ಕೋಲಾರಶೈಕ್ಷಣಿಕ ರಂಗದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಶಿಕ್ಷಕರು ನನಗೆ ವಿಧಾನಪರಿಷತ್‌ನಲ್ಲಿ ಧ್ವನಿಯೆತ್ತಲು ನೀಡಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಪ್ರಗತಿಗೆ ಕೈಲಾದಷ್ಟು ಶ್ರಮಿಸುವುದಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ನೂತನ ಸದಸ್ಯ ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.ವಿಧಾನಪರಿಷತ್ ಆಯ್ಕೆಯಾದ ಹಿನ್ನಲೆಯಲ್ಲಿ ಕೆಆರ್.ಪುರಂನ ತಮ್ಮ ನಿವಾಸದಲ್ಲಿ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಕ್ಕಲೇರಿ ಡಾ.ನಾರಾಯಣಸ್ವಾಮಿ ನೇತೃತ್ವದಲ್ಲಿ ಸಮುದಾಯದ ಮುಖಂಡರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಗೆಲುವಿಗೆ ಶ್ರಮಿಸಿದವರಿಗೆ ಕೃತಜ್ಞತೆ

ನಮ್ಮದು ಹಿಂದುಳಿದ ಸಮುದಾಯವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಅವಕಾಶ ನೀಡಿದರು. ತಮ್ಮ ಗೆಲುವಿಗೆ ಕಾರಣರಾದ ಎಲ್ಲಾ ಐದು ಜಿಲ್ಲೆಗಳ ಶಿಕ್ಷಕರು, ಕಾಂಗ್ರೆಸ್ ಪಕ್ಷದ ಮುಖಂಡರು ಸರ್ಕಾರಿ,ಖಾಸಗಿ ಶಾಲೆಗಳ ಸಂಘಗಳ ಪದಾಧಿಕಾರಿಗಾಳಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.೭ನೇ ವೇತನ ಆಯೋಗದ ವರದಿ ಜಾರಿಗೆ ನಮ್ಮ ಸರ್ಕಾರ ಬದ್ದವಾಗಿದೆ, ಈಗಾಗಲೇ ಇದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಎನ್‌ಪಿಎಸ್ ರದ್ದತಿ ಕುರಿತು ಕಳೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದು, ಅದರ ಜಾರಿಗೂ ಸರ್ಕಾರ ಕ್ರಮವಹಿಸಲಿದೆ ಎಂದು ತಿಳಿಸಿದರು.ಸೇವಾ ಭದ್ರತೆಗೆ ಕ್ರಮ

ಶಿಕ್ಷಕರು ವೇತನ ತಾರತಮ್ಯ, ಬಡ್ತಿ ಸಮಸ್ಯೆ, ಕಾಲ್ಪನಿಕ ವೇತನ ಸಮಸ್ಯೆ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಸೇವಾ ಅಭದ್ರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಎಲ್ಲ ಸಮಸ್ಯೆಗಳನ್ನು ಒಮ್ಮೆಲೆ ಪರಿಹರಿಸಲು ಅಸಾಧ್ಯವಾದರೂ ಕೈಲಾದಷ್ಟು ಸಮಸ್ಯೆಗಳ ಪರಿಹಾರಕ್ಕೆ ಶಕ್ತಿ ಮೀರಿ ಶ್ರಮಿಸುವೆ ಎಂದರು.

ವಿಧಾನಪರಿಷತ್‌ಗೆ ಕಳೆದ ಬಾರಿ ಪದವೀಧರ ಕ್ಷೇತ್ರದಿಂದಲೇ ಆಯ್ಕೆ ಬಯಸಿದ್ದೆ, ಪಕ್ಷೇತರನಾಗಿ ಕಣಕ್ಕಿಳಿದು ಕಡಿಮೆ ಅಂತರದಲ್ಲಿ ಸೋಲುಂಡಿದ್ದೆ ಎಂದ ಅವರು, ಈ ಬಾರಿ ಶಿಕ್ಷಕರು ನನ್ನ ಕೈಬಿಡಲಿಲ್ಲ, ನನ್ನ ಗೆಲುವಿಗೆ ಪಕ್ಷದ ಎಲ್ಲಾ ಶಾಸಕರು, ಮುಖಂಡರು, ಕಾರ್ಯಕರ್ತರು ಕೈಜೋಡಿಸಿದ್ದಾರೆ ಎಂದರು.ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ಯಾದವ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಶ್ರೀನಿವಾಸಯಾದವ್, ಸಂಘದ ಪದಾಧಿಕಾರಿಗಳಾದ ನಿವೃತ್ತ ಪಿಡಿಒ ನಾಗರಾಜ್, ವಕೀಲ ದಿವಾಕರ್, ಕಿಲಾರಿಪೇಟೆ ಮಣಿ, ಅಮ್ಮೇರಹಳ್ಳಿ ಮಂಜುನಾಥ್, ಮಾಯಂಡಿ ಮನೋಹರ್, ಚಲಪತಿ, ಪ್ರಶಾಂತ್ ಯಾದವ್, ಚೆಂಜಿಮಲೆ ಮುರಳಿ,ಶ್ರೀನಿವಾಸಪುರ ರವಿ,ತಿಗಳ ಕ್ಷೇಮಾಭಿವೃದ್ದಿ ಸಂಘದ ಫಲ್ಗುಣ ಇದ್ದರು.

PREV