
ಕನ್ನಡಪ್ರಭ ವಾರ್ತೆ ಕಲಬುರಗಿ
ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ವಿಶ್ವಾಮಿತ್ರ ಪುರಸ್ಕಾರ ಮತ್ತು ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.ಬ್ರಾಹ್ಮಣ ಸಮಾಜಕ್ಕೆ ರಾಜಕೀಯದಲ್ಲಿ ಇನ್ನು ಹೆಚ್ಚಿನ ಆದ್ಯತೆ ನೀಡಬೇಕು. ಮುಖ್ಯಮಂತ್ರಿಗಳು ಬ್ರಾಹ್ಮಣ ಆಬಿವೃದ್ಧಿ ಮಂಡಳಿಗೆ ಸಾಕಷ್ಟು ಅನುದಾನ ನೀಡುತ್ತಿದ್ದಾರೆ ಎಂದರು.
ವಿಪ್ರ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಂಡಳಿ ಮಾಡುತ್ತಿದೆ. ಮಂಡಳಿಗೆ ಈಗ ನೀಡುತ್ತಿರುವ ಅನುದಾನ ಸಾಲದು, ಇನ್ನು ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.ಗ್ಯಾರಂಟಿ ಯೋಜನೆಯಿಂದ ಸಮಾಜ ಪರಿವರ್ತನೆಗೆ ಕಾರಣವಾಗಿದೆ. ಯಾರು ಕಷ್ಟದಲ್ಲಿದ್ದಾರೆ ಅವರ ನೆರವಿಗೆ ಬರುವ ಕೆಲಸ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಕಲಬುರಗಿಯ ಗುರುರಾಘವೇಂದ್ರ ಸ್ವಾಮಿ ಭಕ್ತ ವೃಂದಕ್ಕೆ ಸಿ.ಎ.ಸೈಟ್ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಪಂ.ವಿನೋದಾಚಾರ್ಯ ಗಲಗಲಿ, ಪಂ.ಗೋಪಾಲಾಚಾರ್ಯ ಅಕಮಂಚಿ, ರಾಘವೇಂದ್ರ ಕುಲಕರ್ಣಿ ಕೋಗನೂರ, ಪ್ರಶಾಂತ ಕೊರಳ್ಳಿ, ಶೋಭಟ ದೇಸಾಯಿ, ಕೃಷ್ಣಾಜಿ ಕುಲಕರ್ಣಿ, ಆರ್.ವಿ. ನಾಡಗೌಡ, ಗುರುರಾಜ ದೇಶಪಾಂಡೆ ವಕೀಲ್, ಡಾ.ಶಶಾಂಕ ರಾಮದುರ್ಗ, ರಂಗನಾಥ ದೇಸಾಯಿ, ನಾಗೇಶ್ವರರಾವ ಮಾಲಿಪಾಟೀಲ್, ವೆಂಕಟೇಶ ಕುಲಕರ್ಣಿ, ವಿನಾಯಕಕುಲಕರ್ಣಿ, ಅವಿನಾಶ ಕುಲಕರ್ಣಿ ಹಾಗೂ ವಿಪ್ರ ಮುಖಂಡರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿಪ್ರ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪುರಸ್ಕಾರ ನೀಡಲಾಯಿತು.-----
ನಾನು ಬ್ರಾಹ್ಮಣ ಎಂದು ಧೈರ್ಯದಿಂದ ಹೇಳುವ ಶಕ್ತಿ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರಲ್ಲಿತ್ತು. ಸ್ವ ಸಮಾಜದ ಅಭಿಮಾನದ ಜೊತೆ ಅವರು ಎಲ್ಲ ಸಮಾಜವನ್ನು ಗೌರವದಿಂದ ಕಾಣುತ್ತಿದ್ದರು.ದಿನೇಶ್ ಗುಂಡೂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ
ವಿಪ್ರ ಸಮಾಜಕ್ಕೆ ಆದ್ಯತೆ ನೀಡಿ: ಜಯಸಿಂಹಬ್ರಾಹ್ಮಣ ಸಮಾಜಕ್ಕೆ ಸರ್ಕಾರಗಳು ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಬಿವೃದ್ಧಿ ಮಂಡಳಿ ಅಧ್ಯಕ್ಷ ಆಸಗೋಡು ಜಯಸಿಂಹ ಹೇಳಿದರು. ಸರ್ವೆಜನಃ ಸುಖಿನೋ ಭವಂತು ಎಂಬ ಮಂತ್ರ ವಿಪ್ರರು ಪಠಿಸುತ್ತಾರೆ ಎಂದರು. ನಿಜಾಮರ ವಿರುದ್ಧ ಹೋರಾಟ ಮಾಡುವುದರಲ್ಲಿ ಬ್ರಾಹ್ಮಣರು ಮೊದಲಿಗರಾಗಿದ್ದರು ಎಂದರು.