ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ಧ; ಮುನಿಯಪ್ಪ

KannadaprabhaNewsNetwork |  
Published : Jul 17, 2026, 01:30 AM IST
ಬೆಂಗಳೂರಿನ ಮಾದಾರ ಮಹಾಸಭಾ ಕಚೇರಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಮಾದಾರ ಮಹಾಸಭಾ ಅಧ್ಯಕ್ಷರಾಗಿ ನೇಮಕವಾದ ಯಳ್ಳಂಬಳಸೆ ಗೋವಿಂದಪ್ಪ ಅವರಿಗೆ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ಸಚಿವ ಕೆ.ಎಚ್. ಮುನಿಯಪ್ಪ ನೇಮಕಾತಿ ಆದೇಶ ಪತ್ರ. ಮಾಜಿ ಸಚಿವ ಎಚ್. ಆಂಜನೇಯ, ಬಿ.ಎನ್.ಚಂದ್ರಪ್ಪ, ಎಂ.ಎಚ್.ಚ.ಅದ್ರಪ್ಪ, ನಾಗರಾಜ್, ಲಕ್ಷ್ಮಣ್ ಸಂಪರ್ಕಿಸಿದ್ದರು.) | Kannada Prabha

ಸಾರಾಂಶ

ಬೀರೂರುಅತ್ಯಂತ ಹಿಂದುಳಿದ ಸಮಾಜವಾದ ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಮಾದಾರ ಮಹಾಸಭೆಯನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಕರ್ನಾಟಕ ಮಾದರ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ರಾಜ್ಯ ಮಾದರ ಮಹಾಸಭಾದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ವೈ.ಟಿ.ಗೋವಿಂದಪ್ಪಗೆ ಆದೇಶ ಪತ್ರ ವಿತರಣೆ

ಕನ್ನಡಪ್ರಭ ವಾರ್ತೆ ಬೀರೂರು

ಅತ್ಯಂತ ಹಿಂದುಳಿದ ಸಮಾಜವಾದ ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಮಾದಾರ ಮಹಾಸಭೆಯನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಕರ್ನಾಟಕ ಮಾದರ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಬೆಂಗಳೂರಿನ ಗಾಂಧಿ ಭವನದ ಮುಂಭಾಗದ ಕರ್ನಾಟಕ ರಾಜ್ಯ ಮಾದರ ಮಹಾಸಭಾ ಕಚೇರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಾದರ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಯಳ್ಳಂಬಳಸೆ ವೈ.ಟಿ.ಗೋವಿಂದಪ್ಪ ಅವರಿಗೆ ಆದೇಶ ಪತ್ರ ನೀಡಿ ಮಾತನಾಡಿ ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚಿನ ಸಮುದಾಯವಿದ್ದು, ಅವರನ್ನು ಮುನ್ನೆಲೆಗೆ ತರಲು ಶಿಕ್ಷಣವೇ ಅಸ್ತ್ರ. ಮಾದಿಗ ಸಮುದಾಯ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಒತ್ತು ನೀಡಬೇಕಾಗಿದೆ ಎಂದರು.

ರಾಜಕೀಯದಲ್ಲಿ ಪ್ರಾತಿನಿಧ್ಯ ಪಡೆದಾಗ ಮಾತ್ರ ಏನನ್ನಾದರು ಸಾಧಿಸಲು ಸಾಧ್ಯ. ರಾಜ್ಯದ ಮಾದಿಗ-ಮಾದರ ಹಾಗೂ ಸಂಬಂಧಿತ ಸಮುದಾಯಗಳ ಜನಾಂಗದವರನ್ನು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದಿರುವುರಿಂದ ಅವರು ಈ ಎಲ್ಲಾ ಕ್ಷೇತ್ರಗಳಲ್ಲಿ ನಿರಂತರವಾಗಿ ಅಭಿವೃದ್ಧಿ ಹೊಂದುವ ಎಲ್ಲಾ ಕ್ರಮ ಕೈಗೊಳ್ಳಲು ಮಾದರ ಮಹಾಸಭಾದ ಪ್ರಮುಖ ಉದ್ದೇಶ. ಎಲ್ಲರ ಒಗ್ಗಟ್ಟಿನ ಮೂಲಕ ಮಾದರ ಮಾಹಾಸಭಾ ರಾಜ್ಯದಲ್ಲಿ ಹೆಮ್ಮರವಾಗಿಸಿ ಎಂದು ಕರೆ ನೀಡಿದರು.

ನೂತನ ಜಿಲ್ಲಾಧ್ಯಕ್ಷ ವೈ.ಟಿ. ಗೋವಿಂದಪ್ಪ ಮಾತನಾಡಿ ಜಿಲ್ಲಾದ್ಯಂತ ಮಹಾಸಭಾದ ಸಂಘಟನೆ ಗಟ್ಟಿಯಾಗಿಸಲು ಹೆಚ್ಚಿನ ಒತ್ತು ನೀಡಿ ಪ್ರವಾಸ ಕೈಗೊಳ್ಳಲಾಗುವುದು. ರಾಜ್ಯ ಮಹಾಸಭಾ ನಿರ್ದೇಶನದ ಸೂಚನೆಯಂತೆ ಸದಸ್ಯರನ್ನು ಸೇರ್ಪಡೆ ಗೊಳಿಸುವ ಕಾರ್ಯ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಿರೇಮಗಳೂರು ಆರ್. ರಮೇಶ್ (ಜಿಲ್ಲಾ ಉಪಾಧ್ಯಕ್ಷ), ತರೀಕೆರೆ ನಾಗರಾಜ್ (ಪ್ರಧಾನ ಕಾರ್ಯದರ್ಶಿ), ಶೂದ್ರಶ್ರೀನಿವಾಸ್ (ಖಜಾಂಚಿ), ಹಾಗೂ ಕಾರ್ಯ ಕಾರಿಣಿ ಸಮಿತಿ ಸದಸ್ಯರಾಗಿ ಬೀರೂರು ಬಿ.ಟಿ.ಚಂದ್ರಶೇಖರ್, ಲಕ್ಯಾ ವಸಂತಕುಮಾರ್, ಶಿವನಿ ಮಹೇಂದ್ರಸ್ವಾಮಿ, ಚಿಕ್ಕಮಗಳೂರು ಕುಸುಮ ಭರತ್, ತರೀಕೆರೆ ಎಸ್.ಎನ್.ಸಿದ್ರಾಮಪ್ಪ, ಎಲ್.ಎಸ್.ಶ್ರೀಕಾಂತ್, ಟಿ.ಜೆ.ಮಂಜಪ್ಪ, ಹುಲ್ಲೇಹಳ್ಳಿ ಲಕ್ಷ್ಮಣ್, ಮೂಡಿಗೆರೆ ರಾಮಚಂದ್ರ, ಎನ್‌ ಆರ್‌ ಪುರ ನಾಗರಾಜ್‌, ಪ್ರಮೋದ್ ಅವರನ್ನು ನೇಮಿಸಲಾಗಿದೆ.ಪೋಟೋ

೧೬ಬೀರೂರು೧

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳಗನ್ನಡ ಅಭಿವ್ಯಕ್ತಿ ಕೌಶಲಗಳ ಶೋಧನೆ ಅಗತ್ಯ
ಭಗವಂತನಿಗೆ ಶರಣಾದರೆ ಗೆಲವು ನಿಶ್ಚಿತ - ನಟ ಜಗ್ಗೇಶ್‌