ಸೇವಾಲಾಲ್‌ ಪುಣ್ಯಕ್ಷೇತ್ರ ಭಾಯಾಗಡ್‌ ಅಭಿವೃದ್ಧಿಗೆ ಕಂಕಣಬದ್ಧ

KannadaprabhaNewsNetwork |  
Published : Nov 30, 2026, 02:30 AM IST
29ಎಚ್.ಎಲ್.ಐ2 ಸಂತ ಸೇವಾಲಾರ ಪವಿತ್ರ ಕ್ಷೇತ್ರದಲ್ಲಿ ನಡೆದ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಔರಾದ್ ಶಾಸಕ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ನೂತನ ಅಧ್ಯಕ್ಷ ಪ್ರಭು ಚಾವ್ಹಾನ್ ಉದ್ಘಾಟಿಸಿದರು | Kannada Prabha

ಸಾರಾಂಶ

ಸಂತ ಸೇವಾಲಾಲ್‌ ಅವರು ಜನ್ಮವೆತ್ತ ಸ್ಥಳದ ಅಭಿವೃದ್ಧಿಗೆ ತಾನು ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಔರಾದ್ ಕ್ಷೇತ್ರದ ಶಾಸಕ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ನೂತನ ಅಧ್ಯಕ್ಷ ಪ್ರಭು ಚೌಹಾಣ್‌ ತಿಳಿಸಿದ್ದಾರೆ.

- ಔರಾದ್ ಶಾಸಕ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ಪ್ರಭು ಚೌಹಾಣ್‌ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸಂತ ಸೇವಾಲಾಲ್‌ ಅವರು ಜನ್ಮವೆತ್ತ ಸ್ಥಳದ ಅಭಿವೃದ್ಧಿಗೆ ತಾನು ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಔರಾದ್ ಕ್ಷೇತ್ರದ ಶಾಸಕ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ನೂತನ ಅಧ್ಯಕ್ಷ ಪ್ರಭು ಚೌಹಾಣ್‌ ತಿಳಿಸಿದರು.

ಭಾನುವಾರ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಸಂತ ಸೇವಲಾಲ್ ಜನ್ಮಸ್ಥಾನ ಮಹಾಮಠದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿದರು. ಇಂತಹ ಪವಿತ್ರ ಸ್ಥಳದ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇವೆ. ನನ್ನ ಜೊತೆ ಸಲ್ಲರೂ ಸಹಕಾರ ನೀಡಿ, ಈ ಪವಿತ್ರ ಕ್ಷೇತ್ರವನ್ನು ಇಡೀ ವಿಶ್ವವೇ ಒಮ್ಮೆ ತಿರುಗಿ ನೋಡುವಂತೆ ಮಾಡೋಣ ಎಂದು ತಿಳಿಸಿದರು.

ನಮ್ಮ ಸಮುದಾಯದ ಸಚಿವರಾದ ರುದ್ರಪ್ಪ ಲಮಾಣಿ ಜೊತೆಗೂಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ನಿಯೋಗ ಕೊಂಡೋಯ್ದು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳೋಣ. ಕ್ಷೇತ್ರದ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿ ಅನುದಾನ ಪಡೆಯೋಣ ಎಂದರು.

ಔರಾದ್‌ನಿಂದ ಭಾಯಾಗಡ್‌ಗೆ ನೇರ ಬಸ್‌:

ಅಧ್ಯಕ್ಷನಾದ ಬಳಿಕ ನಮ್ಮ ಔರಾದ್ ಪಟ್ಟಣದಿಂದ ಸಂತ ಸೇವಾಲಾಲ್ ಅವರ ಕ್ಷೇತ್ರವಾದ ಭಾಯಾಗಡ್‌ಗೆ ನೇರ ಬಸ್ ಕೂಡ ಭಾನುವಾರ ಉದ್ಘಾಟನೆ ಮಾಡಿದ್ದೇನೆ. ಶ್ರೀ ಕ್ಷೇತ್ರದಲ್ಲಿ ಭಕ್ತರ ನಿತ್ಯ ಪ್ರಸಾದಕ್ಕೆ ₹15 ಲಕ್ಷ ಕೊಡುತ್ತೇನೆ. ಈಗಾಗಲೇ ₹5 ಲಕ್ಷ ದೇಣಿಗೆ ನೀಡಿದ್ದೇನೆ. ನಮ್ಮ ಕಾರ್ಯಕಾರಿ ಸಮಿತಿಯಲ್ಲಿರುವ ಎಲ್ಲ ನಿರ್ದೇಶಕರು ದೇಣಿಗೆ ನೀಡಲಿದ್ದಾರೆ. ನಮ್ಮ ಸಚಿವ ರುದ್ರಪ್ಪ ಲಮಾಣಿ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾನೂ ಸಂತ ಸೇವಾಲಾಲರ ಪುಣ್ಯಸ್ಥಳ ಅಭಿವೃದ್ಧಿ ಮಾಡುತ್ತೇನೆ ಎಂದು ಚೌಹಾಣ್‌ ಭರವಸೆ ನೀಡಿದರು.

ಸಮಿತಿಯ ಉಪಾಧ್ಯಕ್ಷ ಭೂಪಾಲ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸ ಸಮಿತಿ ಪದಗ್ರಹಣ ಮಾಡಿದೆ. ಇನ್ನು ಮುಂದೆ ಕ್ಷೇತ್ರದ ಅಭಿವೃದ್ಧಿಯಷ್ಟೇ ನಮ್ಮ ಗುರಿ. ಅಲಂಕಾರಕ್ಕಾಗಿ ನಾವುಗಳು ಅಧಿಕಾರದ ಸ್ಥಾನಗಳನ್ನು ಅಲಂಕರಿಸಿಲ್ಲ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಪರಮಗುರಿ ಎಂದರು.

ನೂತನ ಪದಾಧಿಕಾರಿಗಳು:

ಪ್ರಭು ಚೌವ್ಹಾಣ್- ಅಧ್ಯಕ್ಷ. ಭೂಪಾಲನಾಯ್ಕ್, ಲಕ್ಷ್ಮಣ ನಾಯ್ಕ ,ಅನಿಲ್‌ಕುಮಾರ್ ಉಪಾಧ್ಯಕ್ಷರು. ಭೋಜ್ಯಾನಾಯ್ಕ್ ಪ್ರಧಾನ ಕಾರ್ಯದಶಿಯಾಗಿ, ಪುಷ್ಪಬಾಯಿ, ಅಮರನಾಥ್ ಪಾಂಡು ಹಾಗೂ ಮಂಜಾನಾಯ್ಕ್ ಸಹ ಕಾರ್ಯದರ್ಶಿಗಳು. ಹನುಮಂತ ನಾಯ್ಕ್ ಖಜಾಂಚಿಯಾಗಿ ಆಯ್ಕೆಯಾಗಿದ್ದು, ಒಟ್ಟು36 ಸದಸ್ಯರು ಅಧಿಕಾರ ಪದಗ್ರಹಣ ಮಾಡಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕೊಟ್ಟೂರಿನ ಶಿವಪ್ರಕಾಶ ಸ್ವಾಮೀಜಿ, ಕೊಪ್ಪಳದ ಗೋಸಾಯಿ ಸ್ವಾಮೀಜಿ ಹಾಗೂ ಇಳಕಲ್‌ನ ಸಂತೋಷ್ ಮಹಾರಾಜ್ ಸ್ವಾಮೀಜಿ, ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ, ಹೀರಾ ನಾಯ್ಕ್, ರಾಘವೇಂದ್ರ ನಾಯ್ಕ್, ಅರುಣಕುಮಾರ್, ಉಮೇಶ್‌ ನಾಯ್ಕ್, ಸುರೇಂದ್ರ ನಾಯ್ಕ್, ಚಂದ್ರ ನಾಯ್ಕ್ ಇತರರು ಉಪಸ್ಥಿತರಿದ್ದರು.

- - -

-29ಎಚ್.ಎಲ್.ಐ2:

ಕಾರ್ಯಕ್ರಮವನ್ನು ಔರಾದ್ ಶಾಸಕ, ನೂತನ ಅಧ್ಯಕ್ಷ ಪ್ರಭು ಚೌಹಾಣ್‌ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯ ಕಲ್ಲಿನ ರಥದ ಮೂಲ ಗೋಪುರ ಮರಸೃಷ್ಟಿ
ಆಂಧ್ರದ 4 ಟಿಎಂಸಿ ನೀರು ರಾಜ್ಯದ ಬೆಳೆಗಳಿಗೆ ಒದಗಿಸಲು ಎಚ್ಡಿಕೆಗೆ ಮನವಿ