ಯಾದವ ಸಮಾಜದ ಅಭಿವೃದ್ಧಿಗೆ ಬದ್ಧ

KannadaprabhaNewsNetwork |  
Published : Aug 17, 2025, 02:32 AM IST
ಹರಪನಹಳ್ಳಿ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಪುರಸಭಾ ಅಧ್ಯಕ್ಷೆ ಪಾತೀಮಾಭೀ, ತಹಶೀಲ್ದಾರ ಗಿರೀಶಬಾಬು ಇತರರಿದ್ದರು. | Kannada Prabha

ಸಾರಾಂಶ

ಯಾದವ ಸಮಾಜದ ಅಭಿವೃದ್ಧಿಗೆ ಕೆಲವೊಂದು ಯೋಜನೆ ಹಾಕಿಕೊಂಡಿದ್ದೇನೆ, ಅವುಗಳು ಸಾಕಾರವಾದ ನಂತರ ಹೇಳುತ್ತೇನೆ

ಹರಪನಹಳ್ಳಿ: ಯಾದವ ಸಮಾಜದ ಅಭಿವೃದ್ಧಿಗೆ ಸದಾ ಬದ್ಧ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.

ಅವರು ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ತಾಲೂಕಾಡಳಿತದಿಂದ ಆಯೋಜಿಸಿದ್ದ ಶ್ರೀಕೃಷ್ಣ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಯಾದವ ಸಮಾಜದ ಅಭಿವೃದ್ಧಿಗೆ ಕೆಲವೊಂದು ಯೋಜನೆ ಹಾಕಿಕೊಂಡಿದ್ದೇನೆ, ಅವುಗಳು ಸಾಕಾರವಾದ ನಂತರ ಹೇಳುತ್ತೇನೆ ಎಂದು ಭರವಸೆ ನೀಡಿದರು.

ಶ್ರೀಕೃಷ್ಣ ಹುಟ್ಟಿದ ದಿನ ಇಂದು ಆಚರಿಸಲಾಗುತ್ತದೆ, ಮಥುರ ಶ್ರೀಕೃಷ್ಣನ ಜನ್ಮಸ್ಥಳವಾಗಿದ್ದು, ಭಾರತ ಸಂಸ್ಕೃತಿಯ ಪ್ರಸಿದ್ಧ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಹ ಪ್ರಖ್ಯಾತಿ ಹೊಂದಿದೆ ಎಂದರು.

ಬಿಆರ್‌ ಪಿ ಅಣ್ಣಪ್ಪ ಉಪನ್ಯಾಸ ನೀಡಿ ಶ್ರೀಕೃಷ್ಣನ ಜನ್ಮ, ಬೆಳವಣಿಗೆ ಮುಂತಾದ ಇತಿಹಾಸ ವಿವರವಾಗಿ ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಬಸವರಾಜಪ್ಪ ಮಾತನಾಡಿ, ಶ್ರೀಕೃಷ್ಣ ವಿಶ್ವಮಾನವನಾಗಿದ್ದು, ಜಗತ್ತಿನ ಎಲ್ಲ ರಾಷ್ಟ್ರಗಳು ಶ್ರೀಕೃಷ್ಣನನ್ನು ನೆನೆಯುತ್ತವೆ ಎಂದ ಅವರು, ತಾಲೂಕಿನ ಯಾದವ ಸಮಾಜ ಅಭಿವೃದ್ಧಿಗೆ ವಿವಿಧ ಸೌಲಭ್ಯ ಕಲ್ಪಿಸಿ ಕೊಡಲು ಶಾಸಕರಲ್ಲಿ ಮನವಿ ಮಾಡಿದರು.

ಯಾದವ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ವಿವಿಧ ಗಣ್ಯರಿಗೆ ಹಾಗೂ ಉಪನ್ಯಾಸಕರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಪುರಸಭಾ ಅಧ್ಯಕ್ಷೆ ಎಂ. ಫಾತೀಮಾಬೀ, ತಹಸೀಲ್ದಾರ ಬಿ.ವಿ. ಗಿರೀಶಬಾಬು, ತಾಪಂ ಇಒ ಚಂದ್ರಶೇಖರ, ಪುರಸಭಾ ಮುಖ್ಯಾಧಿಕಾರಿ ರೇಣುಕಾ ಎಸ್. ದೇಸಾಯಿ, ಬಿಆರ್‌ ಸಿ ಹೊನ್ನತ್ತೆಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭಾ ಸದಸ್ಯರುಗಳಾದ ಜಾಕೀರ ಹುಸೇನ್, ವಸಂತಪ್ಪ, ತಾಪಂ ಮಾಜಿ ಸದಸ್ಯ ಹುಲ್ಲಿಕಟ್ಟಿ ಚಂದ್ರಪ್ಪ, ಯಾದವ ಸಮಾಜದ ತಾಲೂಕಾಧ್ಯಕ್ಷ ಹಲುವಾಗಲು ಪ್ರಕಾಶ, ಕಾರ್ಯದರ್ಶಿ ಸೋಮಪ್ಪ, ಗೌರವಾಧ್ಯಕ್ಷ ಶಿವರಾಮಪ್ಪ, ಎ. ಹನುಮಂತಪ್ಪ, ಎಂ. ಶಿವಮೂರ್ತೆಪ್ಪ, ಕೆ.ಹನುಮಂತಪ್ಪ, ಎಸ್. ಸದ್ಯೋಜಾತಪ್ಪ, ಶಿಕ್ಷಕ ಮೇಘರಾಜ, ಮತ್ತೂರು ಬಸವರಾಜ ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌