ಅಲ್ಪಸಂಖ್ಯಾತರ ಹಿತಕ್ಕೆ ಬದ್ಧ : ಶ್ರೀನಿವಾಸ ಮಾನೆ

KannadaprabhaNewsNetwork |  
Published : Apr 25, 2026, 03:00 AM IST
ಅಕ್ಕಿಆಲೂರಿನಲ್ಲಿ ಮಸೀಹಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧವಿದ್ದು, ಇದಕ್ಕಾಗಿ ಎಲ್ಲ ಕಾಲಕ್ಕೂ ಕಾಂಗ್ರೆಸ್ ಶ್ರಮಿಸುತ್ತಿದೆ ಎಂದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧವಿದ್ದು, ಇದಕ್ಕಾಗಿ ಎಲ್ಲ ಕಾಲಕ್ಕೂ ಕಾಂಗ್ರೆಸ್ ಶ್ರಮಿಸುತ್ತಿದೆ ಎಂದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಮಸೀಹಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ವರ್ಷದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಉದ್ದೇಶಕ್ಕಾಗಿ ಅತಿ ಹೆಚ್ಚು ಅನುದಾನ ವಿನಿಯೋಗಿಸಲು ತೀರ್ಮಾನಿಸಲಾಗಿದ್ದು, ಅದರ ಪ್ರಯೋಜನವಾಗಿ ಹಾನಗಲ್ಲ ತಾಲ್ಲೂಕಿನಲ್ಲಿಯೂ ಹೆಚ್ಚಿನ ಅನುದಾನ ಹರಿದುಬರಲಿದೆ ಎಂದು ತಿಳಿಸಿದ ಅವರು, ಕಾಲ ಬದಲಾಗಿದ್ದು, ಶಿಕ್ಷಣಕ್ಕೆ ಮಾತ್ರ ಉತ್ತಮ ಬದುಕು ರೂಪಿಸಬಲ್ಲ ಶಕ್ತಿ ಇದೆ. ಹಾಗಾಗಿ ಅಲ್ಪಸಂಖ್ಯಾತ ಬಂಧುಗಳು ಸಹ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಶಿಕ್ಷಣದಿಂದ ಮಾತ್ರ ವಿಕಾಸ ಸಾಧ್ಯವಿದೆ ಎನ್ನುವ ಸತ್ಯ ಅರ್ಥ ಮಾಡಿಕೊಳ್ಳಬೇಕಿದೆ ಎಂದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಹಾಗೂ ಮಾಹಿತಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸೀರ ಅರಾಫತ್ ಮಕಾನದಾರ, ಮಸೀಹಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುನೀರಅಹ್ಮದ ಬಾಳೂರ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮೆಹಬೂಬಅಲಿ ಬ್ಯಾಡಗಿ, ಉಪಾಧ್ಯಕ್ಷ ರಿಯಾಜ ಹಾವಣಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣವರ, ಮುಖಂಡರಾದ ಖ್ವಾಜಾಮೊದೀನ ಅಣ್ಣಿಗೇರಿ, ಗಫಾರಸಾಬ ಪಾಟೀಲ, ಸತ್ತಾರಸಾಬ ಅರಳೇಶ್ವರ, ಪುಟ್ಟಪ್ಪ ನರೇಗಲ್, ಮೌಲಾನಾ ಅಹ್ಮದ ಬಾಶಾ ಶೇಖಜಿ, ಮೌಲಾನಾ ತನ್ವೀರ, ಮೌಲಾನಾ ಮಹ್ಮದಗೌಸ ಚಾವೂಸ, ಅಲ್ತಾಫ ಶಿರಹಟ್ಟಿ, ಗುಲಾಬಸಾಬ ಉಪ್ಪಣಸಿ, ಸುಲೇಮಾನ ಸಿಲಾರ, ಸಾಧಿಕ್ ಮಳಗಿ, ಮೆಹಬೂಬಲಿ ಜಾಲೇಗಾರ, ಮುಶ್ತಾಕ್ ಕಾರಡಗಿ, ಸಾಧಿಕ ಹಸನಾಬಾದಿ, ಇನಾಯತಖಾನ ಪಠಾಣ, ಮಹ್ಮದ್‌ಇಸಾಕ್ ಮಕಾನದಾರ, ಸುಲೇಮಾನ ಶೇಖ, ಬಿಇಒ ಆರ್.ವಿ. ಚಿನ್ನಿಕಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋಲಾರ್‌ ಪ್ಯಾನಲಗೆ 2400 ಮರಗಳು ಬಲಿ!
ನಾಳೆ ಕುಮಟಾದಲ್ಲಿ ಸಾಧನಾ ಸೌರಭ ಕಾರ್ಯಕ್ರಮ, ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ