ದಾಬಸ್‍ಪೇಟೆ: ಪ್ರಸ್ತುತ ದಿನಮಾನದಲ್ಲಿ ವ್ಯವಹಾರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಇಂಗ್ಲಿಷ್ ಕಲಿಯಬೇಕು. ಎಂದು ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ ತಿಳಿಸಿದರು.
ಆಹಾರ ನಾಗರೀಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ ಕನ್ನಡ ಭಾಷೆಯ ಉಳಿವಿಗಾಗಿ ನಾವೆಲ್ಲರೂ ಕಂಕಣ ಬದ್ಧರಾಗಿ ನಿಲ್ಲಬೇಕಾಗಿರುವುದು ಅವಶ್ಯ. ಕನ್ನಡಿಗರಾದ ನಾವು ನಮ್ಮ ಕನ್ನಡ ಭಾಷೆ, ಕಲೆ, ಸಂಸ್ಕøತಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ಕನ್ನಡ ಭಾಷೆಗೆ ತನ್ನದೇ ಆದಂತಹ ವೈಷ್ಟ್ಯತೆ ಇದೆ. ಭಾಷೆಯ ಜೊತೆಗೆ ಜಾನಪದ ಸಾಹಿತ್ಯವನ್ನು ಸಹ ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಅಂಬೇಡ್ಕರ್ ಸೇನೆಯ ರಾಜಾಧ್ಯಕ್ಷ ಪಿ.ಮೂರ್ತಿ ಮಾತನಾಡಿ ನಮ್ಮ ಅಂಭೇಡ್ಕರ್ ಸೇನೆ ಸಂಘಟನೆ ಬಲಗೊಳ್ಳಲು ಮೂಲ ಗ್ರಾಮ ಘಟಕಗಳು, ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಘಟಕಗಳಲ್ಲಿ ಶಾಖೆ ಹೊಂದಿದ್ದು, ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಸೇವಾಕಾರ್ಯಗಳು ಸೇರಿದಂತೆ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ನ್ಯಾಯ ಕೊಡಿಸಲು ಮುಂದಾಗಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಟಗರು ಶಿವಸ್ವಾಮಿ, ಯುವಘಟಕದ ಅಧ್ಯಕ್ಷ ಮನು, ಹೋಬಳಿ ಘಟಕದ ಅಧ್ಯಕ್ಷ ವಸಂತಕುಮಾರ್, ಮುಖಂಡರುಗಳಾದ ವೀರಣ್ಣ, ಹನುಮಂತರಾಜು ಮತ್ತೀತ್ತರಿದ್ದರು.
ಪೋಟೋ 4 : ದಾಬಸ್‍ಪೇಟೆ ಪಟ್ಟಣದ ಮಾರಮ್ಮದೇವಿ ದೇವಾಲಯದ ರಸ್ತೆಯಲ್ಲಿ ಸೋಂಪುರ ಅಂಬೇಡ್ಕರ್ ಸೇನೆಯಿಂದ ನಡೆದ ಸೋಂಪುರ ಕನ್ನಡಹಬ್ಬ ಕಾರ್ಯಕ್ರಮದಲ್ಲಿ ಆಹಾರ ನಾಗರೀಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದರು.