ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಆರೋಪ ಸುಳ್ಳೆಂದು ಘೋಷಿಸಲು ಸಮಿತಿ ಗಡುವು

KannadaprabhaNewsNetwork |  
Published : Sep 25, 2025, 01:02 AM IST
ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಆರೋಪಗಳು ಸುಳ್ಳೆಂದು ಗೃಹ ಸಚಿವರು ಘೋಷಿಸಲು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಡಿ. 31ವರೆಗೆ ಗಡುವು | Kannada Prabha

ಸಾರಾಂಶ

ಧರ್ಮಸ್ಥಳ ದೇವಸ್ಥಾನ, ಅದರ ಆಡಳಿತ ಮಂಡಳಿ ಅಥವಾ ಹೆಗ್ಗಡೆ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಅತ್ಯಾಚಾರ ಅಥವಾ ಕೊಲೆ ಘಟನೆ, ದೇವಸ್ಥಾನದ ಆವರಣದಲ್ಲಿ ಅಥವಾ ಅದರ ಸುತ್ತಮುತ್ತ ನಡೆದಿದೆಯೆಂದು ಆರೋಪಿಸುತ್ತಿರುವವರು ಡಿ.31ರೊಳಗೆ ಸಾಕ್ಷ್ಯ ಸಲ್ಲಿಸಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹಿಸಿದೆ.

ಮೂಡುಬಿದಿರೆ: ಕಳೆದ 12 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ವಿರುದ್ಧದ ನಡೆಸುತ್ತಿರುವ ಖಂಡನಿಯ. ಧರ್ಮಸ್ಥಳ ದೇವಸ್ಥಾನ, ಅದರ ಆಡಳಿತ ಮಂಡಳಿ ಅಥವಾ ಹೆಗ್ಗಡೆ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಅತ್ಯಾಚಾರ ಅಥವಾ ಕೊಲೆ ಘಟನೆ, ದೇವಸ್ಥಾನದ ಆವರಣದಲ್ಲಿ ಅಥವಾ ಅದರ ಸುತ್ತಮುತ್ತ ನಡೆದಿದೆಯೆಂದು ಆರೋಪಿಸುತ್ತಿರುವವರು ಡಿ.31ರೊಳಗೆ ಸಾಕ್ಷ್ಯ ಸಲ್ಲಿಸಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹಿಸಿದೆ.

ಒಂದು ವೇಳೆ ಆರೋಪ ಮಾಡುತ್ತಿರುವವರು ಸಾಕ್ಷ್ಯ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ಧರ್ಮಸ್ಥಳದ ವಿರುದ್ಧ ನಡೆಸುತ್ತಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದುದು ಹಾಗೂ ‘ಧರ್ಮಸ್ಥಳ ದೇವಸ್ಥಾನ ವಿರುದ್ಧ ನಡೆಸುತ್ತಿರುವ ಸುಳ್ಳು ಆರೋಪಗಳ ಪ್ರಕರಣವನ್ನು ಮುಚ್ಚಲಾಗಿದೆ’ ಎಂಬುದನ್ನು ಗೃಹ ಸಚಿವರು ಅಧಿಕೃತವಾಗಿ ಘೋಷಿಸಬೇಕು ಎಂದು ಸಮಿತಿಯ ಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಕೆಲವು ದುರುದ್ದೇಶಿತ ಶಕ್ತಿಗಳು ರಾಜಕೀಯ ಮತ್ತು ವೈಯಕ್ತಿಕ ಸ್ವಾರ್ಥಕ್ಕಾಗಿ ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದೆ. ಕೆಲವರು ಉದ್ದೇಶಪೂರ್ವಕವಾಗಿ ಭಾರತ ಹಾಗೂ ವಿಶ್ವಾದ್ಯಂತ ಕ್ಷೇತ್ರವನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಆದುದರಿಂದ ಊಹಾಪೋಹಗಳಿಗೆ ಶೀಘ್ರವೇ ತೆರೆ ಎಳೆಯಬೇಕು ಎಂಬುದು ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೇಡಿಕೆಯಾಗಿದೆ ಎಂದರು.ಸಮಿತಿ ಜಿಲ್ಲಾ ಅಧ್ಯಕ್ಷ ಹರೀಶ್‌ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡೋನ್ ರಾಜ್ಯ ಸಂಯೋಜಕರಾದ ಜಗದೀಶ ಅಧೀಕಾರಿ, ಅರುಣಪ್ರಕಾಶ್ ಶೆಟ್ಟಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಆಚಾರ್ಯ ಸುದ್ದಿಗೋಷ್ಠಿಯಲ್ಲಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ