A clash has occurred between two communities in Bichali village of Raichur taluk; it is reported that the dispute arose over the construction of an Anjaneya Swamy temple
ರಾಯಚೂರು: ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಗಲಾಟೆ ಜರುಗಿದ್ದು, ಚರ್ಚ್ ಎದುರು ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣದ ವಿಚಾರವಾಗಿ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
2009 ನೆರೆ ಹಾವಳಿಗೆ ಬಿಚ್ಚಾಲಿ ತುತ್ತಾದಾಗ 16 ಎಕರೆ ಜಾಗದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. 132 ಮನೆಗಳನ್ನು ನಿರ್ಮಿಸಿದ್ದು, ಇಲ್ಲಿ ಹೆಚ್ಚಿನ ಜನ ಸ್ಥಳಾಂತರ ಆಗಿಲ್ಲ. ಆದರೆ, ಈ ಜಾಗದಲ್ಲಿ 2024ರಲ್ಲಿ ಚರ್ಚ್ ನಿರ್ಮಿಸಲಾಗಿತ್ತು. ಆ ಚರ್ಚ್ ಎದುರು ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುಂದಾದಾಗ ಗಲಾಟೆಯಾಗಿದ್ದು, ಬೇರೆ ಕಡೆ ದೇವಸ್ಥಾನ ಕಟ್ಟುವಂತೆ ಒಂದು ಕೋಮಿನ ಜನ ವಿರೋಧ ಮಾಡಿದ್ದು, ಇದಕ್ಕೆ ಮತ್ತೊಂದು ಕೋಮಿನ ಜನ ಒಪ್ಪದ ಹಿನ್ನೆಲೆಯಲ್ಲಿ ಗಲಾಟೆ ಸಂಭವಿಸಿದೆ. ಗಲಾಟೆಯಲ್ಲಿ ಇಬ್ಬರಿಗೆ ಗಾಯ ಗಳಾಗಿದ್ದು, ರಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯರಗೇರಾ ಠಾಣೆ ವ್ಯಾಪ್ತಿಯಲ್ಲಿ ಗಲಾಟೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದಿಲ್ಲ. ಪರಿಶೀಲನೆ ನಡೆಸುತ್ತಿದ್ದು, ಸೂಕ್ತ ಕ್ರಮ ಜರುಗಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.