ಪ್ರಜಾಪ್ರಭುತ್ವಕ್ಕೆ ಕೋಮುವಾದವೇ ದುಷ್ಟಶಕ್ತಿ: ಎ.​ಕರುಣಾನಿಧಿ

KannadaprabhaNewsNetwork |  
Published : Oct 23, 2026, 02:00 AM IST
ಫೋಟೋವಿವರ- (22ಎಚ್‌ಪಿಟಿ3)ಹೊಸಪೇಟೆ ನಗರದ ಶ್ರಮಿಕ ಭವನದ ಮುಂಭಾಗದಲ್ಲಿ ನಡೆದ ಸೌಹಾರ್ದ ದಸರಾ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಪ್ರತಿಭಟನೆ ಕೇವಲ ಬೇಡಿಕೆಗಳಿಗೆ ಸೀಮಿತಗೊಳಿಸುವ ಮೂಲಕ ಉದ್ದೇಶ ಪೂರ್ವಕವಾಗಿ ಚಳವಳಿಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಹೊಸಪೇಟೆ: ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಕೋಮುವಾದವೇ ದುಷ್ಟಶಕ್ತಿಯಾಗಿದೆ .ಆದ್ದರಿಂದ ಕೋಮುವಾದವನ್ನು ನಾಶ ಮಾಡುವವರೆಗೆ ಭಾರತದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸಾಧ್ಯವಿಲ್ಲ ಎಂದು ಸೌಹಾರ್ದ ಕರ್ನಾಟಕದ ಮುಖಂಡ ಎ. ಕರುಣಾನಿಧಿ ತಿಳಿಸಿದರು.

ನಗರದ ಶ್ರಮಿಕ ಭವನದ ಮುಂಭಾಗದಲ್ಲಿ ನಡೆದ ಸೌಹಾರ್ದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಪ್ರತಿಭಟನೆ ಕೇವಲ ಬೇಡಿಕೆಗಳಿಗೆ ಸೀಮಿತಗೊಳಿಸುವ ಮೂಲಕ ಉದ್ದೇಶ ಪೂರ್ವಕವಾಗಿ ಚಳವಳಿಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಭಟನೆ ಎನ್ನುವುದು ಆಳುವ ವರ್ಗದ ಹಾಗೂ ಸರ್ಕಾರದ ವಿರುದ್ಧ ಜನ ಚಳವಳಿ ಮೂಲಕ ಹೊರ ಹೊಮ್ಮುವ ಸಮಾಜದ ಅಂತರ್ಗತ ಗುಣವಾಗಿದೆ ಆದ್ದರಿಂದ ಪ್ರತಿಭಟನೆ ಎಂದೂ ಬೇಡುವುದಿಲ್ಲ, ಬದಲಾಗಿ ಅದು ಎದುರಿಸುತ್ತದೆ ಮತ್ತು ಮುಖಾಮುಖಿಯಾಗಿರುತ್ತದೆ ಎಂದರು.

ಎಲ್ ಐ ಸಿ ಏಜೆಂಟ್ಸ್ ಮುಖಂಡ ಎಲ್. ಮಂಜುನಾಥ ಮಾತನಾಡಿ, ಕಾರ್ಪೋರೇಟ್ ಮತ್ತು ಕೋಮುವಾದದ ನಂಟನ್ನು ಭೇದಿಸದಿದ್ದರೆ ಈ ಸರ್ಕಾರವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಆದ್ದರಿಂದ ಕಾರ್ಮಿಕರು ಕೋಮುವಾದದ ವಿರುದ್ಧವೂ ಹೋರಾಡುವುದು ಅಗತ್ಯವಾಗಿದೆ ಎಂದರು.

ಸಾಹಿತಿ ಉಮಾಮಹೇಶ್ವರ ಮಾತನಾಡಿ, ಕರ್ನಾಟಕ ಸೂಫಿಗಳು, ಸಂತರು, ಶರಣರು, ದಾಸರು ಕಟ್ಟಿದ ನಾಡಾಗಿದ್ದು, ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಇಂದು ಅಗತ್ಯವಾಗಿದೆ ಎಂದರು. ಎಸ್ ಎಫ್ ಐನ ಪವನ್ ಮತ್ತು ಡಿವೈಎಫ್ಐ ಸಂಘಟನೆಯ ಬಂಡೆ ತಿರುಕಪ್ಪ ಸಭೆಯಲ್ಲಿ ಮಾತನಾಡಿದರು.

ಮುಖಂಡರಾದ ಆರ್‌. ಭಾಸ್ಕರ್‌ ರೆಡ್ಡಿ, ಎಂ. ಗೋಪಾಲ, ಜೆ.ಎಂ. ಚನ್ನಬಸಯ್ಯ, ಮುಸ್ತಫಾ, ಈಡಿಗರ ಮಂಜುನಾಥ ಸೇರಿದಂತೆ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸ್ ಹುತಾತ್ಮರ ತ್ಯಾಗ, ಕರ್ತವ್ಯನಿಷ್ಠೆ ಸಮಾಜಕ್ಕೆ ಸದಾ ಪ್ರೇರಣೆ: ನ್ಯಾ. ಗಂಗಾಧರ
ಚಾಟ್‌ಜಿಪಿಟಿ, ಎಐ ಅತಿಯಾದ ಬಳಕೆಯಿಂದ ಕ್ರಿಯಾಶೀಲತೆ ಕುಂಠಿತ: ವಾಣಿ ಕಲಬುರ್ಗಿ