ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತೀ ಕಾಲೇಜು ಆವರಣದಲ್ಲಿ ನಡೆದ ಭಾರತೀ ಸಂಭ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಕರ್ನಾಟಕ ರಾಜ್ಯ ವಿಶಿಷ್ಟ, ಬಹು ಸಂಸ್ಕೃತಿಯ ನೆಲೆಬೀಡು. ಬಿಹಾರದಿಂದ ಬೌದ್ಧಧರ್ಮ ಸನ್ನತಿ, ಕೊಪ್ಪಳ ಮಸ್ಕಿ ಮೈಸೂರಿನಲ್ಲಿ ಬೌದ್ಧ ಧರ್ಮ ಮೊದಲಾದ ಕಡೆ ಆವರಿಸಿಕೊಂಡಿದೆ. ನಮ್ಮ ಬಹು ಸಂಸ್ಕೃತಿ ನೆಲೆಗಳಾಗಿ ಶ್ರೀಮಂತಿಕೆಯಿಂದ ಕೂಡಿರುವ ಪ್ರದೇಶಕ್ಕೆ ಹುಳಿ ಹಿಂಡಬೇಡಿ, ಇಲ್ಲಿನ ಜನರು ನೆಮ್ಮದಿಯಿಂದ ಬದಕಲು ಬಿಡಬೇಕೆಂದು ಸಲಹೆ ನೀಡಿದರು.
1979ರಲ್ಲಿ ಕುರುಂಜಿ ವೆಂಕಟರಮಣಗೌಡರ ಜೊತೆಯಲ್ಲಿ ಜಿ.ಮಾದೇಗೌಡರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಲ್ಲಿ ಬೇಕಾದರೂ ಸೀಟು ಸಿಗುತ್ತದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು, ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮೊದಲು ಸೀಟು ಕೊಡಬೇಕೆಂದು ಮಾದೇಗೌಡರು ನಿರ್ಧಾರ ಮಾಡಿದ್ದು, ನನಗೆ ಹೆಮ್ಮೆ ಎನಿಸಿತು ಎಂದರು.ಭಾರತೀ ಎಜುಕೇಷನ್ ಟ್ರಸ್ಟ್ ಒಂದು ದೊಡ್ಡ ಸಂಸ್ಥೆಯಾಗಿ ಮುಂದುವರಿದು ವಿವಿಧ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಕೆ.ಎಂ ದೊಡ್ಡಿಗೆ ಆಗಮಿಸುತ್ತಿರುವುದು ಮಾದೇಗೌಡರ ಪರಿಶ್ರಮದ ಫಲವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ರೈತರಿಗೆ ಕಾರ್ಖಾನೆಯನ್ನು ತಂದುಕೊಟ್ಟ ಮಾದೇಗೌಡರನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕಿದೆ ಎಂದರು.
ಮಧು.ಜಿ ಮಾದೇಗೌಡರು ಭಾರತೀ ಕಾಲೇಜನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವ ಜೊತೆಗೆ ಗ್ರಾಮೀಣ ಮಕ್ಕಳಿಗಾಗಿ 10 ಕೋಟಿ ರು. ವೆಚ್ಚದ ಸ್ಫೋರ್ಟ್ಸ್ ಕ್ಲಬ್ ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.