ಸಮುದಾಯ ಭವನಗಳು ಸಮಾಜದ ಅಭಿವೃದ್ಧಿಯ ಸಂಕೇತ

KannadaprabhaNewsNetwork |  
Published : Jan 25, 2024, 02:03 AM IST
ಸಮುದಾಯ ಭವನಗಳು ಸಮಾಜದ ಅಭಿವೃದ್ದಿ ಹಾಗೂ ಜ್ಞಾನದ ಸಂಕೇತವಾಗಲಿ : ಪುಟ್ಟರಂಗಶೆಟ್ಟಿ  | Kannada Prabha

ಸಾರಾಂಶ

ಚಾಮರಾಜನಗರ ಸಮುದಾಯ ಭವನಗಳು ಆಯಾ ಗ್ರಾಮಗಳ ಅಭಿವೃದ್ಧಿ ಮತ್ತು ಜ್ಞಾನದ ಸಂಕೇತವಾಗಿ ಪ್ರಗತಿಗೆ ಪೂರಕ ಕೆಲಸ ಮಾಡುವ ಕೇಂದ್ರಗಳಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು. ತಾಲೂಕಿನ ಚಂದಕವಾಡಿಯಲ್ಲಿ ಗಾಣಿಗರ ಸಮುದಾಯದ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಂದಕವಾಡಿ ಹೋಬಳಿ ಕೇಂದ್ರವಾಗಿದ್ದು, ಎಲ್ಲ ಸಮುದಾಯವರೂ ಒಗ್ಗಟ್ಟಿನಿಂದ ಸಹೋದರಂತೆ ಬಾಳುತ್ತಿದ್ದಾರೆ. ನನ್ನ ಅನುದಾನದ ಜೊತೆಗೆ ದಿ. ಆರ್. ಧ್ರುವನಾರಾಯಣ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಸೇರಿ ಅನೇಕರ ಅನುದಾನದಡಿ ಬಹಳ ಸುಸಜ್ಜಿತವಾಗಿ ಗಾಣಿಗ ಸಮುದಾಯದವರು ಭವನ ನಿರ್ಮಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಪುಟ್ಟರಂಗಶೆಟ್ಟಿ । ಚಂದಕವಾಡಿಯಲ್ಲಿ ಗಾಣಿಗರ ಸಮುದಾಯ ಭವನ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮುದಾಯ ಭವನಗಳು ಆಯಾ ಗ್ರಾಮಗಳ ಅಭಿವೃದ್ಧಿ ಮತ್ತು ಜ್ಞಾನದ ಸಂಕೇತವಾಗಿ ಪ್ರಗತಿಗೆ ಪೂರಕ ಕೆಲಸ ಮಾಡುವ ಕೇಂದ್ರಗಳಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ತಾಲೂಕಿನ ಚಂದಕವಾಡಿಯಲ್ಲಿ ಗಾಣಿಗರ ಸಮುದಾಯದ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಂದಕವಾಡಿ ಹೋಬಳಿ ಕೇಂದ್ರವಾಗಿದ್ದು, ಎಲ್ಲ ಸಮುದಾಯವರೂ ಒಗ್ಗಟ್ಟಿನಿಂದ ಸಹೋದರಂತೆ ಬಾಳುತ್ತಿದ್ದಾರೆ. ನನ್ನ ಅನುದಾನದ ಜೊತೆಗೆ ದಿ. ಆರ್. ಧ್ರುವನಾರಾಯಣ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಸೇರಿ ಅನೇಕರ ಅನುದಾನದಡಿ ಬಹಳ ಸುಸಜ್ಜಿತವಾಗಿ ಗಾಣಿಗ ಸಮುದಾಯದವರು ಭವನ ನಿರ್ಮಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮುದಾಯದ ಭವನ ಸದಾ ಚಟುವಟಿಕೆಯಿಂದ ಕೂಡಿರುವ ಜೊತೆಗೆ ಜ್ಞಾನದ ಸಂಕೇತವಾಗಬೇಕು. ಈ ವ್ಯಾಪ್ತಿಯ ಮಕ್ಕಳಿಗೆ ಪಾಠ, ಪ್ರವಚನ, ಶುಭ ಸಮಾರಂಭಗಳಿಗೆ ಬಳಕೆ, ಕೌಶಲ್ಯ ತರಬೇತಿ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸಭೆಗಳನ್ನು ನಡೆಸುವ ಮೂಲಕ ಭವನವು ಗ್ರಾಮಸ್ಥರ ಹಾಗೂ ಸಮುದಾಯದ ಆಸ್ತಿಯನ್ನಾಗಿಸಿ ಸಾಮಾಜಿಕ ಪ್ರಗತಿ ಹೊಂದಬೇಕು ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.

ಗಾಣಿಗ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡಿ, ಗಾಣಿಗ ಸಮುದಾಯದವರು ಸಂಘಟಿತರಾಗಿ ಜಾಗೃತರಾಗುವ ಮೂಲಕ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ವೃತ್ತಿ ಕಾರಣದಿಂದ ಅಲ್ಲಲ್ಲಿ ಚದುರು ಹೋಗಿರುವ ಗಾಣಿಗ ಸಮುದಾಯ ಜಾಗತೀಕರಣದಿಂದಾಗಿ ಅತಂತ್ರವಾಗಿದೆ. ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ವೃತ್ತಿಪರರಿಗೆ ಆರ್ಥಿಕ ಭದ್ರತೆ ಮತ್ತು ಕೌಶಲ್ಯ ತರಬೇತಿಗಳನ್ನು ನೀಡಿ, ಅವರನ್ನು ಇತರೇ ಸಮಾಜದೊಂದಿಗೆ ಕರೆದುಕೊಂಡುವ ಹೋಗುವ ಜವಾಬ್ದಾರಿ ಜನಪ್ರತಿನಿಧಿಗಳಿಗಿದೆ. ಹೀಗಾಗಿ ಸಮುದಾಯದವರು ಶಿಕ್ಷಣ ಪಡೆಯುವ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಸಭೆಯಲ್ಲಿ ಜನಾಂಗದ ಮುಖಂಡರಾಗಿದ್ದ ದಿ.ಕೃಷ್ಣ ಅವರ ಸ್ಮರಣೆ ಮಾಡುವ ಜೊತೆಗೆ ಅವರೂ ಕೂಡ ಭವನ ನಿರ್ಮಿಸಲು ಪ್ರಮುಖ ಕಾರಣೀಭೂತರೆಂದು ಶಾಸಕರು ಸೇರಿ ಗಣ್ಯರು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮುರ್ತಿ, ಚಂದಕವಾಡಿ ಗ್ರಾಪಂ ಅಧ್ಯಕ್ಷ ನಟರಾಜು, ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಅಂಕಪ್ಪ, ಚಾ.ನಗರ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಜಗದೀಶ್, ಚಂದಕವಾಡಿ ಎಳುನೀರು ವ್ಯಾಪಾರಿ ರಾಜಣ್ಣ, ಮಹದೇವಶೆಟ್ಟಿ ಚಂದ್ರಕಾಂತ್, ಗೌಡಿಕೆ ಶಿವನಾಂಕಾರಪ್ಪ, ಗೌಡಿಕೆ ರಾಜೇಂದ್ರ, ಬಸವರಾಜನಾಯಕ, ವಿಷಕಂಠನಾಯಕ, ರಾಜಣ್ಣ, ನಾಗರಾಜು, ಶ್ರೀಕಂಠ,ರವಿ, ಪ್ರಸಾದ್, ರಂಗಸ್ವಾಮಿ, ಸಿದ್ದಯ್ಯ, ಶಿವಕುಮಾರ್ ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ