ತವರಿಗೆ ಮರಳಿದ ಶಿಲ್ಪಿಅರುಣ್‌ ಯೋಗಿರಾಜ್‌

KannadaprabhaNewsNetwork |  
Published : Jan 25, 2024, 02:03 AM IST
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಯೋಧ್ಯ ಬಾಲರಾಮ ಶಿಲ್ಪಿ ಅರುಣ್‌ ಯೋಗಿರಾಜ್‌ರವರವರಿಗೆ ಕೈ ಮುಗಿಯುತತ್ಇರುವ ಅಭಿಮಾನಿ | Kannada Prabha

ಸಾರಾಂಶ

ಶ್ರೀರಾಮ ಚಂದ್ರನ ಶಿಲ್ಪ ರಚಿಸಿದ ಅರುಣ್‌ ಯೋಗಿರಾಜ್‌ ಅವರು ಬೆಂಗಳೂರಿಗೆ ಅಯೋಧ್ಯೆಯಿಂದ ಅಗಮಿಸಿದರು.

ದೇವನಹಳ್ಳಿ: ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿರುವ ಬಾಲರಾಮನ ಕೆತ್ತಿರುವ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಬುಧವಾರ ರಾತ್ರಿ 9.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಹೊರ ಬಂದ ಸಂದರ್ಭದಲ್ಲಿ ಸಹಸ್ರಾರು ಅಭಿಮಾನಿಗಳು ಅವರನ್ನು ಕಾಣಲು ಕಾತುರದಿಂದ ಕಾಯುತ್ತಿದ್ದು, ಅದ್ಧೂರಿ ಸ್ವಾಗತ ಕೋರಿದರು.

ಅಯೋಧ್ಯೆಯಿಂದ ನೇರವಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್‌ ಇಂಡಿಯ ವಿಮಾನದಲ್ಲಿ ರಾತ್ರಿ 8.20ಕ್ಕೆ ಲ್ಯಾಂಡ್‌ ಆದರೂ ಟರ್ಮಿನಲ್‌ನಿಂದ ಹೊರಬರಲು 9.20 ಆಗಿತ್ತು. ಅಭಿಮಾನಿಗಳನ್ನು ಕಂಡ ಅರುಣ್‌ ಅವರು ಪೊಲೀಸರ ಬೆಂಗಾವಲಿನೊಂದಿಗೆ ಬೆಂಗಳೂರಿನತ್ತ ಹೊರಟರೆನ್ನಲಾಗಿದೆ.

ಅರುಣ್‌ ಯೋಗಿರಾಜ್‌ ಅವರನ್ನು ಸ್ವಾಗತಿಸಲು ಮುಖಂಡರಾದ ನಂದೀಶ್‌ ರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ನಾರಾಯಣ್‌, ಮಾಜಿ ಶಾಸಕ ಜಿ ಚಂದ್ರಣ್ಣ, ಎಚ್‌.ಎಂ.ರವಿಕುಮಾರ್‌, ಅಂಬರೀಶ್‌ಗೌಡ, ಸುನೀಲ್‌, ಸುರೇಶ್‌ ಆಚಾರ್‌, ಎಸ್‌.ರಮೇಶ್‌ಕುಮಾರ್ ಹಾಗೂ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಆರ್‌ಎಸ್‌ನಿಂದಲೇ ನಗರಕ್ಕೆ ನೀರು ತರಲು ಸ್ಕೀಂ
ತರಕಾರಿಯಲ್ಲಿನ ಅಪಾಯಕಾರಿ ಅಂಶ ದೇಹಕ್ಕೆ ಸೇರದಿರಲು ಈ ಕ್ರಮ ಅನುಸರಿಸಿ ಸೇವಿಸಿ