ವೈದ್ಯ-ಹೆಬ್ಬಾರ್ ಬಣದ ನಡುವೆ ಕೆಡಿಸಿಸಿ ಗದ್ದುಗೆಗಾಗಿ ಪೈಪೋಟಿ

KannadaprabhaNewsNetwork |  
Published : Oct 22, 2025, 01:03 AM IST
ಶಿವರಾಮ ಹೆಬ್ಬಾರ್ | Kannada Prabha

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷದತ್ತ ವಾಲಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ನಡುವೆ ಕೆಡಿಸಿಸಿ ಬ್ಯಾಂಕ್ ಗದ್ದುಗೆಗಾಗಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ಅ.25ರ ಚುನಾವಣೆ ಮೇಲೆ ತೀವ್ರ ಕುತೂಹಲ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷದತ್ತ ವಾಲಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ನಡುವೆ ಕೆಡಿಸಿಸಿ ಬ್ಯಾಂಕ್ ಗದ್ದುಗೆಗಾಗಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ಅ.25ರ ಚುನಾವಣೆ ಮೇಲೆ ತೀವ್ರ ಕುತೂಹಲ ಉಂಟಾಗಿದೆ.

ಹಿಂದಿನ ಅವಧಿಯಲ್ಲಿ ಸಹಕಾರ ಭಾರತಿಯಡಿ ಜಯಭೇರಿ ಬಾರಿಸಿದವರು ಈ ಬಾರಿ ಮಂಕಾಳ ವೈದ್ಯ ಅವರೊಂದಿಗೆ ಕೈಜೋಡಿಸಿದ್ದಾರೆ. ಅಂದರೆ ಪರೋಕ್ಷವಾಗಿ ಬಿಜೆಪಿಯೊಂದಿಗೆ ಇದ್ದವರೂ ಮಂಕಾಳ ವೈದ್ಯರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಶತಾಯಗತಾಯ ಕೆಡಿಸಿಸಿ ಬ್ಯಾಂಕ್ ಆಡಳಿತ ತಮ್ಮ ಬಣದಲ್ಲಿರಬೇಕೆಂದು ಮಂಕಾಳ ವೈದ್ಯ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಬಣದೊಂದಿಗೆ ತೀವ್ರ ಸ್ಪರ್ಧೆಗೆ ಇಳಿದಿದ್ದಾರೆ.

ಒಟ್ಟೂ 16 ನಿರ್ದೇಶಕರ ಸ್ಥಾನಕ್ಕೆ 44ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವರಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದು, ಚುನಾವಣಾ ಕಣದಲ್ಲಿ 33 ಅಭ್ಯರ್ಥಿಗಳು ಇದ್ದಾರೆ.

ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಕಾರವಾರ ಶಾಸಕ ಸತೀಶ ಸೈಲ್ ಹೀಗೆ ಮೂವರು ಶಾಸಕರು ಚುನಾವಣಾ ಕಣದಲ್ಲಿರುವುದು ಚುನಾವಣಾ ಕಣ ಇನ್ನಷ್ಟು ರಂಗೇರುವಂತೆ ಮಾಡಿದೆ.

30 ಅಭ್ಯರ್ಥಿಗಳ ನಡುವೆ ಚುನಾವಣೆ

ಭಟ್ಕಳದ ಫ್ಯಾಕ್ಸ್‌ನಿಂದ ಸ್ಪರ್ಧಿಸಿರುವ ಸಚಿವ ಮಂಕಾಳ ವೈದ್ಯ, ಹೊನ್ನಾವರ ಮತಕ್ಷೇತ್ರದ ವಿ.ಕೆ. ವಿಶಾಲ್ ಹಾಗೂ ಅಂಕೋಲಾದಿಂದ ಸ್ಪರ್ಧಿಸಿರುವ ಬೀರಣ್ಣ ಬೊಮ್ಮಯ್ಯ ನಾಯಕ (ಬಾಬು ಸುಂಕೇರಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ 30 ಅಭ್ಯರ್ಥಿಗಳ ನಡುವೆ ಚುನಾವಣೆ ನಡೆಯಲಿದೆ.ರಾಧಾಕೃಷ್ಣ ದೇವಾಲಯದಲ್ಲಿ ಕಳ್ಳತನ:

ಕಾರವಾರ ನಗರದ ರಾಧಾಕೃಷ್ಣ ದೇವಾಲಯದಲ್ಲಿ ದೇವರ ಬಂಗಾರ, ಬೆಳ್ಳಿಯ ಆಭರಣಗಳನ್ನು ಸೋಮವಾರ ರಾತ್ರಿ ಕಳ್ಳತನ ಮಾಡಲಾಗಿದೆ.ದೇವಾಲಯದ ಚಾವಣಿಯ ಹೆಂಚು ತೆಗೆದು ಒಳಗಡೆ ಪ್ರವೇಶಿಸಿ ಕಳವು ಮಾಡಿದ್ದಾರೆ.ದೇವರ ಮೂರ್ತಿ ಇರುವ ಪೀಠದ ಬೆಳ್ಳಿ ಚಾಮರ, ಕಿರೀಟ ಸೇರಿದಂತೆ 440 ಗ್ರಾಂ ತೂಕದ ಬೆಳ್ಳಿ ಆಭರಣಗಳು, 5 ಗ್ರಾಂ ಬಂಗಾರದ ಆಭರಣ ಕಳವು ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ನಗರದ ಸಾಯಿಕಟ್ಟಾದ ಸಾಯಿ ಮಂದಿರದಲ್ಲಿಯೂ ಲಕ್ಷಾಂತರ ರು. ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿತ್ತು. ಹಲವು ದಿನಗಳ ಬಳಿಕ ಪೊಲೀಸರು ಹರಿಯಾಣದಲ್ಲಿ ಆರೋಪಿಗಳನ್ನು ಬಂಧಿಸಿದ್ದರು.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ