ನಾನು ಕಳೆದ ೩೭ ವರ್ಷದಿಂದ ಹಿಂದೂ ಸಂಘಟನೆಯಲ್ಲಿ ದುಡಿದಿದ್ದೇನೆ, ಕಾರ್ಯಕರ್ತರಲ್ಲಿ ಒಬ್ಬನಾಗಿ ದುಡಿದಿದ್ದೇನೆ, ಕಾರ್ಯಕರ್ತರನ್ನು ಬಿಟ್ಟು ಸತ್ಯಜಿತ್ ಇಲ್ಲ. ಸಂಘಟನೆಯ ಹೋರಾಟದಲ್ಲಿ ಕಾರ್ಯಕರ್ತರ ಧ್ವನಿಯಾಗಿ ಕೆಲಸವನ್ನು ಮಾಡಿದ್ದೇನೆ. ಇದರಿಂದ ನಾನು ಈ ಹಂತಕ್ಕೆ ಬಂದಿದ್ದೇನೆ. ಸತ್ಯಜಿತ್ ಭಾವನಾತ್ಮಕ ಜೀವಿಯಾಗಿದ್ದರೂ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
೧೫ ವರ್ಷದ ಹಿಂದೆ ನನಗೆ ಬಿಜೆಪಿಯಿಂದ ಸಿಗಬೇಕಾದ ಲೋಕಸಭಾ ಟಿಕೆಟ್ ಕಸಿಯಲಾಗಿತ್ತು. ಈಗ ಅದನ್ನು ಮತ್ತೆ ಕೊಡಿ ಎಂದು ಕೇಳುವುದು ನನ್ನ ಹಕ್ಕು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಜಿಲ್ಲೆಯಲ್ಲಿ ಕಾರ್ಯಕರ್ತರ ಅಭಿಲಾಷೆಯಂತೆ ಸ್ಪರ್ಧಿಸುವುದು ಖಚಿತ ಎಂದು ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಟೀಂ ಸತ್ಯಜಿತ್ ಸುರತ್ಕಲ್ ದ.ಕ. ಜಿಲ್ಲೆ ವತಿಯಿಂದ ತುಂಬೆ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಭಾನುವಾರ ನಡೆದ ಸತ್ಯಜಿತ್ ಸುರತ್ಕಲ್ ಅವರಿಗೆ ಬಿಜೆಪಿ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಆಗ್ರಹಿಸಿ ನಡೆದ ಜನಾಗ್ರಹ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾನು ಕಳೆದ ೩೭ ವರ್ಷದಿಂದ ಹಿಂದೂ ಸಂಘಟನೆಯಲ್ಲಿ ದುಡಿದಿದ್ದೇನೆ, ಕಾರ್ಯಕರ್ತರಲ್ಲಿ ಒಬ್ಬನಾಗಿ ದುಡಿದಿದ್ದೇನೆ, ಕಾರ್ಯಕರ್ತರನ್ನು ಬಿಟ್ಟು ಸತ್ಯಜಿತ್ ಇಲ್ಲ. ಸಂಘಟನೆಯ ಹೋರಾಟದಲ್ಲಿ ಕಾರ್ಯಕರ್ತರ ಧ್ವನಿಯಾಗಿ ಕೆಲಸವನ್ನು ಮಾಡಿದ್ದೇನೆ. ಇದರಿಂದ ನಾನು ಈ ಹಂತಕ್ಕೆ ಬಂದಿದ್ದೇನೆ. ಸತ್ಯಜಿತ್ ಭಾವನಾತ್ಮಕ ಜೀವಿಯಾಗಿದ್ದರೂ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ನನಗೆ ಚುನಾವಣೆಯಲ್ಲಿ ನಿಲ್ಲುವ ಭರವಸೆ ನೀಡಿದ್ದರು. ಕಳೆದ ೫ ವರ್ಷದಿಂದ ಅವರಿಂದ ಯಾವುದೇ ಮಾತಿಲ್ಲ. ನನಗೆ ವೈಯಕ್ತಿಕವಾಗಿ ಯಾವುದೂ ಬೇಡ. ಈಗ ನಾನು ರಾಜಕೀಯ ಮತ್ತು ಸಾಮಾಜಿಕ ಬಲಿದಾನಕ್ಕೆ ಸಿದ್ಧನಾಗಿದ್ದೇನೆ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.