ಕುರುಗೋಡು: ಗುರಿ, ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಸಾಧನೆಗಿರುವ ಮೂರು ಮಾರ್ಗವಾಗಿವೆ. ಆದರೆ, ಜೀವನದಲ್ಲಿ ತಾಳ್ಮೆ ಪ್ರಮುಖವಾಗಿದ್ದು, ಪ್ರಯತ್ನದ ಮುಂದೆ ಸಾಧನೆ ತೀರಾ ಸಣ್ಣದು ಎಂದು ಧಾರವಾಡದ ಜ್ಞಾನದೇಗುಲ ಕೋಚಿಂಗ್ ಸೆಂಟರ್ ನಿರ್ದೇಶಕ ರಾಧಾಕೃಷ್ಣ ಸಜ್ಜನ್ ಅಭಿಪ್ರಾಯಪಟ್ಟರು.
ಶಾಸಕ ಜೆ.ಎನ್. ಗಣೇಶ್.ಪ್ರತಿಯೊಬ್ಬರು ಶಿಸ್ತು ಮೈಗೂಡಿಸಿಕೊಂಡರೆ ಮಾತ್ರ ಸಾಧನೆಗೆ ಪ್ರೇರಣೆಯಾಗುತ್ತದೆ. ಏಳು-ಬೀಳುಗಳ ನಡುವೆ ಪ್ರಯತ್ನ ನಿರಂತರವಾಗಿದ್ದರೆ ಮಾತ್ರ ಪ್ರತಿಫಲ ದೊರಕಲು ಸಾಧ್ಯ ಎಂದರು.
ಖಾಸಗಿ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆ ಎದುರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ, ಬಡತನದಲ್ಲಿ ಬೆಳೆದು ಸರ್ಕಾರಿ ಕಾಲೇಜುಗಳಿ ಓದಿದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಕಂಪ್ಲಿ ಮತ್ತು ಕುರುಗೋಡಿನಲ್ಲಿ ಪ್ರತ್ಯೇಕವಾಗಿ ಒಂದು ತಿಂಗಳ ಕಾಲ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.ತೋರಣಗಲ್ಲು ಉಪ ವಿಭಾಗದ ಡಿವೈಎಸ್ಪಿ ಪ್ರಸಾದ್ ಗೋಖಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಉನ್ನತ ಸರ್ಕಾರಿ ಉದ್ಯೋಗಗಳು ನಗರಪ್ರದೇಶಗಳ ಶ್ರೀಮಂತರ ಮಕ್ಕಳಿಗೆ ಮಾತ್ರ ಸೀಮಿತ ಎನ್ನುವ ಮನೋಭಾವ ಗ್ರಾಮೀಣ ಭಾಗದ ಯುವಕರಲ್ಲಿದೆ. ಅದನ್ನು ಹೋಗಲಾಡಿಸುವ ಉದ್ದೇಶದಿಂದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮ ಪರೀಕ್ಷೆಗಳಿಗೆ ಮಾರ್ಗದರ್ಶನ ಶಿಬಿರ ಆಯೋಜಿಸಲಾಗಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ನರಸಪ್ಪ ಕೆಪಿಎಸ್ಸಿ ಪರೀಕ್ಷೆ ಹಾಗೂ ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಪಿಎಸ್ಐ ಪರೀಕ್ಷೆ ಕುರಿತು ಮಾಹಿತಿ ನೀಡಿದರು.