ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ

KannadaprabhaNewsNetwork | Published : Mar 14, 2025 12:33 AM

ಸಾರಾಂಶ

ನಿಮ್ಮಲ್ಲಿರುವ ಮೊಬೈಲ್ ಗಳನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ ನಿಮಗೆ ನಿಮ್ಮ ಮೊಬೈಲ್ ನಲ್ಲೇ ಸರ್ಕಾರಿ ಕೆಲಸಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಅದನ್ನು ನೋಡಿ ನೀವು ಅರ್ಜಿ ಸಲ್ಲಿಸಿ ಸರ್ಕಾರಿ ಸೇವೆಗೆ ಸೇರಿ ಉತ್ತಮ ಸೇವೆ ನೀಡುವ ಜೊತೆಗೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಹಲಗೂರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಐಕ್ಯೂಎಸಿ ಮತ್ತು ಪ್ರೇರಣಾ ಅಂಡ್ ಪ್ಲಸ್ ಮೇಟ್ ಸೆಲ್ ಮತ್ತು ಅಮೋಘವರ್ಷ ಕೋಚಿಂಗ್ ಅಕಾಡೆಮಿ ಬೆಂಗಳೂರು ವತಿಯಿಂದ ಗುರುವಾರ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ ನಡೆಯಿತು.

ಕೋಚಿಂಗ್ ಕೇಂದ್ರದ ತರಬೇತುದಾರ ಮೌನೇಶ್ವರ್ ಪಾರಿಕ್ಕರ್ ಮಾತನಾಡಿ, ಅಕಾಡಮಿ ವತಿಯಿಂದ ಗ್ರಾಮೀಣ ಭಾಗದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆಗಳನ್ನು ಏರ್ಪಡಿಸಿ ಪ್ರತಿ ಕಾಲೇಜಿನಿಂದ 5 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತರಬೇತಿ ನೀಡಲು ಆಯ್ಕೆ ಮಾಡಿಕೊಳ್ಳಲಾಗುವುದು ಎಂದರು.

ಅಕಾಡೆಮಿ ಗೌರವಾಧ್ಯಕ್ಷೆ ವಾಣಿ ಕೆ.ಶಿವರಾಂ ಅಶಯದಂತೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಒಂದು ವರ್ಷ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಿ, ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಅಶಕ್ತರ ವಯಸ್ಸಾದವರ ಸೇವೆ ಮಾಡಿದರೆ ಸಿಗುವ ಆತ್ಮತೃಪ್ತಿ ಎಷ್ಟೇ ಕೋಟಿ ಕೊಟ್ಟರು ಸಿಗುವುದಿಲ್ಲ. ನಮ್ಮ ವಿದ್ಯೆ ನಾಲ್ಕು ಜನರ ಉಪಯೋಗಕ್ಕೆ ಬರಬೇಕು. ಅದು ಸರ್ಕಾರಿ ಕೆಲಸದಲ್ಲಿದ್ದರೆ ಮಾತ್ರ ಸಾಧ್ಯ ಎಂದು ಹೇಳಿದರು.

ನಿಮ್ಮಲ್ಲಿರುವ ಮೊಬೈಲ್ ಗಳನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ ನಿಮಗೆ ನಿಮ್ಮ ಮೊಬೈಲ್ ನಲ್ಲೇ ಸರ್ಕಾರಿ ಕೆಲಸಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಅದನ್ನು ನೋಡಿ ನೀವು ಅರ್ಜಿ ಸಲ್ಲಿಸಿ ಸರ್ಕಾರಿ ಸೇವೆಗೆ ಸೇರಿ ಉತ್ತಮ ಸೇವೆ ನೀಡುವ ಜೊತೆಗೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದ ಪ್ರಾಂಶುಪಾಲ ಆಲಂಗೂರು ಮಂಜುನಾಥ್ ಮಾತನಾಡಿ, ವಿದ್ಯಾರ್ಥಿ ಜೀವನದ ಅಮೂಲ್ಯವಾದ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಪರ್ಧಾತ್ಮಕ ಜೀವನದಲ್ಲಿ ಉತ್ತಮ ಅಂಕ ಗಳಿಸಿ, ಉನ್ನತ ಅಧಿಕಾರಿಗಳಾಗಲು ಮುಂದಾಗಿ ಎಂದು ಕರೆ ನೀಡಿದರು.

ಈ ವೇಳೆ ಐ.ಕ್ಯೂ.ಎ.ಸಿ. ಸಂಚಾಲಕಿ ಸೀಮಾ ಕೌಸರ್, ಪ್ರೇರಣಾ ಪ್ಲೇಸ್ ಮೇಟ್ ಸೆಲ್ ಸಂಚಾಲಕಿ ತಾರಾ ಜಯಲಕ್ಷ್ಮಿ, ಉಪನ್ಯಾಸಕರಾದ ಎನ್.ಎಸ್. ಶಂಕರೇಗೌಡ, ಗುರು ಪ್ರಸಾದ್, ಬಿ.ಸಿ.ರವಿ, ರಘು, ಅನುಸೂಯ, ರಮ್ಯ, ಶಿವಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article