ಸ್ಪರ್ಧಿಗಳು ಆಟದಲ್ಲಿ ಸೋಲು ಗೆಲುವನ್ನು ಲೆಕ್ಕಿಸದೆ ಮುನ್ನುಗ್ಗಿ : ರಂಗಾಪುರ ಶ್ರೀಗಳು

KannadaprabhaNewsNetwork |  
Published : Dec 20, 2025, 01:15 AM IST
ಸ್ಪರ್ಧಿಗಳು ಆಟದಲ್ಲಿ ಸೋಲು ಗೆಲುವನ್ನು ಲೆಕ್ಕಿಸದೆ ಮುನ್ನುಗ್ಗಿ : ರಂಗಾಪುರ ಶ್ರೀಗಳು  | Kannada Prabha

ಸಾರಾಂಶ

ಖೋಖೋ ಕ್ರೀಡೆಗೆ ಅಖಿಲ ಭಾರತ ಮಟ್ಟದಲ್ಲಿ ಎಲ್ಲಾ ಸೌಲಭ್ಯವನ್ನು ಭಾರತ ಸರ್ಕಾರ ಕೊಡುತ್ತಿದೆ. ಇವುಗಳನ್ನು ಕ್ರೀಡಾ ಪ್ರೇಮಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು. ಇನ್ನೂ ಹೆಚ್ಚು ಜನರು ಖೋಖೋ ಆಡಲು ಮುಂದೆ ಬರಬೇಕು. ದೇಶಿ ಕ್ರೀಡೆ ಖೋಖೋಗೆ ಉತ್ತೇಜನ ನೀಡಬೇಕು.

ಕನ್ನಡಪ್ರಭ ವಾರ್ತೆ ತಿಪಟೂರು ಪ್ರತಿಯೊಬ್ಬ ಕ್ರೀಡಾ ಸ್ಪರ್ಧಿ ಆಟದಲ್ಲಿ ಸೋಲು- ಗೆಲುವನ್ನು ಲೆಕ್ಕಿಸದೆ ಮುನ್ನುಗ್ಗಬೇಕು. ಸೋಲು- ಗೆಲುವು ಕ್ರೀಡೆಯಲ್ಲಿ ಶಾಶ್ವತವಲ್ಲ ಎಂದು ಕೆರೆಗೋಡಿ- ರಂಗಾಪುರ ಸುಕ್ಷೇತ್ರದ ಗುರುಪರದೇಶಿಕೇಂದ್ರ ಸ್ವಾಮೀಜಿ ಕ್ರೀಡಾಳುಗಳಿಗೆ ಸ್ಫೂರ್ತಿಯ ನುಡಿಗಳನ್ನಾಡಿದರು.

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕಲ್ಪತರು ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ರಾಜ್ಯಮಟ್ಟದ ೩೯ನೇ ಹೊನಲು ಬೆಳಕಿನ ಪುರುಷ ಹಾಗೂ ಮಹಿಳೆಯರ ಖೋ ಖೋ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಚಾಲನೆ ನೀಡಿ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿವರ್ಷವೂ ತಿಪಟೂರಿನಲ್ಲಿ ಲೋಕೇಶ್ವರ ಅವರು ಕಲ್ಪತರು ನಾಡಿನ ಕ್ರೀಡಾಭಿಮಾನಿಗಳು ಹಾಗೂ ಆಸಕ್ತರಿಗೆ ಕ್ರೀಡಾಹಬ್ಬವನ್ನು ಆಯೋಜಿಸುತ್ತಿದ್ದು, ಮುಂದೆಯೂ ದೊಡ್ಡಮಟ್ಟದ ಕ್ರೀಡಾಕೂಟಗಳನ್ನು ನಡೆಸುವಂತಾಗಲಿ. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳು ತಿಪಟೂರಿನಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.

ರಾಜ್ಯ ಖೋಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರ ದೇಶಿ ಆಟವಾಗಿದ್ದ ಖೋಖೋ ಈಗ ಅಂತಾರಾಷ್ಟ್ರೀಯ ಕ್ರೀಡೆಯಾಗಿ ಬೆಳೆದು ನಿಂತಿದೆ. ಕೇವಲ ನೂರು ರುಪಾಯಿ ಬಹುಮಾನಕ್ಕಾಗಿ ಆಟವಾಡುತ್ತಿದ್ದ ನಮ್ಮ ಕಾಲ ಹೋಗಿ ಈಗ ಆಟಗಾರರು ಲಕ್ಷಾಂತರ ರು.ಗಳ ಸಂಭಾವನೆ ಪಡೆಯುವಂತಾಗಿದೆ. ರಾಷ್ಟ್ರದಲ್ಲಿಯೇ ಒಂದು ಪಂದ್ಯಾವಳಿಗೆ ೧೦೦ತಂಡಗಳು ನೋಂದಾಯಿಸಿದ ಉದಾಹರಣೆಯಿಲ್ಲ. ಅಂಥದ್ದರಲ್ಲಿ ತಿಪಟೂರಿನಲ್ಲಿ ನಡೆಯುತ್ತಿರುವ ಖೋಖೋ ಪಂದ್ಯಾವಳಿಗೆ ೧೩೦ ತಂಡಗಳು ನೋಂದಾಯಿಸಿ ೧೧೪ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿರುವುದು ಸಂತಸದ ವಿಷಯವಾಗಿದೆ. ೩೯ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗಳು ನಡೆದಿದ್ದು, ತಿಪಟೂರಿನಲ್ಲಿಯೇ ೮ ಪಂದ್ಯಾವಳಿಗಳನ್ನು ಏರ್ಪಡಿಸಿ ದಾಖಲೆ ಮಾಡಿದ್ದೇವೆ. ಕ್ರೀಡೆಗಳಲ್ಲಿ ಭಾಗಿಯಾದ ಕ್ರೀಡಾಪಟುಗಳಿಗೆ ಸರ್ಕಾರದ ಕಡೆಯಿಂದ ಉತ್ತಮವಾದ ಅವಕಾಶಗಳಿವೆ. ಹಾಗಾಗಿ ಇನ್ನೂ ಹೆಚ್ಚು ಸ್ಪರ್ಧಿಗಳು ಈ ಕ್ರೀಡೆಯಲ್ಲಿ ಭಾಗವಹಿಸುವಂತಾಗಲಿ ಎಂದರು.

ಯುವಜನ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಮಾತನಾಡಿ, ಕ್ರೀಡಾಕೂಟ ಆಯೋಜಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ತಾಲೂಕು ಮಟ್ಟದಲ್ಲಿ ಲೋಕೇಶ್ವರ ಕ್ರೀಡೆಯ ಪ್ರಗತಿಗೋಸ್ಕರ ರಾಜ್ಯ ಪಂದ್ಯಾವಳಿ ಆಯೋಜಿಸುತ್ತಿರುವುದು ಖುಷಿಯ ಸಂಗತಿಯಾಗಿದೆ. ಕ್ರೀಡಾ ಮನೋಭಾವದಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಖೋಖೋ ಕ್ರೀಡೆಗೆ ಸರ್ಕಾರದ ವತಿಯಿಂದ ಖೇಲ್ ರತ್ನ ಪ್ರಶಸ್ತಿ ಗೆದ್ದ ಕ್ರೀಡಾಪಟುಗಳಿಗೆ ೫ ಲಕ್ಷ ರು. ಬಹುಮಾನ ಕೊಡುತ್ತಿದೆ. ಅಲ್ಲದೆ ಪೊಲೀಸ್ ಇಲಾಖೆ ಉದ್ಯೋಗದಲ್ಲಿ ಮೀಸಲಾತಿ ಇದೆ. ಜೀವನದಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿ ಆಕಸ್ಮಿಕವಾಗಿ ಫೇಲ್ ಆಗಬಹುದು, ಆದರೆ ಕ್ರೀಡೆಯಲ್ಲಿ ಭಾಗವಹಿಸಿದ ಸ್ಪರ್ಧಿಯು ಜೀವನದಲ್ಲಿ ಯಾವತ್ತೂ ಸೋಲಲಾರ ಎಂದರು.

ರಾಷ್ಟ್ರೀಯ ಖೋಖೋ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಉಪಕಾರ್‌ ಸಿಂಗ್ ಮಾತನಾಡಿ, ಖೋಖೋ ಕ್ರೀಡೆಗೆ ಅಖಿಲ ಭಾರತ ಮಟ್ಟದಲ್ಲಿ ಎಲ್ಲಾ ಸೌಲಭ್ಯವನ್ನು ಭಾರತ ಸರ್ಕಾರ ಕೊಡುತ್ತಿದೆ. ಇವುಗಳನ್ನು ಕ್ರೀಡಾ ಪ್ರೇಮಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು. ಇನ್ನೂ ಹೆಚ್ಚು ಜನರು ಖೋಖೋ ಆಡಲು ಮುಂದೆ ಬರಬೇಕು. ದೇಶಿ ಕ್ರೀಡೆ ಖೋಖೋಗೆ ಉತ್ತೇಜನ ನೀಡಬೇಕು ಎಂದರು.

ಮಾಜಿ ಸಚಿವ ಬಿ.ಸಿ.ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜು, ಮಾಜಿ ನಗರಸಭಾಧ್ಯಕ್ಷ ರಾಮಮೋಹನ್, ಡಾ.ಕೇಶವಕುಮಾರ್, ವೆಂಕಟರಾಜು, ಶಿವರಾಜು, ಬೆಂಗಳೂರು ವಿವಿಯ ಮಾಜಿ ಕ್ರೀಡಾ ಕುಲಸಚಿವ ಸುಂದರ್ ರಾಜ್ ಇನ್ನಿತರರು ಉಪಸ್ಥಿತರಿದ್ದರು. ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!