ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಈ ವೇಳೆ ಅಣಗಳ್ಳಿ ದಶರಥ್, ಚಾಮರಾಜು ಸೇರಿದಂತೆ ಹಲವರು ಹತ್ತು ದೂರುಗಳನ್ನು ಸಲ್ಲಿಸಿದರು. ಕಂದಾಯ ಇಲಾಖೆ ಜಾಗ ಅತಿಕ್ರಮ, ಒತ್ತುವರಿ ದಾರಿ ತೆರವಿಗೆ ಸಂಬಂಧಿಸಿದಂತೆ 3ದೂರು, ಚೆಸ್ಕಾಂ ಇಲಾಖೆ ವಿರುದ್ದ 1, ಕೊಂಗರಹಳ್ಳಿ ಪಿಡಿಒ ವಿರುದ್ದ 1ದೂರು, ನಗರಸಭೆಗೆ ಸಂಬಂಧಿಸಿದಂತೆ 5 ದೂರುಗಳು ಸೇರಿ 10 ದೂರುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗೆ ದೂರುಗಳನ್ನು ಕಳುಹಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ದೂರುದಾರರ ಒತ್ತಾಯದ ಹಿನ್ನೆಲೆಯಲ್ಲಿ ಚಿಕ್ಕರಂಗನಾಥನ ಕೆರೆ ಮತ್ತು ಕೊಳ್ಳೇಗಾಲ ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಇ-ಸ್ವತ್ತು ಮತ್ತು ಅತಿಕ್ರಮ ತೆರವು ವಿಚಾರದ ಕುರಿತು ಚರ್ಚಿಸಿದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ದಶರಥ್ ಮಾತನಾಡಿ, ಸಾಕಷ್ಟು ಸರ್ಕಾರಿ ಆಸ್ತಿಗಳು ಅತಿಕ್ರಮವಾಗಿವೆ, ನಿಜಕ್ಕೂ ಕೊಳ್ಳೇಗಾಲ ನಗರಸಭೆ ಸರ್ಕಾರಿ ಆಸ್ತಿಗಳಿಗೆ ಇ-ಸ್ವತ್ತು ನೀಡುತ್ತಿದ್ದೆಯೇ? ಖಚಿತಪಡಿಸಿಕೊಳ್ಳಿ ಎಂದು ಲೋಕಾಯುಕ್ತ ಅಧಿಕಾರಿಗಳಲ್ಲಿ ಮನವಿ ಮಾಡಿದರು.ಸರ್ಕಾರಿ ಕಚೇರಿ ಸೇರಿದಂತೆ ಆಸ್ತಿಗಳಿಗೆ ಇ-ಸ್ವತ್ತು ನೀಡದೆ ನಗರಸಭೆ ಇನ್ನು ಯಾವ ರೀತಿ ಸಾರ್ವಜನಿಕರಿಗೆ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ಮನಗಾಣಬೇಕು ಎಂದರು.
ಕೆರೆಗೆ ಯುಜಿಡಿ ನೀರು ಬಿಡುಗಡೆ ವೀಕ್ಷಣೆ: ಈ ವೇಳೆ ವೃತ್ತ ನಿರೀಕ್ಷಕರು ರಂಗನಾಥನ ಕೆರೆಗೆ ನಗರಸಭೆ ಯುಜಿಡಿ ನೀರು ಬಿಡುತ್ತಿರುವ ದೃಶ್ಯವನ್ನು ವೀಕ್ಷಿಸಿದರು. ಈ ಕುರಿತು ನೀವು ಕ್ರಮಕೈಗೊಳ್ಳಬೇಕು ಎಂದು ದಶರಥ್ ಆಗ್ರಹಿಸಿದರು. ಕೂಡಲೆ ಲಿಖಿತ ದೂರು ಸಲ್ಲಿಸಿ ಸಂಬಂಧಪಟ್ಟ ನಗರಸಭಾಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮವಹಿಸುವೆ ಎಂದು ಭರವಸೆ ನೀಡಿದರು. ಈ ವೇಳೆ ಜಿಲ್ಲಾ ಲೋಕಾಯುಕ್ತ ಕಚೇರಿಯ ಮುಖ್ಯಪೇದೆ ಮಹಾಲಿಂಗಸ್ವಾಮಿ, ಪೇದೆ ಶ್ರೀನಿವಾಸ್, ಚಾಲಕ ಕೃಷ್ಣೇಗೌಡ ಇನ್ನಿತರರಿದ್ದರು.