ಹಣಕ್ಕೆ ಬೇಡಿಕೆ ತಾಲೂಕು ಆಡಳಿತಕ್ಕೆ ದೂರು

KannadaprabhaNewsNetwork |  
Published : Nov 30, 2024, 12:51 AM IST
29ಕೆಎಂಎನ್ ಡಿ12 | Kannada Prabha

ಸಾರಾಂಶ

ವೃದ್ಯಾಪ್ಯ, ವಿಧವಾ ವೇತನ, ವಿಕಲಚೇತನರ ಪ್ರಮಾಣ ಪತ್ರ ನೀಡಲು ಉಪತಹಸೀಲ್ದಾರ್ ರೊಬ್ಬರು ಹಣದ ಬೇಡಿಕೆ ಇಡುತ್ತಿದ್ದು, ಅವರನ್ನು ಬದಲಾವಣೆ ಮಾಡುವಂತೆ ದರಸಗುಪ್ಪೆ ಗ್ರಾಮದ ಮಂಜುನಾಥ್ ತಾಲೂಕು ಆಡಳಿತಕ್ಕೆ ದೂರು ನೀಡಿದ್ದಾರೆ.

ಶ್ರೀರಂಗಪಟ್ಟಣ: ವೃದ್ಯಾಪ್ಯ, ವಿಧವಾ ವೇತನ, ವಿಕಲಚೇತನರ ಪ್ರಮಾಣ ಪತ್ರ ನೀಡಲು ಉಪತಹಸೀಲ್ದಾರ್ ರೊಬ್ಬರು ಹಣದ ಬೇಡಿಕೆ ಇಡುತ್ತಿದ್ದು, ಅವರನ್ನು ಬದಲಾವಣೆ ಮಾಡುವಂತೆ ದರಸಗುಪ್ಪೆ ಗ್ರಾಮದ ಮಂಜುನಾಥ್ ತಾಲೂಕು ಆಡಳಿತಕ್ಕೆ ದೂರು ನೀಡಿದ್ದಾರೆ. ತಾಲೂಕಿನ ಕಿರಂಗೂರು ನಾಡಕಚೇರಿಯ ಉಪತಹಸೀಲ್ದಾರ್ ಸುಧಾಮಣಿ ವಿಧವಾ ವೇತನ (ಓಎಪಿ) (ಪಿಎಚ್‌ಪಿ) ಸೇರಿದಂತೆ ಇತರೆ ಪ್ರಮಾಣ ಪತ್ರ ಜೊತೆಗೆ ಕೈ ಬರಹದ ಆರ್‌ಟಿಸಿ, ಎಂಆರ್‌ಗಳನ್ನು ನೀಡಲು ಹಣದ ಬೇಡಿಕೆ ಇಡುತ್ತಿದ್ದಾರೆ. ಅಲ್ಲದೆ ನಾಡಕಚೇರಿಗೆ ಬರುವ ಫಲಾನುಭವಿಗಳಿಗೆ ಹಣಕ್ಕಾಗಿ ಕಿರುಕುಳ ನೀಡುವುದು, ಅಲೆಸುವುದು ಹಾಗೂ ಸಾರ್ವಜನಿಕರ ಜೊತೆ ಸರಿಯಾದ ನಡವಳಿಕೆ ತೋರುತ್ತಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಇವರನ್ನು ಬೇರೆಡೆ ವರ್ಗಾವಣೆ ಮಾಡಿ, ಬೇರೆಯವರನ್ನು ಆ ಸ್ಥಾನಕ್ಕೆ ನೇಮಕ ಮಾಡುವಂತೆ ತಾಲೂಕು ಆಡಳಿತಕ್ಕೆ ಮಂಜುನಾಥ್ ದೂರು ನೀಡಿ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ