ಪಾರಂಪರಿಕ ಯೋಗ ಪದ್ದತಿ ಆರೋಗ್ಯ ರಕ್ಷಣೆಗೆ ಪೂರಕ

KannadaprabhaNewsNetwork |  
Published : Feb 18, 2025, 12:31 AM IST
ದೊಡ್ಡಬಳ್ಳಾಪುರದಲ್ಲಿ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್ ವತಿಯಿಂದ ನಡೆದ ಕೂರ್ಮಾಸನ ಭಾರ ಹೊರುವ ಸ್ಪರ್ಧೆಗಳ ಅಂಗವಾಗಿ ಯೋಗ ಪಟುಗಳು.ಯೋಗದ ಮೂಲಕ ಭಾರ ಹೊರುವ ಪ್ರದರ್ಶನ ನೀಡಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಶ್ರೀ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್, ಹರ್ಷಿಣಿ ಗ್ರೂಪ್ ಆಫ್ ಯೋಗ ಇನ್ ಕೂರ್ಮಾಸನ ಹಾಗೂ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರದ ಸಹಯೋಗದಲ್ಲಿ ಪ್ರಥಮ ವಿಶ್ವಮಟ್ಟದ ಕೂರ್ಮಾಸನ ಭಾರ ಹೊರುವ ಸ್ಪರ್ಧೆ-2025 ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ನಗರದ ಕೊಂಗಾಡಿಯಪ್ಪ ಕಾಲೇಜ್ ರಸ್ತೆಯ ನ್ಯಾಷನಲ್ ಪ್ರೈಡ್ ಸ್ಕೂಲ್‌ನಲ್ಲಿ ಚಾಲನೆ ನೀಡಲಾಯಿತು.

ದೊಡ್ಡಬಳ್ಳಾಪುರ: ಇಲ್ಲಿನ ಶ್ರೀ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್, ಹರ್ಷಿಣಿ ಗ್ರೂಪ್ ಆಫ್ ಯೋಗ ಇನ್ ಕೂರ್ಮಾಸನ ಹಾಗೂ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರದ ಸಹಯೋಗದಲ್ಲಿ ಪ್ರಥಮ ವಿಶ್ವಮಟ್ಟದ ಕೂರ್ಮಾಸನ ಭಾರ ಹೊರುವ ಸ್ಪರ್ಧೆ-2025 ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ನಗರದ ಕೊಂಗಾಡಿಯಪ್ಪ ಕಾಲೇಜ್ ರಸ್ತೆಯ ನ್ಯಾಷನಲ್ ಪ್ರೈಡ್ ಸ್ಕೂಲ್‌ನಲ್ಲಿ ಚಾಲನೆ ನೀಡಲಾಯಿತು.

ವಿವಿಧ ವಯೋಮಾನದ ಬಾಲಕ ಮತ್ತು ಬಾಲಕಿಯ ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ಸ್ಪರ್ಧಾಳುಗಳು ಕೂರ್ಮಾಸನ ಭಂಗಿಯಲ್ಲಿ 25 ರಿಂದ 200 ಕೆ.ಜಿ ತೂಕವನ್ನು ಹೊತ್ತರು. ನಂತರ ಐಚ್ಛಿಕ ಆಸನಗಳನ್ನು ಪ್ರದರ್ಶಿಸಿದರು.

ಸ್ಪರ್ಧೆಗಳ ಉದ್ಘಾಟನೆ ವೇಳೆ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅಸಂಖ್ಯಾತ ಯೋಗ ಪಟುಗಳಿದ್ದಾರೆ. ಆದರೆ ಕೂರ್ಮಾಸನ ಭಾರ ಹೊರುವ ಕ್ರಿಯೆಗಳನ್ನು ಮಾಡುವವರು ಸ್ಪಲ್ಪ ಮಂದಿ ಇದ್ದಾರೆ. ತಾಲೂಕಿನಲ್ಲಿ ಇದೇ ಪ್ರಥಮವಾಗಿ ಕೂರ್ಮಾಸನ ಭಾರ ಹೊರುವ ಪ್ರದರ್ಶನ ಆಯೋಜನೆ ಮಾಡಲಾಗುತ್ತಿದೆ. ಯೋಗದ ಮಹತ್ವವನ್ನು ಅರಿಯುವ ನಿಟ್ಟಿನಲ್ಲಿ ಈ ವಿಶಿಷ್ಟ ಯೋಗ ಕ್ರಿಯೆಯ ಬಗ್ಗೆ ಹೆಚ್ಚಿನ ಪ್ರಚಾರವಾಗಬೇಕಿದೆ ಎಂದರು.

ಯೋಗ ಶಿಕ್ಷಕ, ಕೂರ್ಮಾಸನ ತಜ್ಞ ಎಚ್.ಎಸ್.ರಾಮಕೃಷ್ಣ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಈ ವಿಶಿಷ್ಟ ಕೂರ್ಮಾಸನ ಭಾರ ಹೊರುವ ಸಾಕಷ್ಟು ಪ್ರದರ್ಶನಗಳು ನಡೆದಿವೆ. ಆದರೂ ಈ ಬಗ್ಗೆ ಅಪಪ್ರಚಾರಗಳು ಬರುತ್ತಿವೆ. ಯೋಗದ ಕೂರ್ಮಾಸನದಲ್ಲಿ ಹೆಚ್ಚಿನ ಭಾರ ಹೊರುವ ಸಾಮರ್ಥ್ಯ ಯೋಗಪಟು ಹೊಂದಿರುತ್ತಾನೆ. ಕೂರ್ಮಾಸನ ನಮ್ಮ ಪಾರಂಪರಿಕ ಯೋಗ ಪದ್ದತಿಗಳಲ್ಲಿ ಒಂದಾಗಿದ್ದು, ಋಷಿಮುನಿಗಳು ಇದನ್ನು ಮಾಡುತ್ತಿದ್ದರು. ಈ ಪದ್ದತಿಯಲ್ಲಿ ವ್ಯಕ್ತಿ ತನ್ನ ತೂಕಕ್ಕಿಂತ ಸುಮಾರು ನಾಲೈದು ಪಟ್ಟು ತೂಕ ಹೊರುವ ಸಾಮರ್ಥ್ಯ ಹೊಂದಿರುತ್ತಾನೆ. ಆದರೆ ಕ್ರಮಬದ್ದವಾಗಿ ಮಾಡಿದಾಗ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ನೋಡಲು ಕ್ಲಿಷ್ಟಕರವೆನಿಸಿದರೂ ಯೋಗ ಪಟುವಿಗೆ ಯಾವುದೇ ನೋವು, ಆಯಾಸ ಗೋಚರಿಸುವುದಿಲ್ಲ. ಈ ಯೋಗದಿಂದ ಹೃದಯ ಸಂಬಂ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದ್ದು, ದೈಹಿಕ ಕ್ಷಮತೆ ಹೆಚ್ಚುತ್ತದೆ. ವೈದ್ಯಕೀಯ ಕ್ಷಮತೆ ಸೇರಿದಂತೆ ಇದಕ್ಕೆ ಬೇಕಾದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಕಾರ್‍ಯಕ್ರಮದಲ್ಲಿ ಹಿರಿಯ ಮುಖಂಡರಾದ ವೆಂಕಟಾಚಲಯ್ಯ, ಪಿ.ಸಿ.ವೆಂಕಟೇಶ್, ವತ್ಸಲಾ, ನಗರಸಭಾ ಸದಸ್ಯ ಎಚ್.ಎಸ್.ಶಿವಶಂಕರ್, ನಿಸರ್ಗ ಯೋಗ ಕೇಂದ್ರದ ಕಾರ್‍ಯದರ್ಶಿ ನಟರಾಜ್, ಯೋಗ ಕೇಂದ್ರದ ಎಚ್.ಆರ್.ಹರ್ಷಿಣಿ, ನಳಿನಾ, ಗಂಗಾಧರ್, ಶ್ರೀನಿವಾಸ್, ವಿಶ್ವನಾಥ್ ಯೋಗ ಶಿಕ್ಷಕ ವಿನೋದ್ ಕುಮಾರ್ ಮತ್ತಿತರರು ಹಾಜರಿದ್ದರು.

ಫೋಟೋ :

17ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್ ವತಿಯಿಂದ ನಡೆದ ಕೂರ್ಮಾಸನ ಭಾರ ಹೊರುವ ಸ್ಪರ್ಧೆಗಳ ಅಂಗವಾಗಿ ಯೋಗ ಪಟುಗಳು.ಯೋಗದ ಮೂಲಕ ಭಾರ ಹೊರುವ ಪ್ರದರ್ಶನ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ