ಆಸ್ತಿ ಸಮೀಕ್ಷೆ ಪ್ರಕ್ರಿಯೆ ವಾರದಲ್ಲಿ ಪೂರ್ಣಗೊಳಿಸಿ: ಸಿಇಒ ರಾಹುಲ್ ಶಿಂಧೆ

KannadaprabhaNewsNetwork | Published : May 16, 2024 12:47 AM

ಸಾರಾಂಶ

ವಿವಿಧ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ಖಡಕ್‌ ಸೂಚನೆ

ಕನ್ನಡಪ್ರಭ ವಾರ್ತೆ ಬೆಳಗಾವಿಗ್ರಾಮ ಪಂಚಾಯತಿ ಆಸ್ತಿ ಸಮೀಕ್ಷೆ ಪ್ರಕ್ರಿಯೆಯನ್ನು ಅಭಿಯಾನದ ರೀತಿ ಕೈಗೊಂಡು ಮುಂದಿನ ಒಂದು ವಾರದಲ್ಲಿ ಪೂರ್ಣಗೊಳಿಸುವುದು ವಿಳಂಬ ಮಾಡಿದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಪಂಚಾಯತಿ ಅಧಿಕಾರಿಗಳೊಂದಿಗೆ ನಡೆದ ವಿವಿಧ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಸ್ತಿ ಸಮೀಕ್ಷೆ ಮಾಹಿತಿಗಳನ್ನು ಪಿ2 ವರದಿಯಲ್ಲಿ ಒಂದು ವಾರದಲ್ಲಿ ಅಪಡೆಟ್ ಮಾಡಲು ಸೂಚಿಸಿದರು. ಸಕಾಲ ಯೋಜನೆ ಯಡಿ ಕಾಲಮಿತಿ ಮೀರಿ ಬಾಕಿ ಉಳಿದ ಆರ್ಜಿಗಳನ್ನು ಮುಂದಿನ 2 ದಿನದಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದು, ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೇ ಆಗದಂತೆ ನಿರ್ವಹಿಸುವುದು, ಪಿಡಿಐ ಪ್ರಕ್ರಿಯೆಯನ್ನು ಮುಂದಿನ 4 ದಿನದಲ್ಲಿ ಪೂರ್ಣಗೊಳಿಸವುದು, ಕೂಸಿನಮನೆ, ನೆಲ ಜಲ ಮಿತ್ರ ಸರ್ವೇಗಳನ್ನು ಕೂಡಲೇ ಅಪಡೇಟ್ ಮಾಡಲು ತಿಳಿಸಿದರು.

ಮನರೇಗಾ ಯೋಜನೆಯಡಿ ಕಡ್ಡಾಯವಾಗಿ ಜನರಿಗೆ ಕೆಲಸ ನೀಡಿ ತಾಲೂಕಾವಾರು ನೀಡಿರುವ ಗುರಿಗನುಗುಣವಾಗಿ ಪ್ರಗತಿ ಸಾಧಿಸುವುದು, 2023-24ನೇ ಸಾಲಿನಡಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸದೇ ಹಾಗೇ ಉಳಿದುಕೊಂಡಿವೆ. ಅಂತಹ ಕಾಮಗಾರಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪೂರ್ಣಗೊಳಿಸಬೇಕು ಹಾಗೂ ಬಿಸಿಲು ಹೆಚ್ಚಿರುವ ಗ್ರಾಮ ಪಂಚಾಯತಿಗಳಲ್ಲಿ ಕೂಲಿಕಾರರಿಗೆ ಅನುಕೂಲವಾಗುವಂತೆ ಬೆಳಗ್ಗಿನ ಸಮಯದಲ್ಲಿ ಕೆಲಸ ನೀಡುವಂತೆ ಸಭೆಯಲ್ಲಿ ಸೂಚನೆ ನೀಡಿದರು.

ಜಿಯೋ ಟ್ಯಾಗ್ ಮಾಡುವುದು ಸೇರಿದಂತೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಪರಿಶೋಧನೆಯಲ್ಲಿ ಎಟಿಆರ್ ಇತ್ಯರ್ಥಗೊಳಿಸುವುದು ಬಾಕಿ ಇದ್ದು, ವಾರಕ್ಕೆ 2 ಬಾರಿ ಅಡಾಕ್ ಸಮಿತಿ ಸಭೆಗಳನ್ನು ಮಾಡುವುದರ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಕ್ರಮವಹಿಸುವಂತೆ ಎಂದು ನಿರ್ದೇಶನ ನೀಡಿದರು.

ಸ್ವಚ್ಛ ಭಾರತ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಸಮುದಾಯ ಶೌಚಾಲಯಗಳನ್ನು ಒಂದು ವಾರದೊಳಗೆ ಮುಕ್ತಾಯ ಮಾಡಬೇಕು. ಎಸ್‌ಡಬ್ಯುಎಂ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ದಿನ ಕಸ ನಿರ್ವಹಣೆ ಕಾರ್ಯ ಪ್ರಗತಿಯಲ್ಲಿರುಬೇಕು. ವೈಯಕ್ತಿಕ ಶೌಚಾಲಯದ ಪ್ರಗತಿ ಸಾಧಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿಗಳಾದ ರೇಖಾ ಡೊಳ್ಳಿಣವರ, ಬಸವರಾಜ ಅಡವಿಮಠ, ಯೋಜನಾ ನಿರ್ದೇಶಕ ಡಾ.ಎಂ.ಕೃಷ್ಣರಾಜು, ಮುಖ್ಯಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಜಿಲ್ಲೆಯ ಎಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಹಾಗೂ ಪಂಚಾಯತಿ ರಾಜ್ ಹಾಗೂ ಜಿಲ್ಲಾ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

---------------ಬರಗಾಲ ಹಾಗೂ ಚುನಾವಣೆ ಎರಡನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡಿರುವುದು ಹಾಗೂ ಸ್ವೀಪ್ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಮ್ಮಿಕೊಂಡು ಮತದಾನ ಪ್ರಮಾಣ ಹೆಚ್ಚಾಗಿರುವುದಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಭಿನಂದನೆಗಳು.

-ರಾಹುಲ್ ಶಿಂಧೆ, ಜಿಲ್ಲಾ ಪಂಚಾಯತಿ ಸಿಇಒ.

Share this article