ಭದ್ರಾ ಮೇಲ್ದಂಡೆ ಬಾಕಿ ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಡಾ.ರಾಜೇಶ್ ಗೌಡ

KannadaprabhaNewsNetwork |  
Published : Oct 03, 2026, 02:00 AM IST
೧ಶಿರಾ೧: ಡಾ.ಸಿ.ಎಂ.ರಾಜೇಶ್ ಗೌಡ, ಮಾಜಿ ಶಾಸಕರು, ಶಿರಾ. | Kannada Prabha

ಸಾರಾಂಶ

ಎಲ್ಲಾ ೬೩ ಕೆರೆಗಳಿಗೆ ನೀರು ಹರಿಸಬೇಕು, ಶಿರಾಕ್ಕೆ ಹಂಚಿಕೆಯಾಗಿರುವ ನೀರಿನ ಸಂಪೂರ್ಣ ಪಾಲು ದೊರೆಯಬೇಕು, ಗುರುತ್ವಾಕರ್ಷಣೆಯಿಂದ ನೀರು ಹರಿಸಬಹುದಾದ ಹೆಚ್ಚುವರಿ ಕೆರೆಗಳನ್ನೂ ಸೇರಿಸಬೇಕು, ಬಾಕಿ ಕಾಮಗಾರಿಗಳಿಗೆ ಸ್ಪಷ್ಟ ಗಡುವು ನಿಗದಿಪಡಿಸಬೇಕು, ಹನಿ ನೀರಾವರಿ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕು, ಕೇಂದ್ರ ಸರಕಾರ ಘೋಷಿಸಿರುವ ೫೩೦೦ ಕೋಟಿ ನೆರವು ಬಿಡುಗಡೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ

ಬರಪೀಡಿತ ಶಿರಾ ತಾಲೂಕಿನ ಬಹುದಿನಗಳ ನಿರೀಕ್ಷೆ ಭದ್ರಾ ಮೇಲ್ದಂಡೆ ಯೋಜನೆ ಬಾಕಿ ಕಾಮಗಾರಿ ತ್ವರಿತ ಪೂರ್ಣಗೊಳಿಸಿ, ಶಿರಾ ತಾಲೂಕಿಗೆ ಹಂಚಿಕೆಯಾಗಿರುವ ಎಲ್ಲಾ ೬೩ ಕೆರೆಗಳಿಗೆ ನೀರು ಹರಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು. ಜೊತೆಗೆ ತಾಂತ್ರಿಕವಾಗಿ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಲು ಸಾಧ್ಯವಿರುವ ಸಮೀಪದ ಹೆಚ್ಚುವರಿ ಕೆರೆ ಗುರುತಿಸಿ ಅವುಗಳನ್ನೂ ಯೋಜನೆ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಒತ್ತಾಯಸಿದ್ದಾರೆ.

ಪದೇಪದೆ ಬರಗಾಲ ಎದುರಿಸುವ ಈ ಪ್ರದೇಶದಲ್ಲಿ ಕೆರೆಗಳ ಪುನಶ್ಚೇತನ, ಅಂತರ್ಜಲ ಮಟ್ಟ ಹೆಚ್ಚಳ, ಕುಡಿಯುವ ನೀರಿನ ಭದ್ರತೆ ಹಾಗೂ ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಅತ್ಯಂತ ಮಹತ್ವದ ಜೀವನಾಡಿ ಭದ್ರಾ ಮೇಲ್ದಂಡೆ ಜನೆಯಾಗಿದೆ. ತುಂಗಾ-ಭದ್ರಾ ಜಲಮೂಲದಿಂದ ನೀರನ್ನು ಎತ್ತಿ ಅಜ್ಜಂಪುರದ ಮೂಲಕ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ತಲುಪಿಸುವುದು ಈ ಮಹತ್ವಾಕಾಂಕ್ಷಿ ಯೋಜನೆ ಪ್ರಮುಖ ಉದ್ದೇಶ. ಮುಂದಿನ ಹಂತದಲ್ಲಿ ಯೋಜನೆ ವ್ಯಾಪ್ತಿ ವಿಸ್ತರಿಸಿ ತುಮಕೂರು ಜಿಲ್ಲೆ ಶಿರಾ ಭಾಗಕ್ಕೂ ಯೋಜನೆ ಪ್ರಯೋಜನ ಕಲ್ಪಿಸಲಾಯಿತು. ಶಿರಾಕ್ಕೆ ಹಂಚಿಕೆಯಾಗಿರುವ ನೀರಿನ ಮೂಲಕ ಕೆರೆಗಳನ್ನು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವುದರ ಜೊತೆಗೆ, ಹನಿ/ಸೂಕ್ಷ್ಮ ನೀರಾವರಿ ವ್ಯವಸ್ಥೆ ಮೂಲಕ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ನಾನು ಶಿರಾ ಶಾಸಕನಾಗಿದ್ದ ಅವಧಿಯಲ್ಲಿ ಯೋಜನೆ ಶಿರಾ ಭಾಗದ ಕಾಮಗಾರಿಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿ ಕಾಮಗಾರಿಗಳಿಗೆ ವೇಗ ನೀಡಲಾಯಿತು. ನನ್ನ ಅಧಿಕಾರಾವಧಿಯಲ್ಲಿ ಶಿರಾ ಭಾಗಕ್ಕೆ ಸಂಬಂಧಿಸಿದ ಸುಮಾರು ಶೇ.೮೦ ಕಾಮಗಾರಿ ಪೂರ್ಣಗೊಂಡಿತ್ತು. ಈಗ ಉಳಿದಿರುವ ಕಾಮಗಾರಿ ವಿಳಂಬ ಮಾಡದೆ ಪೂರ್ಣಗೊಳಿಸಿ, ಯೋಜನೆ ನೈಜ ಪ್ರಯೋಜನ ಜನರಿಗೆ ತಲುಪಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.ಎಲ್ಲಾ ೬೩ ಕೆರೆಗಳಿಗೆ ನೀರು ಹರಿಸಬೇಕು, ಶಿರಾಕ್ಕೆ ಹಂಚಿಕೆಯಾಗಿರುವ ನೀರಿನ ಸಂಪೂರ್ಣ ಪಾಲು ದೊರೆಯಬೇಕು, ಗುರುತ್ವಾಕರ್ಷಣೆಯಿಂದ ನೀರು ಹರಿಸಬಹುದಾದ ಹೆಚ್ಚುವರಿ ಕೆರೆಗಳನ್ನೂ ಸೇರಿಸಬೇಕು, ಬಾಕಿ ಕಾಮಗಾರಿಗಳಿಗೆ ಸ್ಪಷ್ಟ ಗಡುವು ನಿಗದಿಪಡಿಸಬೇಕು, ಹನಿ ನೀರಾವರಿ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕು, ಕೇಂದ್ರ ಸರಕಾರ ಘೋಷಿಸಿರುವ ೫೩೦೦ ಕೋಟಿ ನೆರವು ಬಿಡುಗಡೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯ 11 ಗ್ರಾಮಗಳಿಗೆ ಗಾಂಧಿ ಪುರಸ್ಕಾರ
ಜೀವನ ಚೈತನ್ಯಕ್ಕೆ ಗಾಂಧೀಜಿ ಆದರ್ಶ ಬೇಕು