)
ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯಾದಗಿರಿ ವಿಭಾಗದ ಗುರುಮಠಕಲ್ ಘಟಕದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅ.3 ರಿಂದ ಗುರುಮಠಕಲ್ -ಮುಂಬೈ ನೂತನ ಬಸ್ ಅನುಸೂಚಿಯನ್ನು ಪ್ರಾರಂಭಿಸಲಾಗುತ್ತಿದೆ. ಗುರುಮಠಕಲ್‌ನಿಂದ ಹೊರಡುವ ಸಮಯ ಮಧ್ಯಾಹ್ನ 14:00 (2:00), ಮುಂಬೈ ತಲುಪುವ ಸಮಯ ಬೆಳಿಗ್ಗೆ 06:30, ಮುಂಬಯಿಯಿಂದ ಹೊರಡುವ ಸಮಯ ಮಧ್ಯಾಹ್ನ 14:45 (2:45), ಗುರುಮಠಕಲ್ ತಲುಪುವ ಸಮಯ ಬೆಳಿಗ್ಗೆ 07:15 ಆಗಿರುತ್ತದೆ. ಈ ಬಸ್ಸು ಗುರುಮಠಕಲ್, ಸೇಡಂ, ಕಲಬುರಗಿ, ಆಳಂದ, ಸೋಲಾಪೂರ, ಪೂನಾ ಮಾರ್ಗವಾಗಿ ಮುಂಬಯಿ ತಲುಪಲಿದೆ. ಮರಳಿ ಬರುವಾಗಲೂ ಇದೇ ಮಾರ್ಗದಲ್ಲಿ ಗುರುಮಠಕಲ್‌ಗೆ ಆಗಮಿಸಲಿದೆ. ಇನ್ನು, ಶೀಘ್ರದಲ್ಲಿ ನೂತನವಾಗಿ ಯಾದಗಿರಿ ಘಟಕದಿಂದ ಯಾದಗಿರಿ-ಶಹಾಪುರ-ಲಿಂಗಸುಗೂರು -ಗಂಗಾವತಿ-ಹೊಸಪೇಟೆ-ಹರಿಹರ-ರಾಣೇಬೆನ್ನೂರು ಮಾರ್ಗವಾಗಿ ಹಾವೇರಿಗೆ ನೂತನವಾಗಿ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯಾದಗಿರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
* ಅ.9 ರಂದು ಡಾಕ್ ಅದಾಲತ್
ಯಾದಗಿರಿ: ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ ಮತ್ತು ಅಂಚೆ ಗ್ರಾಹಕರಿಗೆ ಸಂಬಂಧಿಸಿದ ದೂರುಗಳ ಪರಿಹಾರಕ್ಕಾಗಿ ಅಂಚೆ ಅಧೀಕ್ಷಕರ ಕಾರ್ಯಾಲಯದ ವತಿಯಿಂದ ಅ.9 ರಂದು ಬೆ. 11 ಗಂಟೆಗೆ ಡಾಕ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂಚೆ ಸೇವೆಗಳಿಗೆ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆಗಳು ಅಥವಾ ದೂರುಗಳಿದ್ದಲ್ಲಿ, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ತಮ್ಮ ದೂರುಗಳನ್ನು ವಿವರವಾಗಿ ಬರೆದು ಅಂಚೆ ಮೂಲಕ ಅಥವಾ ಖುದ್ದಾಗಿ ಅಂಚೆ ಅಧೀಕ್ಷಕರು, ಯಾದಗಿರಿ ವಿಭಾಗ, ಯಾದಗಿರಿ-585201 ಅವರಿಗೆ ಸಲ್ಲಿಸಬಹುದಾಗಿದೆ. ದೂರುಗಳು ಅ.8 ರಂದು ಸಂಜೆ 16:00 ಗಂಟೆಯೊಳಗೆ ತಲುಪುವಂತೆ ಕಳುಹಿಸಬೇಕು. ಇ-ಮೇಲ್ ಮೂಲಕ ದೂರು ಸಲ್ಲಿಸಲು ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಅಧಿಕೃತ ಇ-ಮೇಲ್ doyadgiri.ka@indiapost.gov.in ವಿಳಾಸಕ್ಕೆ ಕಳುಹಿಸಬಹುದು. ಈ ಅದಾಲತ್‌ನಲ್ಲಿ ನೇರವಾಗಿ ಅನ್‌ಲೈನ್ ಮೂಲಕ (ವೀಡಿಯೋ ಕಾನ್ಫರೆನ್ಸ್) ಭಾಗವಹಿಸಲು ಇಚ್ಚಿಸುವ ಸಾರ್ವಜನಿಕು ವೀಡಿಯೋ ಕಾನ್ಫರೆನ್ಸ್ ಲಿಂಕ್ https://meet.google.com/hke-uxpg-wux ನ್ನು ಬಳಸಿ ನಿಗದಿತ ಸಮಯದಲ್ಲಿ ಸಭೆಗೆ ಸೇರಬಹುದಾಗಿದೆ. ಯಾದಗಿರಿ ವಿಭಾಗದ ಸಾರ್ವಜನಿಕರು ಹಾಗೂ ಅಂಚೆ ಗ್ರಾಹಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಯಾದಗಿರಿ ಅಂಚೆ ವಿಭಾಗದ ಅಧೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.===
ಯಾದಗಿರಿ : ಭಾರತ ಚುನಾವಣಾ ಆಯೋಗವು ಸೆ. 22 ರಂದು ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳಾಪಟ್ಟಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಮತ್ತು ಮಾರ್ಗದರ್ಶಿ ಸೂಚಿಗಳ ಉಲ್ಲಂಘನೆಯಾಗದಂತೆ ತಡೆಯಲು ಹಾಗೂ ಸಾರ್ವಜನಿಕರಿಗೆ ದೂರು ನೀಡಲು ಅನುಕೂಲವಾಗುವಂತೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ದೂರು ಮೇಲ್ವಿಚಾರಣಾ ಕೋಶ ವನ್ನು ತೆರೆಯಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಾರ್ವಜನಿಕರು ದೂರವಾಣಿ ಸಂಖ್ಯೆ: 08472-200255 ಮೂಲಕ ಅಥವಾ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ, ಚುನಾವಣಾ ಶಾಖೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಸ್ಟೇಷನ್ ರಸ್ತೆ, ಕಲಬುರಗಿ-585102 ಲಿಖಿತವಾಗಿ ದೂರು ಸಲ್ಲಿಸಬಹುದಾಗಿದೆ. ಸಾರ್ವಜನಿಕರು ಹಾಗೂ ಭಾಗೀದಾರರು ಈ ಸೌಲಭ್ಯವನ್ನು ಬಳಸಿಕೊಂಡು ಉಲ್ಲಂಘನೆಗಳ ಕುರಿತು ದೂರು ನೀಡಬಹುದು ಎಂದು ಚುನಾವಣಾಧಿಕಾರಿಗಳು ಹಾಗೂ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಪ್ರಾದೇಶಿಕ ಆಯುಕ್ತರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.